Saturday, December 6, 2025
Saturday, December 6, 2025

Race Track Madras Motors Sports Club ಶಿವಮೊಗ್ಗದ ಡಾ.ದಿನೇಶ್ ಗೆ ಕಾರ್ ‌ರ್ಯಾಲಿಯಲ್ಲಿ‌ ದ್ವಿತೀಯ ಸ್ಥಾನ

Date:

Race Track Madras Motors Sports Club ರೇಸ್ ಟ್ರ್ಯಾಕ್ ಮದ್ರಾಸ್ ಮೋಟಾರ್ಸ್ ಸ್ಪೋರ್ಟ್ಸ್ ಕ್ಲಬ್ ನವರು ತಮಿಳುನಾಡು ಪೆರಂಭದೂರು ನಲ್ಲಿ ನಡೆಸಿದ ಏಷ್ಯನ್ ಕಾರ್ ರ‍್ಯಾಲಿ ಚಾಂಪಿಯನ್ ಶಿಪ್ ಮತ್ತು ಇಂಡಿಯನ್ ನ್ಯಾಷನಲ್ ರ‍್ಯಾಲಿ ಚಾಂಪಿಯನ್ ಶಿಪ್ ನಲ್ಲಿ ಶಿವಮೊಗ್ಗದ ಡಾ. ದಿನೇಶ್ ಹಾಗೂ ಭದ್ರಾವತಿ ಮೂಲದವರಾದ ಸತೀಶ್ ಇವರುಗಳಿಗೆ ರಾಷ್ಟ್ರೀಯ ಕಾರ್ ಚಾಂಪಿಯನ್‌ ಶಿಪ್ ಕ್ಲಾಸಿಕ್ ಕಾರ್ ಹೋಂಡಾ ಸಿಟಿ ವಿ ಟೆಕ್ 1.6 ಲೀಟರ್ ವಿಭಾಗದ ಕೆಟಗರಿಯಲ್ಲಿ ಕಾರ್ ಚಲಾಯಿಸಿ ರಾಷ್ಟ್ರಮಟ್ಟದಲ್ಲಿ ರನ್ನರ್ ಅಪ್ ಆಗಿ ದ್ವಿತೀಯ ಸ್ಥಾನ, ಪ್ರಶಸ್ತಿ ಪತ್ರ ಹಾಗೂ ಟ್ರೋಫಿಯನ್ನು ಪಡೆದು ಜಯಶೀಲರಾಗಿ ಮುಂದಿನ ಸುತ್ತಿಗೆ ಆಯ್ಕೆಯಾಗಿದ್ದಾರೆ.

ಡಾ. ದಿನೇಶ್ ಅವರು ಈಗಾಗಲೇ ದ್ವಿಚಕ್ರ ವಾಹನ ಹಾಗೂ ಕಾರ್ ಗಳ ವಿಭಾಗದಲ್ಲಿ ನೂರಾರು ರ್‍ಯಾಲಿಗಳಲ್ಲಿ ಭಾಗವಹಿಸಿ ನಾಲ್ಕು ಬಾರಿ ರಾಷ್ಟ್ರಮಟ್ಟದಲ್ಲಿ ಚಾಂಪಿಯನ್ ಆಗಿ ಪ್ರಶಸ್ತಿಯನ್ನ ಪಡೆದಿದ್ದಾರೆ. ಜೊತೆಗೆ ಸಾಕಷ್ಟು ರ್‍ಯಾಲಿಗಳನ್ನು ಕೂಡ ಆಯೋಜಿಸಿದ್ದಾರೆ. ಕಳೆದ ವರ್ಷ ಅರುಣಾಚಲ ಪ್ರದೇಶದಲ್ಲಿ ನಡೆದ ರಾಷ್ಟ್ರಮಟ್ಟದ ರ‍್ಯಾಲಿಯಲ್ಲಿ ಕೂಡ ಎರಡನೇ ಸ್ಥಾನವನ್ನ ಗಳಿಸಿದ್ದಾರೆ. ಸುಮಾರು 34 ವರ್ಷಗಳಿಂದ ಈ ಕಾರ್ ಹಾಗೂ ಬೈಕ್ ರ್‍ಯಾಲಿಗಳಲ್ಲಿ ಭಾಗವಹಿಸುವುದರ ಮುಖಾಂತರ ಪ್ರಶಸ್ತಿಗಳನ್ನು ಮುಡಿಗೇರಿಸಿ, ಶಿವಮೊಗ್ಗ ಜಿಲ್ಲೆಗೆ ಕೀರ್ತಿಯನ್ನು ತಂದಿದ್ದಾರೆ.

Race Track Madras Motors Sports Club ಇವರಿಗೆ ಆಯೋಜಕರಾದ ಮದ್ರಾಸ್ ಮೋಟಾರ್ಸ್ ಸ್ಪೋರ್ಟ್ಸ್ ಕ್ಲಬ್ ನ ವಿಕ್ಕಿ ಚಂದುಕ್ ಮತ್ತು ವಂಸಿ ಮರೆಲಾ ಇವರುಗಳು ಬಹುಮಾನ ನೀಡಿ ಗೌರವಿಸಿದರು. ಈ ರ್ಯಾಲಿಯಲ್ಲಿ ಭಾಗವಹಿಸಲು ಪ್ರಾಯೋಜಕತ್ವವನ್ನು ವಂಶಿ ಮರೆಲಾ ಅವರು ಸಹಕರಿಸಿದ್ದಾರೆ. ವಿಜೇತರಿಗೆ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್, ನವೀನ್, ಕೆ.ರಂಗನಾಥ್, ನಾಗರಾಜ್ ಕಂಕಾರಿ, ಸುನಿಲ್ ಕುಮಾರ್, ಜಗದೀಶ್, ಡಾ. ಶಿಶಿರ ಹಾಗೂ ಸ್ನೇಹಿತರು ಅಭಿನಂಡಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...