Wednesday, December 17, 2025
Wednesday, December 17, 2025

Babu Jagjivanram ಹಸಿರು ಕ್ರಾಂತಿಯ ಪಿತಾಮಹ, ಸೇವಾಮಯಿ ಬಾಬು ಜಗಜೀವನ್ ರಾಂ- ಮಧುಬಂಗಾರಪ್ಪ

Date:

Babu Jagjivanram ಡಾ.ಬಾಬು ಜಗಜೀವನರಾಮ್‌ರವರು ಓರ್ವ ಸಕ್ರಿಯ ರಾಜತಂತ್ರಜ್ಞ, ದಕ್ಷ ಆಡಳಿತಾರರಾಗಿ ಅನೇಕ ಖಾತೆಗಳನ್ನು ನಿರ್ವಹಿಸಿದರೂ ಜೀವನಪರ್ಯಂತ ಸೇವಾಮಯಿಯಾಗೇ ಉಳಿದು ನಮ್ಮೆಲ್ಲರಿಗೂ ಮಾದರಿಯಾಗಿದ್ದಾರೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಮಧು ಬಂಗಾರಪ್ಪ ಬಣ್ಣಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಕುವೆಂಪು ರಂಗಮಂದಿರದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಹಸಿರು ಕ್ರಾಂತಿಯ ಹರಿಕಾರ, ಭಾರತದ ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನ ರಾಮ್‌ರವರ 118 ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಗಜೀವನರಾಮ್‌ರವರು ದಕ್ಷ ಆಡಳಿತಗಾರ, ಸಮಾಜ ಸುಧಾರಕ. ಹಸಿರು ಕ್ರಾಂತಿಯ ಪಿತಾಮಹರಾಗಿದ್ದು, ಆಹಾರ ರಂಗದಲ್ಲಿ ಸ್ವಾವಲಂಬನೆ ಹೊಂದಲು ಮಾರ್ಗದರ್ಶನ ನೀಡಿದ ಕೀರ್ತಿವಂತ. ಹರಿಜನ/ಗಿರಿಜನ ಮತ್ತು ಹಿಂದುಳಿದ ಪಂಗಡಗಳ, ಅಲ್ಪಸಂಖ್ಯಾತ ವರ್ಗಗಳ ಕಲ್ಯಾಣಕ್ಕಾಗಿ ಶ್ರಮಿಸಿದ ನೆಚ್ಚಿನ ರಾಜಕೀಯ ಮುತ್ಸದ್ದಿ. ನಿಸ್ವಾರ್ಥ ದೇಶ ಸೇವೆಗೆ ಸಮರ್ಪಿಸಿಕೊಂಡ ಇವರು ಸುಮಾರು 32 ಖಾತೆಗಳನ್ನು ನಿರ್ವಹಿಸಿದರೂ ವೈಯಕ್ತಿಕ ಜೀವನದಲ್ಲಿ ಬಡವರಾಗೇ ಸೇವಾಮಯಿಯಾಗಿ ಉಳಿದರು ಎಂದು ಸ್ಮರಿಸಿದರು.
ನಮ್ಮ ಸಂವಿಧಾನಕ್ಕೆ ಡಾ. ಅಂಬೇಡ್ಕರ್, ಬಾಬು ಜಗಜೀವನ್‌ರಾಮ್ ಸೇರಿದಂತೆ ಅನೇಕ ಮಹನೀಯರ ಕೊಡುಗೆ ಇದೆ. ನಮ್ಮ ಸಂವಿಧಾನ ಮೂಲಭೂತ ಹಕ್ಕುಗಳನ್ನು ನೀಡಿವುದರಿಂದಲೇ ನಾವಿಂದು ಸ್ವತಂತ್ರವಾಗಿ ಪ್ರಶ್ನಿಸುವ ಮತ್ತು ಉತ್ತರಿಸುವ ಹಕ್ಕನ್ನು ಹೊಂದಿದ್ದೇವೆ. ಮಾನವೀಯ ಹಕ್ಕುಗಳೇ ಸಂವಿಧಾನದ ಮೂಲಾಧಾರವಾಗಿದ್ದು, ಶಿಕ್ಷಣ ಇಲಾಖೆಯ 1 ರಿಂದ 12 ನೇ ತರಗತಿವರೆಗೆ ಸುಮಾರು 1.8 ಕೋಟಿ ವಿದ್ಯಾರ್ಥಿಗಳು ಪ್ರತಿದಿನ ಬೆಳಿಗ್ಗೆ ಸಂವಿಧಾನ ಪೀಠಿಕೆಯನ್ನು ಓದಲು ಸರ್ಕಾರ ಆದೇಶಿಸಿದೆ.
ನಮ್ಮ ಸರ್ಕಾರ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದೊಂದಿಗೆ ಪೌಷ್ಟಿಕ ಆಹಾರ ಕೂಡ ನೀಡುತ್ತಿದೆ. ರಾಜ್ಯದಲ್ಲಿ ಆರ್ಥಿಕವಾಗಿ ಹಿಂದುಳಿದವರೆಲ್ಲ ಮುಂದೆ ಬರಬೇಕೆಂದು ಯಾವುದೇ ತಾರತಮ್ಯ, ಮತಬೇಧವಿಲ್ಲದೇ ಎಲ್ಲರಿಗೂ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದು ಅರ್ಹರೆಲ್ಲ ಸೌಲಭ್ಯ ಪಡೆಯುತ್ತಿದ್ದಾರೆ.
Babu Jagjivanram ಸಂಘಟನೆಗಳು ಹಿರಿಯರ ಮಾರ್ಗದರ್ಶನಿದಂದ ಶಕ್ತಿ ಪಡೆಯಬೇಕು. ಸಂಘಟನೆಗಳು ಶಕ್ತಿಯಾಗಿ ಹೊರ ಹೊಮ್ಮಬೇಕು. ನಗರದಲ್ಲಿ ಬಾಬು ಜಗಜೀವನರಾಮ್‌ರವರ ಪುತ್ಥಳಿ ಪ್ರತಿಷ್ಟಾಪನೆ ಬಗ್ಗೆ ಕ್ರಮ ವಹಿಸುತ್ತೇನೆ. ಡಾ.ಬಾಬು ಜಗಜೀವನರಾಮ್‌ರವರಿಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿ ನೀಡಲು ಶಿಫಾರಸು ಮಾಡುವಂತೆ ಮನವಿ ಸಲ್ಲಿಕೆಯಾಗಿದ್ದು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವ ಕುರಿತು ಮಾನ್ಯ ಮುಖ್ಯಮಂತ್ರಿಗಳು, ಚಿಂತಕರ ಜೊತೆ ಚರ್ಚಿಸಿ ಕ್ರಮ ವಹಿಸಲಾಗುವುದು. ಜಿಲ್ಲಾ ಉಸ್ತುವಾರಿ ಸಚಿವನಾದ ನಾನು ನಿಮ್ಮ ಯಾವುದೇ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ. ನಿಮ್ಮ ಜೊತೆ ಇದ್ದೇನೆ. ಸರ್ಕಾರ ನಿಮ್ಮ ಜೊತೆ ಇದೆ ಎಂದ ಅವರು ಎಸ್‌ಸಿ ಎಸ್‌ಟಿ ಶಿಕ್ಷಣ ಸಂಸ್ಥೆಗಳ ಕುಂದು ಕೊರತೆಗಳನ್ನು ಆಲಿಸಿ, ಉಳಿಸುವ ಭರವಸೆ ನೀಡಿದರು.
ಮೈಸೂರಿನ ಸಾಹಿತಿಗಳು ಹಾಗೂ ಸಮುದಾಯ ಚಿಂತಕರಾದ ದಾಸನೂರು ಕೂಸಣ್ಣ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಡಾ.ಬಾಬು ಜಗಜೀವನರಾಮ್‌ರವರು ದೇಶಕ್ಕಾಗಿ, ಸಮಾಜಕ್ಕಾಗಿ ತಮ್ಮನ್ನು ತೊಡಗಿಸಿಕೊಂಡ ದಿವ್ಯ ಚೇತನ. ಅತ್ಯಂತ ಬಡ ಕುಟುಂಬದಿAದ ಬಂದ ಇವರು 1908 ರ ಏಪ್ರಿಲ್ 5 ರಂದು ಬಿಹಾರ್ ರಾಜ್ಯದ ರ‍್ಹಾನಗರದ ಹತ್ತಿರದ ಚಂದವಾ ಗ್ರಾಮದಲ್ಲಿ ಜನಿಸಿದರು. ಓದುವಾಗಲೇ ಅವರಿಗೆ ಅಸ್ಪೃಶ್ಯ ಆಚರಣೆ ಬಗ್ಗೆ ಜಿಜ್ಞಾಸೆ ಕಾಡಿತು. ಆದ್ದರಿಂದ ಅವರು ಚಿಕ್ಕವಯಸ್ಸಿನಲ್ಲೇ ಸಂಸ್ಕೃತ ಕಲಿತು ಈ ಕುರಿತು ಅಧ್ಯಯನ ಮಾಡಿದರು. ಕುಡಿಯುವ ನೀರಿನ ಕುರಿತು ಶಾಲೆಯಲ್ಲಿ ಮಾಡುತ್ತಿದ್ದ ತಾರತಮ್ಯವನ್ನು ತಮ್ಮದೇ ರೀತಿಯಲ್ಲಿ ಪ್ರತಿಭಟಿಸಿದರು.
ರಾಜಕೀಯ ಜೀವನ ಪ್ರವೇಶಿಸಿದ ಅವರು ಅನೇಕ ಮುಖ್ಯ ಖಾತೆಗಳನ್ನು ನಿರ್ವಹಿಸಿ ಬಡವರಿಗೆ, ಹಿಂದುಳಿದ ವರ್ಗಗಳಿಗೆ ಅನೇಕ ಕಾರ್ಯಕ್ರಮಗಳನ್ನು ನೀಡಿ ಬದಲಾವಣೆ ತಂದ ಅವರು ದೇಶದ ಶಕ್ತಿ ಮತ್ತು ಬಡವರ ಬೆಳಕಾಗಿದ್ದಾರೆ. ಅಂಬೇಡ್ಕರ್ ಮತ್ತು ಜಗಜೀವನರಾಂ ತಮ್ಮದೇ ನೆಲೆಯಲ್ಲಿ ದೇಶಕ್ಕಾಗಿ ಹೋರಾಡಿದ ಎರಡು ಕಣ್ಣುಗಳು. ರಾಷ್ಟçದಲ್ಲಿ ಸಹೋದರತ್ವ ಹಂಚಿದವರು.
ರೈಲ್ವೇ, ಕಾರ್ಮಿಕ ಸಚಿವರಾದಾಗ ಅನೇಕ ಜನೋಪಯೋಗಿ ಕಾರ್ಯಕ್ರಮಗಳನ್ನು ನೀಡಿದರು. ಕಾರ್ಮಿಕರಿಗೆ ಭದ್ರ ನೆಲೆ ಒದಗಿಸಿದರು. ರೈಲ್ವೇ ಇಂದು ಇಷ್ಟೊಂದು ಆದಾಯ ಪಡೆಯುತ್ತಿದ್ದರೆ ಅದಕ್ಕೆ ಕಾರಣ ಜಗಜೀವನರಾಮ್‌ರವರು. ರೈಲ್ವೆಯಲ್ಲಿ ತಾರತಮ್ಯ ತೆಗೆದು ಹಾಕಿದರು. 2 ಬಾರಿ ಕೃಷಿ ಸಚಿವರಾದ ವೇಳೆ ಬಡತನ ಹೋಗಲಾಡಿಸಿ ಆಹಾರ ಭದ್ರತೆ ಒದಗಿಸಲು ಶ್ರಮಿಸಿದರು. ಹೈನುಗಾರಿಕೆ, ಸಹಕಾರ ಕ್ಷೇತ್ರದಲ್ಲಿ ಹಲವು ಆವಿಷ್ಕಾರ ತಂದರು. ಅವರೊಬ್ಬ ಮೇಧಾವಿ ಮುತ್ಸದ್ದಿ ಎಂದು ಕೊಂಡಾಡಿದ ಅವರು ಪ್ರಸ್ತುತ ಎಸ್‌ಸಿ ಎಸ್‌ಟಿ ಶಿಕ್ಷಣ ಸಂಸ್ಥೆಗಳನ್ನು ಉಳಿಸುವ ಕೆಲಸ ಮಾಡಬೇಕೆಂದು ಉಸ್ತುವಾರಿ ಸಚಿವರಲ್ಲಿ ಮಾಡಿದರು.
ಇದೇ ವೇಳೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಪ್ರಕಟಿಸಿದ ‘ಗ್ಯಾರಂಟಿ ಸರ್ಕಾರದ ವಿಕಾಸ ಪಥ’ ಕಿರು ಪುಸ್ತಕವನ್ನು ಜಿಲ್ಲಾ ಉಸ್ತುವಾರಿ ಸಚಿವರು ಬಿಡುಗಡೆ ಮಾಡಿದರು. ಹಾಗೂ ಭದ್ರಾವತಿಯ ಸಿದ್ದಾರ್ಥ ಅಂಧರ ಕೇಂದ್ರದ ಮುಖ್ಯಸ್ಥರಾದ ಶಿವಬಸಪ್ಪ ಇವರನ್ನು ಸನ್ಮಾನಿಸಿದರು.
ಅಧ್ಯಕ್ಷತೆಯನ್ನು ಶಿವಮೊಗ್ಗ ನಗರ ಕ್ಷೇತ್ರದ ಶಾಸಕರಾದ ಎಸ್.ಎನ್.ಚನ್ನಬಸಪ್ಪ ವಹಿಸಿದ್ದರು. ವಿಧಾನ ಪರಿಷತ್ ಶಾಸಕರಾದ ಬಲ್ಕೀಶ್ ಬಾನು, ಎಂಎಡಿಬಿ ಅಧ್ಯಕ್ಷರಾದ ಆರ್ ಎಂ ಮಂಜುನಾಥಗೌಡ, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷರಾದ ಚಂದ್ರಭೂಪಾಲ್, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿ.ಪಂ ಸಿಇಓ ಎನ್ ಹೇಮಂತ್, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಡಿ.ಮಲ್ಲೇಶಪ್ಪ, ದಲಿತ ಸಂಘಟನೆಗಳ ಮುಖಂಡರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Scheduled Castes Welfare Department ಮಾನಿಸಿಕ ಒತ್ತಡ ನಿರ್ವಹಣೆ ಬಗ್ಗೆ ಆನ್ ಲೈನ್ ಪಾಡ್ ಕ್ಯಾಸ್ಟ್ ವಿಡಿಯೊ ಸಂವಾದ

Scheduled Castes Welfare Department ಶಿವಮೊಗ್ಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,...

Kuvempu University ಶ್ರೀಕಾಂತ್ ಬಿರಾದಾರ್ ಅವರಿಗೆ ಕುವೆಂಪು ವಿವಿ ಡಾಕ್ಟರೇಟ್ ಪದವಿ

Kuvempu University ಮೂಡಲಗಿ ಶ್ರೀ ಶ್ರೀಪಾದಬೋಧ ಸ್ವಾಮೀಜಿ ಸರ್ಕಾರಿ ಪ್ರಥಮ ದರ್ಜೆ...

Karnataka Information Commission ಡಿಸೆಂಬರ್ 20. ರಾಜ್ಯ ಮಾಹಿತಿ ಆಯುಕ್ತರ ಶಿವಮೊಗ್ಗ ಜಿಲ್ಲಾ ಪ್ರವಾಸ ಮಾಹಿತಿ

Karnataka Information Commission ರಾಜ್ಯ ಮಾಹಿತಿ ಆಯೋಗದ ಆಯುಕ್ತರಾದ ರುದ್ರಣ್ಣ ಹರ್ತಿಕೋಟೆ...

B.Y. Raghavendra ವೈಯಕ್ತಿಕವಾಗಿ ಕುಟುಂಬದ ಹಿರಿಯರನ್ನ ಕಳೆದುಕೊಂಡಂತಾಗಿದೆ, ಶಾಮನೂರು ನಿಧನಕ್ಕೆ ಬಿ.ವೈ.ರಾಘವೇಂದ್ರ ಕಂಬನಿ

B.Y. Raghavendra ಅಖಿಲಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರು, ಹಿರಿಯ...