Wednesday, March 19, 2025
Wednesday, March 19, 2025

Karnataka Educational & Charitable Trust ಕಠಿಣ ಪರಿಶ್ರಮ, ನಿರಂತರ ಅಭ್ಯಾಸ & ಉತ್ತಮ ಆರೋಗ್ಯದಿಂದ ಪರೀಕ್ಷೆಯಲ್ಲಿ ಯಶಸ್ಸು- ಎಂ.ಚಂದ್ರಶೇಖರಯ್ಯ

Date:

Karnataka Educational & Charitable Trust ಎಸ್.ಎಸ್.ಎಲ್.ಸಿ.ಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪಬ್ಲಿಕ್ ಪರೀಕ್ಷೆಯು ಸಮೀಪಿಸುತ್ತಿದ್ದು, ದೈವಾನುಗ್ರಹದೊಂದಿಗೆ, ವಿದ್ಯಾರ್ಥಿಗಳು ಕಠಿಣ ಪರಿಶ್ರಮ, ನಿರಂತರ ಅಭ್ಯಾಸ ಹಾಗೂ ಉತ್ತಮ ಆರೋಗ್ಯವನ್ನು ಕಾಪಾಡಿಕೊಂಡು ಪರೀಕ್ಷೆಯನ್ನು ಎದುರಿಸಿದಾಗ ಪರೀಕ್ಷೆಯಲ್ಲಿ ಯಶಸ್ಸು ಶತಃಸಿದ್ಧ ಎಂದು ರೋಟರಿ ಶಿವಮೊಗ್ಗ ಪೂರ್ವ ಎಜುಕೇಷನಲ್ & ಛಾರಿಟಬಲ್ ಟ್ರಸ್ಟ್ (ರಿ.,)ನ ಮ್ಯಾನೇಜಿಂಗ್ ಟ್ರಸ್ಟಿ ಹಾಗೂ ನಿವೃತ್ತ ಡಿ.ಪಿ.ಐ. ರೊ. ಚಂದ್ರಶೇಖರಯ್ಯ ಎಂ., ಇವರು ಅಭಿಪ್ರಾಯ ಪಟ್ಟರು.
ಅವರು ಇಂದು ನಗರದ ರೋಟರಿ ಪೂರ್ವ ಆಂಗ್ಲ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಏರ್ಪಡಿಸಿದ ಶಾರದಾ ಪೂಜಾ ಕಾರ್ಯಕ್ರಮ ಹಾಗೂ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ತಮ್ಮ ಮಾತನ್ನು ಮುಂದುವರೆಸಿದ ಅವರು ಈ ವರ್ಷ ಶಿಕ್ಷಕರು ವಿದ್ಯಾರ್ಥಿಗಳಿಗೆ ತಮ್ಮ ತಮ್ಮ ವಿಷಯಗಳಲ್ಲಿ ಏರ್ಪಡಿಸಿದ ವಿಶೇಷ ತರಗತಿಗಳ ಮೂಲಕ ಮಾಡಿದ ಗುಣಮಟ್ಟದ ಬೋಧನೆ ಅದಕ್ಕೆ ಮಕ್ಕಳು ಸ್ಪಂದಿಸಿದ ವಿಧಾನ ಇವುಗಳನ್ನು ಅವಲೋಕಿಸಿದಾಗ ಕಳೆದ ವರ್ಷದಂತೆ ಈ ವರ್ಷವು ಶೇ.100 ಫಲಿತಾಂಶವನ್ನು ಕಾಯ್ದುಕೊಳ್ಳಲಿದ್ದಾರೆ ಎಂದು ತಿಳಿಸಿದರು.
ಸಮಾರಂಭದ ಮುಖ್ಯ ಅತಿಥಿಗಳಾಗಿ ರೋಟರಿ ಶಿವಮೊಗ್ಗ ಪೂರ್ವದ ಅಧ್ಯಕ್ಷರಾದ ರೊ. ಅರುಣ್ ದೀಕ್ಷಿತ್ ಇವರು ಮಾತನಾಡುತ್ತಾ, ವಿದ್ಯಾರ್ಥಿ ಜೀವನ ಒಂದು ಅಮೂಲ್ಯ ಅವಧಿಯಾಗಿದ್ದು, ಈ ಅವಧಿಯಲ್ಲಿ ಮೈಗೂಡಿಸಿಕೊಂಡ ಒಳ್ಳೊಳ್ಳೆ ಅಭ್ಯಾಸಗಳು, ಹವ್ಯಾಸಗಳ ಜೊತೆಗೆ ತಮ್ಮ ಪರಿಶ್ರಮದಿಂದ ಉತ್ತಮ ಅಂಕಗಳೊAದಿಗೆ ಒಳ್ಳೆಯ ಫಲಿತಾಂಶವನ್ನು ಗಳಿಸಿಕೊಟ್ಟು ಶಾಲೆಯ ಅತ್ಯುತ್ತಮ ಹಳೆಯ ವಿದ್ಯಾರ್ಥಿಗಳಾಗಬೇಕೆಂಬ ಕಿವಿ ಮಾತು ಹೇಳಿದರು.
ರೋಟರಿ ಶಾಲೆಯ ಪ್ರಾರಂಭದಿAದಲೂ ಉತ್ತಮ ಶಾಲಾ ಆಚರಣೆಗಳನ್ನು ಹಮ್ಮಿಕೊಂಡು ಬಂದಿದ್ದು ಅದರಂತೆ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳು ತಮಗೆ ಮನಪೂರ್ವಕವಾಗಿ ವಿದ್ಯೆಯನ್ನು ಧಾರೆ ಎರೆದ ಶಿಕ್ಷಕರ ಸೇವೆಯನ್ನು ಸ್ಮರಿಸುವುದರ ಜೊತೆಗೆ ಶಿಕ್ಷಕರೆಲ್ಲರಿಗೂ ಗುರು ಕಾಣಿಕೆ ನೀಡಿದರು. ಅದೇ ರೀತಿ ೯ನೇ ತರಗತಿ ವಿದ್ಯಾರ್ಥಿಗಳು ಶಾಲೆಯನ್ನು ಬಿಟ್ಟು ತೆರಳುತ್ತಿರುವ ೧೦ನೇ ತರಗತಿ ಸಹೋದರ-ಸಹೋದರಿಯರಿಗೆ ನೆನಪಿನ ಕಾಣಿಕೆ ನೀಡಿ ಶುಭ ಹಾರೈಸಿದರು.
ಶಿಕ್ಷಕರ ಪರವಾಗಿ ಸಹ ಶಿಕ್ಷಕಿ ಕಾವ್ಯ ಬಿ.ಎಸ್. & ವಿದ್ಯಾ ಪಿ., ಇವರು ವಿದ್ಯಾರ್ಥಿಗಳಿಗೆ ಪರೀಕ್ಷಾ ಸಿದ್ಧತೆ ಹಾಗೂ ಸಮಯ ಪರಿಪಾಲನೆ ಬಗ್ಗೆ ಕಿವಿ ಮಾತು ಹೇಳಿದರು.
Karnataka Educational & Charitable Trust ಈ ಸಮಾರಂಭದಲ್ಲಿ ಅತಿಥಿಗಳಾಗಿ ಹಾಜರಿದ್ದ, ಟ್ರಸ್ಟ್ನ ಉಪಾಧ್ಯಕ್ಷ ರೊ. ಡಾ|| ಪರಮೇಶ್ವರ್ ಡಿ. ಶಿಗ್ಗಾಂವ್, ಟ್ರಸ್ಟ್ನ ಕಾರ್ಯದರ್ಶಿ ರೊ. ರಾಮಚಂದ್ರ ಎಸ್.ಸಿ., ಜಂಟಿ ಕಾರ್ಯದರ್ಶಿ ರೊ. ನಾಗವೇಣಿ ಎಸ್.ಆರ್., ಕ್ಲಬ್‌ನ ಕಾರ್ಯದರ್ಶಿ ರೊ. ಶಶಿಕಾಂತ್ ನಾಡಿಗ್, ಶಾಲೆಯ ಪ್ರಾಂಶುಪಾಲರಾದ ಸೂರ್ಯನಾರಾಯಣ್ ಆರ್., ಇವರುಗಳು ವಿದ್ಯಾರ್ಥಿಗಳಿಗೆ ಪರೀಕ್ಷಾ ಭಯವನ್ನು ನಿವಾರಿಸಿಕೊಂಡು ಧೈರ್ಯ ಹಾಗೂ ಸಮಚಿತ್ತದಿಂದ ಪ್ರಶ್ನೆಗಳಿಗೆ ಉತ್ತರ ಬರೆಯುವ ವಿಧಾನವನ್ನು ಮನ ಮುಟ್ಟುವಂತೆ ತಮ್ಮ ಮಾತುಗಳಲ್ಲಿ ತಿಳಿಸಿದರು.
ಹಿರಿಯ ಟ್ರಸ್ಟಿ ರೊ. ರಾಮಚಂದ್ರ ರಾವ್ ಕೆ.ಜಿ., ತಮ್ಮ ಪತ್ನಿ ಹಾಗೂ ಸಂಬAಧಿಕರು ಬರೆದ ೭ ಪುಸ್ತಕಗಳನ್ನು ರೋಟರಿ ಶಾಲೆಯ ಗ್ರಂಥಾಲಯಕ್ಕೆ ನೀಡಿದರು. ಇದೇ ಸಂದರ್ಭದಲ್ಲಿ ಶಾಲೆಯಿಂದ ಬೀಳ್ಕೊಡುತ್ತಿರುವ ೧೦ನೇ ತರಗತಿ ವಿದ್ಯಾರ್ಥಿಗಳು ಶಾಲೆಗೆ ಒಂದು ವಾಟರ್ ಫಿಲ್ಟರ್‌ನ್ನು ಕಾಣಿಕೆಯಾಗಿ ನೀಡಿದರು. ಇದೇ ಸಂದರ್ಭದಲ್ಲಿ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಮಾಡಿದ ಮದನ್ ಕುಮಾರ್ & ಯಶಸ್ ಈ ಮಕ್ಕಳ ಪೋಷಕರಾದ ರವೀಂದ್ರ ದಂಪತಿಗಳನ್ನು ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು. ಶಾಲೆಯ ಹಿರಿಯ ಶಿಕ್ಷಕಿ ಸುಷ್ಮಾ ಬಿ.ಎಲ್. ಸ್ವಾಗತಿಸಿ, ಶಿಕ್ಷಕಿ ಶ್ವೇತಾ ಎ.ಟಿ. ವಂದಿಸಿದರು. ಕು. ರುಕ್ಕಯ್ಯ ಕಾರ್ಯಕ್ರಮದ ನಿರ್ವಹಣೆ ಮಾಡಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Kumsi MESCOM ಕುಂಸಿ ಮೆಸ್ಕಾಂ ಕಛೇರಿಯಲ್ಲಿ ಮಾರ್ಚ್ 18. ಜನಸಂಪರ್ಕ ಸಭೆ

Kumsi MESCOM ಕುಂಸಿ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಮಾ.18 ರಂದು ಬೆಳಿಗ್ಗೆ...

Karnataka Legislative Council ಇಡೀ ರಾಷ್ಟ್ರವೇ ಮೆಚ್ಚುವ ‌ಕಾನೂನು ಶಿಕ್ಷಣ ಸಿಗಲಿ- ಮಾಜಿ ನ್ಯಾ.ಎಂ.ಎನ್.ವೆಂಕಟಾಚಲಯ್ಯ

Karnataka Legislative Council ಪ್ರವಾಹೋಪಾದಿಯಲ್ಲಿ ಸಾಧನೆ ಮಾಡುವ ಹಂಬಲ ಉಳ್ಳವರನ್ನು ತಡೆಯಲು...

District Consumer Disputes Redressal Commission ರೆಫ್ರಿಜಿರೇಟರ್ ಸೇವಾನ್ಯೂನತೆ. ಜಿಲ್ಲಾ ವ್ಯಾಜ್ಯ ಪರಿಹಾರ ಆಯೋಗದಿಂದ ಗ್ರಾಹಕರಿಗೆ ಸಿಕ್ಕಿತು ನ್ಯಾಯ

District Consumer Disputes Redressal Commission ದೂರುದಾರರಾದ ಎಸ್.ವಿ.ಲೋಹಿತಾಶ್ವ ಇವರು ಎದುರುದಾರರಾದ...