ದುಡ್ ಬೇಕಾ..! ಎನ್ನುವ ಪ್ರಶ್ನೆಗೆ ಬೇಡ ಎನ್ನುವವರು ಯಾರು ಇಲ್ಲ. ಇಂತಹ ಹುಬ್ಬೆರುವಂತಹ ಶೀರ್ಷಿಕೆಯನ್ನು ಹೊತ್ತ ‘ದುಡ್ ಬೇಕಾ’ ಚಿತ್ರವನ್ನು ಶಿವಮೊಗ್ಗದ ಹುಡುಗ ಮಧು ಶಿವಮೊಗ್ಗ ರಚಿಸಿ ನಿರ್ದೇಶಿಸಿದ್ದಾರೆ. ಹೆಚ್. ಎಸ್. ರಾಜೇಶ್ ಗೌಡರವರು ನಿರ್ಮಿಸಿದ್ದಾರೆ. ಈ ಚಿತ್ರಕ್ಕೆ ಹೆಚ್. ಎಸ್. ಅರುಣ್ ರವರ ಸಂಗೀತ ಹಾಗು ಬಿ. ಜಿ. ಸಚಿನ್ ಅವರ ಛಾಯಾಗ್ರಹಣವಿದೆ.
ಈ ಚಿತ್ರವನ್ನು ಶಿವಮೊಗ್ಗ ಸುತ್ತಮುತ್ತಲಿನ ಮಲೆನಾಡಿನ ಸುಂದರ ವಾತಾವರಣದಲ್ಲಿ ಚಿತ್ರಿಸಲಾಗಿದೆ. ಚಿತ್ರದ ಕಥಾನಾಯಕ `ಸೂರ್ಯ’ ತನ್ನ ತಾಯಿ ಆಸೆಯಂತೆ ಸರ್ಕಾರಿ ನೌಕರಿ ಪಡೆಯಲು ಪ್ರಯತ್ನಿಸುತ್ತಿರುವ ಹುಡುಗ. ಸೂರ್ಯನ ಸ್ನೇಹಿತ, ಸತೀಶ ಸೂರ್ಯನಿಂದ ಸ್ವಲ್ಪ ಹಣ ತೆಗೆದುಕೊಂಡು ಹಿಂದಿರುಗಿಸಲು ವಿಳಂಬ ಮಾಡುವುದರೊಂದಿಗೆ ಕಥೆ ಆರಂಭವಾಗುತ್ತದೆ. ಸೂರ್ಯ ಸತೀಶನಿಗೆ ಕೊಟ್ಟು ಕಳೆದುಕೊಂಡ ಸಣ್ಣ ಮೊತ್ತದ ಬಗ್ಗೆ ಚಿಂತಿಸುತ್ತಿರುವಾಗ, ಸ್ವಾಮಿ ಎಂಬ ರೌಡಿ ಕಥೆಗೆ ಪ್ರವೇಶಿಸಿ, ಕಥೆಯು ಇನ್ನೊಂದು ತಿರುವು ತೆಗೆದುಕೊಳ್ಳುತ್ತದೆ. ಒಂದೆಡೆ ಪ್ರೇಮಕಥೆ. ಮತ್ತೊಂದೆಡೆ ತಾಯಿಯ ಆರೋಗ್ಯ ಸಮಸೆ, ಇನ್ನೊಂದೆಡೆ ಹಿಂತಿರುಗದ ಸಾಲ.. ಇವುಗಳ ಮಧ್ಯದ ಅವನ ಒದ್ದಾಟದಲ್ಲಿ ಹಣವು ಮನುಷ್ಯನಿಗೆ ಎಷ್ಟು ಮುಖ್ಯ..? ಹಣಕ್ಕೆ ಎಷ್ಟು ಪ್ರಾಮುಖ್ಯತೆ ಕೊಟ್ಟರೆ ಒಳ್ಳೆಯದು ? ಮಾನವ ನಿರ್ಮಿತ ದುಡ್ಡಿಗೆ ಮಾನವ ಹೇಗೆ ಬಲಿ..! ಎಂಬ ಸಾರಾಂಶಗಳನ್ನು ಈ ಚಿತ್ರ ಬಿಂಬಿಸುತ್ತದೆ..
ಈ ಚಿತ್ರದ ಮುಖ್ಯಭೂಮಿಕೆಯಲ್ಲಿ ಮಧು ಶಿವಮೊಗ್ಗ, ಮೇಘ ಗೌಡ, ಪೂರ್ಣಿಮ ಪ್ರಸನ್ನ ಹಾಗು ಶ್ರೀಕಾಂತ್ ಮುರುಂಡಿ ನಟಿಸಿದ್ದಾರೆ. ಹಾಗು ಸಹಕಲಾವಿದರಾಗಿ ನವನ್ ಶ್ರೀನಿವಾಸ್, ದಾನಂ ಶಿವಮೊಗ್ಗ, ಶಿವಮೊಗ್ಗ ರಾಮಣ್ಣ, ಬಿ. ವಿ. ತಿಪ್ಪಣ್ಣ, ಹೆಚ್. ಎಸ್.ರಾಜೇಶ್ ಗೌಡ, ಸುದೀಪ್, ಜೆ. ಕೆ. ನಾಯಕ್, ಪ್ರಸನ್ನ, ವಿ. ಬಿ. ಸತೀಶ್ ಮಾಸ್ಟರ್, ಮಂಜು ರಂಗಾಯಣ, ಟಿ. ಮನು, ರಾಜ ನಾಯ್ಕ್ ಹಾಗೂ ಇನ್ನಿತರ ಶಿವಮೊಗ್ಗ ಕಲಾವಿದÀರು ನಟಿಸಿದ್ದಾರೆ.
ಈ ಚಿತ್ರವೂ ಹಾಸ್ಯ ಹಾಗು ಡ್ರಾಮ ಪ್ರಕಾರವಾಗಿದ್ದು, ಪ್ರೀತಿ-ಪ್ರೇಮ ಎಂದೆಲ್ಲಾ ಲವಲವಿಕೆ ಇಂದ ಶುರುವಾಗಿ ಕಥೆಯು ಸಾಗುತಿದ್ದಂತೆ ಗಂಭೀರವಾಗುತ್ತಾ ಭಾವನಾತ್ಮಕವಾಗಿ ಕೊನೆಗೊಳ್ಳುತ್ತದೆ.
ದುಡ್ ಬೇಕಾ ಚಿತ್ರವೂ ಏಪ್ರಿಲ್ ೧೧ ರಿಂದ “ನಮ್ಮ ಫ್ಲಿಕ್ಸ್” ನಲ್ಲಿ ವೀಕ್ಷಿಸಲು ಲಭ್ಯವಿದೆ.
“ಓಟಿಟಿ” ಯಲ್ಲಿ ಶಿವಮೊಗ್ಗ ಮಧು ನಿರ್ದೇಶನದ “ದುಡ್ ಬೇಕಾ?” ಸಿನಿಮಾ ಬಿಡುಗಡೆ
Date:
