Bhadra Command Area Development Authority ನೀರು ಬಳಕೆದಾರರ ಸಹಕಾರ ಸಂಘಗಳ ಮೂಲಕ ನೀರಿನ ಸದ್ಬಳಕೆ ಕಾರ್ಯ ಆಗುತ್ತಿದ್ದು ಇವು ಸ್ವಾಯತ್ತ ಸಂಸ್ಥೆಗಳAತೆ ಕೆಲಸ ಮಾಡುತ್ತಿವೆ ಎಂದು ಕಾಡಾ ಅಧ್ಯಕ್ಷರಾದ ಡಾ. ಕೆ.ಪಿ.ಅಂಶುಮಂತ್ ಶ್ಲಾಘಿಸಿದರು.
ಮಲವಗೊಪ್ಪದ ಕಾಡಾ ಕಚೇರಿಯಲ್ಲಿ ನೀರು ಬಳಕೆದಾರರ ಸಂಘಗಳಿಗೆ ಏರ್ಪಡಿಸಲಾಗಿದ್ದ ಒಂದು ದಿನದ ತರಬೇತಿ ಕಾರ್ಯಾಗಾರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ದಿ ಪ್ರಾಧಿಕಾರವು ತಾಂತ್ರಿಕ, ಸಹಕಾರ ಹಾಗೂ ರೈತ ಸಂಪರ್ಕ ಈ ಮೂರು ಹಂತದಲ್ಲಿ ಕೆಲಸ ಮಾಡುತ್ತಿದೆ. ನೀರು ಬಳಕೆದಾರರ ಸಂಘಗಳನ್ನು ಬಲವರ್ಧನೆ ಮಾಡಲಾಗುತ್ತಿದೆ. ಇವು ಸ್ವಾಯತ್ತ ಸರ್ಕಾರದ ರೀತಿಯಲ್ಲಿ ಜವಾಬ್ದಾರಿಯಿಂದ ಕೆಲಸ ಮಾಡುತ್ತಿವೆ. ಕಾಡಾ ವ್ಯಾಪ್ತಿಯಲ್ಲಿ ಒಟ್ಟು 537 ಸಂಘಗಳಿದ್ದು 120 ಸಕ್ರಿಯವಾಗಿವೆ.
ಕೊನೆ ಭಾಗದ ರೈತರಿಗೂ ನೀರು ತಲುಪಿಸುವ ಯೋಜನೆ ಇದ್ದು, ಸರ್ಕಾರ ರೈತಪರವಾಗಿ ಹೆಜ್ಜೆ ಇಡುತ್ತಿದೆ. ಭದ್ರಾ ಮೇಲ್ದಂಡೆ, ತುಂಗಾ ಮೇಲ್ದಂಡೆ ಯೋಜನೆ ಪೂರ್ಣಗೊಳ್ಳುವ ಹಂತದಲ್ಲಿದ್ದು, ಈ ವ್ಯಾಪ್ತಿಯಲ್ಲಿ ಸಂಘದ ಸದಸ್ಯರು, ರೈತರನ್ನು ಗುರುತಿಸಿದ್ದೇವೆ. ನಿರಂತರ ಅವರ ಸಂಪರ್ಕದಲ್ಲಿದ್ದೇವೆ. ಸ್ಥಳೀಯ ಅಹವಾಲು ಸ್ವೀಕಾರ ಮಾಡಲಾಗುತ್ತಿದೆ. ಸಂಘಗಳು ಪ್ರಗತಿ ಸಾಧಿಸಿವೆ. ರೈತರು ಬಲವಾಗಿದ್ದರೆ ಮಾತ್ರ ಪ್ರಗತಿ ಸಾಧ್ಯ. ನೀರು ಸದ್ಬಳಕೆ ಬಗ್ಗೆ ಅರಿವು ಮೂಡಿಸುವಲ್ಲಿ ಸೊಸೈಟಿಗಳ ಪಾತ್ರ ಮಹತ್ವದ್ದಾಗಿದೆ. ರೈತರಿಂದ ಹಾಗೂ ಸಂಘದಿAದ ಪ್ರಾಧಿಕಾರಕ್ಕೆ ನಿರಂತರ ಸಹಕಾರ ಲಭಿಸಿದೆ ಎಂದರು.
Bhadra Command Area Development Authority ಕಾಡಾ ವ್ಯಾಪ್ತಿಯಲ್ಲಿ ಬರುವ ಐಸಿಸಿ ಅಧ್ಯಕ್ಷರು, ಉಸ್ತುವಾರಿ ಸಚಿವರ ಸಂಪೂರ್ಣ ಸಹಕಾರ ದೊರೆಯುತ್ತಿದೆ. ಕೊನೆ ಭಾಗದ ರೈತರಿಗೆ ನೀರು ತಲುಪಿಸಲು ಐತಿಹಾಸಿಕ ಕಾನೂನುಗಳನ್ನು ರೂಪಿಸಿ ಅನುಷ್ಟಾನಗೊಳಿಸಲಾಗಿದೆ. ಅಧಿಕಾರಿಗಳ ಶ್ರಮವೂ ಇದೆ. ಭೂಮಿ ಆರೋಗ್ಯ ಕಾಪಾಡಲು ನರೇಗಾ ಮತ್ತು ಕಾಡಾ ಸಹಯೋಗದಲ್ಲಿ ಸವಳು ಜವಳು ಕುರಿತು ಪೈಲಟ್ ಕಾರ್ಯಕ್ರಮ ರೂಪಿಸಲಾಗುತ್ತಿದೆ. 10 ತಾಲ್ಲೂಕುಗಳ ಮುಂಚೂಣಿಯಲ್ಲಿರುವ ಸಂಘಗಳನ್ನು ಗುರುತಿಸಿ ಬಲವರ್ಧನೆಗಾಗಿ ಯಂತ್ರೋಪಕರಣ ಮತ್ತು ಅನುದಾನ ವಿತರಣೆ ಮಾಡಲಾಗಿದೆ. ರೈತರು ಮತ್ತು ಸಂಘಗಳ ಅನುಕೂಲಕ್ಕಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು ಸಹಕಾರ ಸಂಘಗಳನ್ನು ಉತ್ತೇಜಿಸಲು, ಬೆಳೆಯಲು ಅವಕಾಶ ನೀಡಲು ಸೌಲಭ್ಯ ವಿತರಣೆ ಮಾಡಲಾಗುತ್ತಿದೆ ಎಂದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಕಾಡಾ ಮಾಜಿ ಮುಖ್ಯ ಇಂಜಿನಿಯರ್ ಚೆಲುವರಾಜು, ಕೃಷಿಯಲ್ಲಿ ನೀರಿನ ಸದ್ಬಳಕೆಯಾಗಬೇಕು. ನೀರಿನ ಉಳಿತಾಯ ಮಾಡುವಂತಹ ಪದ್ದತಿ ಅಳವಡಿಸಿಕೊಂಡು, ಕೃಷಿಯಲ್ಲಿ ಹೊಸ ಚಿಂತನೆ , ಹೊಸ ಆವಿಷ್ಕಾರಗಳು ಹಾಗೂ ನವೀನ ತಂತ್ರಜ್ಞಾನವನ್ನು ಅಳವಡಿಕೊಳ್ಳಬೇಕು. ಅಕ್ಕಪಕ್ಕದವರಿಗೆ ಉತ್ತೇಜನ ನೀಡಿ ಮಾದರಿಯಾಗಬೇಕು ಎಂದು ಹೇಳಿದರು.
ಸಹಕಾರ ಸಂಘಗಳು ಸ್ವಾಯತ್ತ ಸಂಸ್ಥೆಯ ರೀತಿ ಕೆಲಸ ಮಾಡುತ್ತಿವೆ. ನೀರಿನ ಕಂದಾಯ ಸಂಗ್ರಹ ಅಷ್ಟೇ ಪ್ರಮುಖ ಅಲ್ಲ. ಕೋಲ್ಡ್ ಸ್ಟೋರೇಜ್, ಗೊಬ್ಬರ, ಬೀಜ, ಮೈಕ್ರೋ ಇರಿಗೇಷನ್ ಕೃಷಿಯಲ್ಲಿ ಹೊಸ ಆವಿಷ್ಕಾರ ಪದ್ಧತಿಗಳ ಬಗ್ಗೆ ರೈತರಲ್ಲಿ ಅರಿವು ಮೂಡಿಸಬೇಕು. ಜಲಾಶಯದಲ್ಲಿ ಯಥೇಚ್ಛ ನೀರು ಇಲ್ಲ. ನೀರಿನ ಲಭ್ಯತೆ ಕಡಿಮೆ ಆಗುತ್ತಿರುವಾಗ ಬದಲಾವಣೆ ಆಗದಿದ್ದರೆ ಕಷ್ಟವಾಗುತ್ತದೆ. ಕುಡಿಯುವ ನೀರಿಗೆ ಬೇಡಿಕೆ ಹೆಚ್ಚಿದೆ. ನಾಗರೀಕ ಸೌಲಭ್ಯಗಳು, ಕೈಗಾರಿಕೆಗೂ ನೀರು ನೀಡಬೇಕಿದೆ. ಆದ್ದರಿಂದ ಬದಲಾವಣೆಗೆ ಹೊಂದಿಕೊಳ್ಳಬೇಕಿದೆ. ಸಣ್ಣ ನೀರಾವರಿ ಉತ್ತೇಜಿಸಲು ಸಹಕಾರ ಸಂಘಗಳ ಸಹಕಾರ ಬೇಕು. ಯಾವ್ಯಾವ ಬೆಳೆಗೆ ಎಷ್ಟು ನೀರು ಬೇಕೆಂಬ ಬಗ್ಗೆ ತಿಳಿಯಬೇಕು. ಇಸ್ರೇಲ್ ಕೃಷಿ ಮಾದರಿ ನೋಡಲು ರೈತರಿಗೆ ಅವಕಾಶ ನೀಡಲಾಗಿದೆ. ಬೋರ್ ಹನಿ ನೀರಾವರಿ ಯಿಂದ ಉತ್ತಮ ಬೆಳೆಯನ್ನು ಬೆಳೆಯಲಾಗುತ್ತಿದೆ ಎಂದ ಅವರು ಹೊಸ ಹೊಸ ಅನ್ವೇಷಣೆ ಅಳವಡಿಸಿಕೊಳ್ಳಬೇಕು. ರೈತರು ಹೊಸ ತಂತ್ರಜ್ಞಾನ ಅಳವಡಿಸಿಕೊಂಡು ಬೆಳೆ ಬೆಳೆಯತ್ತಿರುವುದನ್ನು ಕಾಣುತ್ತಿದ್ದೇವೆ. ನೀರು ಬಳಕೆದಾರರು ಸಂಘದ ಮೂಲಕ ಬದಲಾವಣೆ ತರಬೇಕು ಎಂದರು.
ತುಮಕೂರು ಮತ್ತು ಚಿತ್ರದುರ್ಗ ಬ್ರಾಂಚ್‌ಗಳಲ್ಲಿ 2.25 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಸಣ್ಣ ನೀರಾವರಿ ವ್ಯವಸ್ಥೆ ಮಾಡಲು ಯೋಜನೆ ರೂಪಿಸಲಾಗಿದೆ. ನೀರಿನ ಸದ್ಬಳಕೆ ಬಗ್ಗೆ ರೈತರೆಲ್ಲ ಯೋಚಿಸಬೇಕು. ನೀರಿನ ಉಳಿತಾಯ ದ ಬಗ್ಗೆ ಚಿಂತಿಸಬೇಕು. ಸರ್ಕಾರ ಹೊಸ ಹೊಸ ಯೊಜನೆಗಳು, ಪದ್ದತಿಗಳನ್ನು ತರುತ್ತಿದೆ ಅದನ್ನು ಅಳವಡಿಸಿಕೊಳ್ಳಬೇಕು ಎಂದರು.
ಎಲೆಬೇತೂರು ನೀರು ಬಳಕೆದಾರರ ಸಂಘದ ಅಧ್ಯಕ್ಷ ಹೆಚ್.ಬಸವರಾಜಪ್ಪ ಮಾತನಾಡಿ, ಸಂಘದ ಸರಿಯಾದ ಸದ್ಬಳಕೆ ಮಾಡಿಕೊಂಡಲ್ಲಿ ಅಭಿವೃದ್ಧಿ ಸಾಧ್ಯ. ಸಂಘದವರು ರೈತರ ಮನವೊಲಿಸಿ ನೀರು ಸದ್ಬಳಕೆ ಬಗ್ಗೆ ತಿಳಿಸಬೇಕು. ಯಾವ್ಯಾವ ಬೆಳೆಗೆ ಎಷ್ಟೆಷ್ಟು ನೀರು ಬೇಕೆಂದು ಸಂಘಗಳು ಅರಿವು ಮೂಡಿಸಬೇಕು. ಯಥೇಚ್ಛವಾಗಿ ಬಳಸುವವರ ಮನವೊಲಿಸಿ, ಕಡಿಮೆ ಬಳಕೆ ಮಾಡಿ ನೀರು ಉಳಿತಾಯ ಮಾಡಲು ಉತ್ತೇಜಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಹತ್ತು ಸಹಕಾರ ಸಂಘಗಳಿಗೆ ಕೃಷಿ ಯಂತ್ರೋಪಕರಣಗಳನ್ನು ವಿತರಿಸಲಾಯಿತು.
ಕಾಡಾ ಆಡಳಿತಾಧಿಕಾರಿ ಸತೀಶ್, ತಾಂತ್ರಿಕ ಅಧೀಕ್ಷಕ ಅಭಿಯಂತರ ಪ್ರಶಾಂತ್, ನಾಗೇಶ್ ಢೋಂಗ್ರೆ, ನಾಗ ಸುಲೋಚನ ಹಾಗೂ ಹತ್ತು ಸಂಘಗಳ ಪದಾಧಿಕಾರಿಗಳು ಉಪಸ್ಥಿತರದ್ದರು.
Bhadra Command Area Development Authority ನೀರಿನ ಸದ್ಬಳಕೆ ಮಾಡುವಲ್ಲಿ ಸಹಕಾರ ಸಂಘಗಳದ್ದು ಮಹತ್ವದ ಪಾತ್ರ- ಕೆ.ಪಿ.ಅಂಶುಮಂತ್
Date: