- ಡಾ.ಸುಧೀಂದ್ರ.
- ಪ್ರಧಾನ ಸಂಪಾದಕ.
ಕೆ ಲೈವ್.
Klive Special Article ಈಗ ಗ್ಯಾರಂಟಿಗಳ ಯುಗ. ದೆಹಲಿಯಲ್ಲಿ ಕೇಜರಿವಾಲ್ ಹುಟ್ಟುಹಾಕಿದ ಈ ಸೂತ್ರ ಇಡೀ ದೇಶದ ಮತ್ತು ಪ್ರಜಾಪ್ರಭುತ್ವದ ನೈತಿಕತೆಯ ಬುಡ ಅಲ್ಲಾಡಿಸುತ್ತಿದೆ.
ನಾವು ಕಟ್ಟುವ ತೆರಿಗೆಯ ಹಣದಿಂದಲೇ ಆಡಳಿತ ಪಕ್ಷವು ಯೋಜನೆಗಳನ್ನ ತಯಾರಿಸುತ್ತದೆ.
ಇದು ರಾಜನೀತಿ. ನಿಜ.
ಆದರೆ ನಮ್ಮ ತೆರಿಗೆ ಕೇವಲ ಅನುತ್ಪಾದಕ ರಂಗಕ್ಕೆ ವ್ಯಯವಾದರೆ ಏನು ಲಾಭ. ಅದೂ ಅಲ್ಲದೆ
ಒಬ್ಬರ ತೆರಿಗೆ ಹಣವನ್ನ ಮತ್ತೊಬ್ಬರಿಗೆ ಸುರಿಯುವುದು ಯಾವ ನ್ಯಾಯ?
ಬಡವರ ಏಳಿಗೆ ಮಾಡಬೇಕು ನಿಜ.
ಅದು ನ್ಯಾಯಯುತವಾಗಿರಬೇಕು.
ರಾಜ್ಯ ಸರ್ಕಾರವು ಸಂಗ್ರಹಿಸಿದ ತೆರಿಗೆಯಲ್ಲಿ ಕೇಂದ್ರಕ್ಕೆ ತನ್ನ ಪಾಲು ಕೇಳುವುದು ನ್ಯಾಯವಾದರೆ ನಮ್ಮಲ್ಲೇ ತೆರಿಗೆಕಟ್ಟುವ ಬಹುಜನ ತಮ್ಮತೆರಿಗೆ ಹಣವು ಅನುತ್ಪಾದಕ ಕ್ಷೇತ್ರಕ್ಕೆ ಖರ್ಚುಗೈಯುವುದು ಸಮಂಜಸವೆ? ಎಂದು ವಿವೇಚಿಸುವುದು ತಪ್ಪಲ್ಲ.
ಆರ್ಥಿಕತೆಯ ಮೇಲೆ ಈತರಹದ ಗ್ಯಾರಂಟಿ ಕೊಡುಗೆಗೆಳು ಪ್ರಭಾವ ಬೀರುತ್ತವೆಯೆ? ಎಂಬ ಪ್ರಶ್ನೆಗೆ ವೈಜ್ಞಾನಿಕ ವಿಶ್ಲೇಷಣೆ ಇದೂವರೆಗೆ ಯಾವ ಆರ್ಥಿಕ ತಜ್ಞರೂ ಮಾಡಿಲ್ಲ. ರಾಜಕೀಯ ಪಕ್ಷಗಳ. ಆರ್ಥಿಕ ಸಲಹೆಗಾರರೂ ತಲೆಕೆಡಿಸಿಕೊಂಡಿಲ್ಲ.
ಜನ ಸಾಮಾನ್ಯರು ಕೇವಲ ಮಾಧ್ಯಮಗಳಲ್ಲಿ ನಡೆಯುವ ಪರಸ್ಪರ
ಮಾತಿನ ದೊಂಬರಾಟದಿಂದ ಅಷ್ಟಿಷ್ಟು ಅರ್ಥಮಾಡಿಕೊಳ್ಳಬೇಕಷ್ಟೆ.
ಬೇರೆ ರಾಜ್ಯಗಳಲ್ಲಿಜಾರಿಮಾಡಿರುವ ಗ್ಯಾರಂಟಿ ಯೋಜನೆಯ ಫಲಿತಾಂಶ ಅಲ್ಲಿನ ಸರ್ಕಾರಗಳಿಗೆ ಕ್ರಮೇಣ ಉಸಿರುಗಟ್ಟುವಂತೆ ಮಾಡಿದೆ.
ಈಗ ದೆಹಲಿಯಲ್ಲಿ ಸರ್ಕಾರ ಬದಲಾಗಿದೆ. ಆದರೆ ಗ್ಯಾರಂಟಿ ಕೊಡುಗೆ ವಿರೋಧಿಸಿದ ಬಿಜೆಪಿಯೂ ಕೂಡ
ಮಹಿಳೆಯರಿಗೆ ಮಾಹೆಯಾನ ರೂ
2500 ನೀಡಲು ನಿರ್ಧರಿಸಿದೆ.
Klive Special Article ನಮ್ಮ ರಾಜ್ಯದಲ್ಲಿ ಗೃಹಲಕ್ಚ್ಮಿ ಬಗ್ಗೆ ವಿವಾದ ನಿಂತೇ ಇಲ್ಲ. ಫ್ರೀಬಸ್ ಪ್ರಯಾಣದಿಂದ ಸಾರಿಗೆ ಇಲಾಖೆಯ ಬಗ್ಗೆ ಸಚಿವರ ಅಲ್ಲಲ್ಲೇ ತಮ್ಮ ಒಳಸಂಕಟವನ್ನ ಮಾಧ್ಯಮಗಳಲ್ಲಿ ಹೊರಹಾಕುತಿದ್ದಾರೆ.
ಹಾಲಿನ ದರ, ನೋಂದಣಿ ದರ , ಸಾರ್ವಜನಿಕ ಪ್ರಯಾಣ ದರ, ಬೆಂಗಳೂರು ಜನಕ್ಕೆ ನೀರಿನ ತೆರಿಗೆ, ವಿದ್ಯುತ್ ದರ…ಹೀಗೆ ಬರೆ ಕೊಡುತ್ತಲೇ ಇದೆ ರಾಜ್ಯ ಸರ್ಕಾರ.
ಎಸ್ ಸಿ/ ಎಸ್ ಟಿ ಗಳ ಅಭಿವೃದ್ದಿ ಅನುದಾನವನ್ನ ಗ್ಯಾರಂಟಿಗಳಿಗೆ ಖರ್ಚು ಮಾಡುತ್ತಿರುವ ಆರೋಪಗಳನ್ನ ನಾವು ಕೇಳುತ್ತಿದ್ದೇವೆ.
ಎಲ್ಲೋ ಒಂದೆಡೆ ಸತ್ಯ ನಿಖರ ಮತ್ತು ಖಾರವಾಗಿದೆ. ಅದನ್ನ ಸರ್ಕಾರ ಬಿಟ್ಟುಕೊಡುತ್ತಿಲ್ಲ.
ದರ ಏರಿಸದೇ ಇಷ್ಟು ದೀರ್ಘ ವರ್ಷಗಳಾಗಿವೆ. ಅದಕ್ಕೋಸ್ಕರ ವಿಧಿಯಿಲ್ಲದೇ ದರ ಏರಿಕೆ ಅನಿವಾರ್ಯ
ಎಂಬ ಹೇಳಿಕೆಗಳು ಎಷ್ಟು ಬಾಲಿಶ. ಎಂಬುದನ್ನ ಆಡಳಿತದಮಂದಿ ಅರ್ಥಮಾಡಿಕೊಳ್ಳಬೇಕು.
ತೆರಿಗೆ ಕಟ್ಟುವವರೂ ಪ್ರಜೆಗಳೆ. ಅವರೂ ಮತದಾರರೆ. ಆದರೆ ತೆರಿಗೆ ಸಲ್ಲಿಸುವ ವರ್ಗಕ್ಕೆ ಸರ್ಕಾರದ ಅವಜ್ಞೆ ಯಾಕೆ?
ನಮ್ಮ ತೆರಿಗೆ ನಮಗೆ ನೀಡಿ ಎಂಬ ಆಂದೋಲನವನ್ನು ತೆರಿಗೆ ಕಟ್ಟುವ ವರ್ಗ
ಆರಂಭಿಸಿದರೆ ಅಚ್ಚರಿಯೇನಿಲ್ಲ.
- ಡಾ.ಸುಧೀಂದ್ರ.
- ಪ್ರಧಾನ ಸಂಪಾದಕ.
ಕೆ ಲೈವ್.