Rotary Club Shivamogga ಸಮಾಜಮುಖಿ ಆಲೋಚನೆಗಳೊಂದಿಗೆ ನಿರಂತರವಾಗಿ ಸೇವಾ ಕಾರ್ಯಗಳನ್ನು ನಡೆಸುವ ಸಂಸ್ಥೆ ರೋಟರಿಯಾಗಿದೆ ಎಂದು ಜಿಲ್ಲಾ ಗವರ್ನರ್ ದೇವಾನಂದ್ ಹೇಳಿದರು.
ರೋಟರಿ ಕ್ಲಬ್ ಶಿವಮೊಗ್ಗ ರಿವರ್‌ಸೈಡ್ ಸಂಸ್ಥೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿ, ಉತ್ತಮ ಸೇವಾ ಕಾರ್ಯಗಳನ್ನು ನಡೆಸುತ್ತಿರುವುದು ಶ್ಲಾಘನೀಯ. ಆರೋಗ್ಯ ಸಮಾಜ ನಿರ್ಮಾಣ ಮಾಡುವಲ್ಲಿ ರೋಟರಿ ಸಂಸ್ಥೆ ಮಹತ್ತರ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದೆ. ಶುದ್ಧ ಕುಡಿಯುವ ನೀರಿನ ಘಟಕ ಕೊಡುಗೆ ನೀಡಿರುವುದು ಅಭಿನಂದನೀಯ ಎಂದು ತಿಳಿಸಿದರು.
ಒಳಿತಿಗಾಗಿ ಒಂದಾಗೋಣ ಎಂಬ ಘೋಷವಾಕ್ಯದೊಂದಿಗೆ ಎಲ್ಲರೂ ಕಾರ್ಯ ನಿರ್ವಹಿಸಬೇಕು. ವಿಶ್ವದ 120 ರಾಷ್ಟ್ರಗಳಲ್ಲಿ 12 ಲಕ್ಷಕ್ಕಿಂತ ಹೆಚ್ಚು ಸದಸ್ಯರನ್ನು ಹೊಂದಿರುವ ರೋಟರಿ ಸಂಸ್ಥೆ ಉತ್ತಮ ಕೆಲಸ ಮಾಡುತ್ತಿದೆ. ಶಾಲಾ ಮಕ್ಕಳಿಗೆ ಸಮವಸ್ತ್ರ ವಿತರಿಸಿರುವುದು ಒಳ್ಳೆಯ ಕಾರ್ಯ ಎಂದರು.
ಇಂಗು ಗುಂಡಿ, ಸಸಿ ನೆಡುವ ಕಾರ್ಯ, ಬಯೋಡೈವರ್ಸಿಟಿ ಪಾರ್ಕ್, ಹಸಿರು ಕ್ರಾಂತಿ, ಔಷದಿ ಗಿಡನೆಟ್ಟು, ಮಕ್ಕಳಿಗೆ ಪ್ರಕೃತಿ ಬಗ್ಗೆ, ರಸ್ತೆ ಸುರಕ್ಷತೆ ಬಗ್ಗೆ ಮಾಹಿತಿ ನೀಡುವ ಮಾಹಿತಿ ನೀಡುವ ಕಾರ್ಯಕ್ರಮಗಳನ್ನು ರಿವರ್‌ಸೈಡ್ ಸಂಸ್ಥೆ ಮಾಡಿರುವುದು ಶ್ಲಾಘನೀಯ ಎಂದು ಹೇಳಿದರು.
Rotary Club Shivamogga ಅಧ್ಯಕ್ಷತೆ ವಹಿಸಿದ್ದ ರೋಟರಿ ಕ್ಲಬ್ ಶಿವಮೊಗ್ಗ ರಿವರ್‌ಸೈಡ್ ಅಧ್ಯಕ್ಷ ಎಂ ಆರ್ ಬಸವರಾಜ್ ಮಾತನಾಡಿ, ವೃತ್ತಿಯ ಜತೆಯಲ್ಲಿ ಹೆಚ್ಚಿನ ಸೇವಾಕಾರ್ಯಗಳನ್ನು ಕ್ಲಬ್ ವತಿಯಿಂದ ಮಾಡುತ್ತಿದ್ದು, ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಎಲ್ಲರ ಸಹಕಾರದಿಂದ ಹೆಚ್ಚಿನ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದು ತಿಳಿಸಿದರು.
ಸಿಗಂದೂರು ಸೇತುವೆ ನಿರ್ಮಾಣದ ಪ್ರಮುಖ ಇಂಜಿನಿಯರ್ ಪೀರ್ ಪಾಷಾ, ಪ್ರಮುಖರಾದ ಆನಂದಮೂರ್ತಿ ಹಾಗೂ ಎಸ್.ಎಸ್.ವಾಗೇಶ್ ಅವರಿಗೆ ರೋಟರಿ ಕ್ಲಬ್ ಶಿವಮೊಗ್ಗ ರಿವರ್‌ಸೈಡ್ ಸಂಸ್ಥೆಯಿಂದ ಸನ್ಮಾನಿಸಲಾಯಿತು. ವಲಯ 10ರ ಸಹಾಯಕ ಗವರ್ನರ್ ಎಸ್ ಆರ್ ನಾಗರಾಜ್, ವಾಸಂತಿ, ಬಸವರಾಜ್, ಕೆ.ಪಿ.ಶೆಟ್ಟಿ, ಧನರಾಜ್, ವಿನಯ್, ನಾಗರಾಜ್, ಸೋಮಶೇಖರ್, ಪಿಡಿಜಿ ಚಂದ್ರಶೇಖರ್, ಭಾರತಿ, ಜಗನಾಥ್, ಜಿ.ವಿಜಯಕುಮಾರ್, ಶಂಕರ್, ವಿಶ್ವಾಸ್, ದೇವೇಂದ್ರಪ್ಪ, ಮಂಜುನಾಥ್, ಮಲ್ಲೇಶ್, ದ್ವಾರಕನಾಥ್, ವಿಶ್ವನಾಥ್ ನಾಯ್ಕ್, ರಾಜೇಶ್, ಸುಪ್ರಿಯ, ಮಲ್ಲೇಶ್ ಮತ್ತು ಇತರ ಕ್ಲಬ್ ಸದಸ್ಯರು ಭಾಗವಹಿಸಿದ್ದರು.
Rotary Club Shivamogga ನಿರಂತರ ಸೇವಾಕಾರ್ಯ ನಡೆಸುವ ಸಂಸ್ಥೆ ರೋಟರಿ : ಗವರ್ನರ್ ದೇವಾನಂದ್
Date: