Namma TV Shivamogga ರಂಗಭೂಮಿ ತಾಯಿ ಇದ್ದ ಹಾಗೆ ಚಲನಚಿತ್ರ ತಂದೆ ಇದ್ದ ಹಾಗೆ. ನಮ್ಮ ಮಲೆನಾಡಿನ ಜನ ನನಗೆ ತುಂಬಾ ಪ್ರೀತಿ ತೋರಿಸಿದ್ದಾರೆ. ಅವರ ಪ್ರೀತಿ ಬಹಳ ದೊಡ್ಡದು ಎಂದು ‘ಭೀಮ’ ಚಿತ್ರದ ಮೂಲಕ ಮನೆ ಮಾತಾಗಿರುವ ಚಿತ್ರ ನಟಿ ಪ್ರಿಯಾ ಹೇಳಿದರು.
ನಮ್ಮ ಟಿವಿ ಶಿವಮೊಗ್ಗದ ಸ್ಟುಡಿಯೋದಲ್ಲಿ ಪ್ರಖ್ಯಾತ ಸಿನಿಮಾ ತಾರೆಯವರಾದ ಪ್ರಿಯಾ ಅವಿನಾಶ್ ಅವರಿಗೆ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನಾನು 10 ಚಲನಚಿತ್ರ ಅದೆಷ್ಟೊ ಕಿರುತೆರೆಯಲ್ಲಿ ನಟಿಸಿದರೂ ಸಹ ನನಗೆ ಅತ್ಯಂತ ಹೆಸರು ತಂದು ಕೊಟ್ಟ ಭೀಮ ಚಲನ ಚಿತ್ರ ನನಗೆ ಹೆಸರು ತಂದುಕೊಟ್ಟಿತು. ನಿಜ ಜೀವನದಲ್ಲಿ ನಾನು ಪೋಲಿಸು ಅಧಿಕಾರಿಯಾಗಬೇಕೆಂದಿದ್ದೆ. ಆದರೆ ಚಲನ ಚಿತ್ರದಲ್ಲಿ ನಾನು ಪೋಲೀಸು ಅಧಿಕಾರಿ ಪಾತ್ರ ಮಾಡಿದೆ.
ನಾನು ಶಿವಮೊಗ್ಗದ ಸೊಸೆ ಎಂದು ಹೆಮ್ಮೆಯಿಂದ ಹೇಳಿಕೊಂಡರು. ಬರುವ ದಿನಗಳಲ್ಲಿ ರಂಗಭೂಮಿಯಲ್ಲಿ ಇನ್ನೂ ಅನೇಕ ಕಾರ್ಯ ಯೋಜನೆಗಳನ್ನು ಹಮ್ಮಿಕೊಂಡಿದ್ದೇವೆ ಹಾಗೂ ವಿಶೇಷವಾಗಿ ಹೊಸ ಹೊಸ ಕಲಾವಿದರನ್ನು ರಂಗಭೂಮಿಗೆ ಪರಿಚಯಿಸುವ ಕೆಲಸ ಮಾಡಲು ಇಚ್ಚಿಸಿದ್ದೇವೆ ಎಂದು ನುಡಿದರು.
ಈ ಸಂದರ್ಭದಲ್ಲಿ ಕನ್ನಡಕ್ಕಾಗಿ ಒಂದನ್ನು ಒತ್ತಿ ಚಿತ್ರದ ನಟ ಅವಿನಾಶ್ ಮಾತನಾಡಿ, ಶಿವಮೊಗ್ಗದಲ್ಲಿ ಓದಿ ಬೆಳೆದು ಇಲ್ಲಿಯೇ ರಂಗಭೂಮಿಯಲ್ಲಿ ಕೆಲಸ ಮಾಡಿ, ಕಿರುತೆರೆಗಳಲ್ಲಿ ಅಭಿನಯಿಸಿ, ನಂತರ ಈಗ ಚಲನಚಿತ್ರಗಳಲ್ಲಿ ಅಭಿನಯಿಸುತ್ತಿದ್ದೇನೆ. ಜೊತೆಗೆ ಒಂದು ಚಿತ್ರವನ್ನು ಸಹ ನಿರ್ಮಾಣ ಮಾಡಿದ್ದು, ಸದ್ಯದಲ್ಲೇ ಅದು ಸಹ ತೆರೆ ಕಾಣಲಿದೆ ಎಂದು ಹೇಳಿದರು.
Namma TV Shivamogga ಶಿವಮೊಗ್ಗದ ರಂಗಭೂಮಿಯಲ್ಲಿ ರೇಣುಕಪ್ಪ, ಗಿರೀಶ್, ಅಚಿ, ವೈದ್ಯ ಹಾಗೂ ಹಲವರು ಕಲಾವಿದನಾಗಿ ಅಭಿನಯಿಸಿದ ಅನುಭವಗಳನ್ನು ಹಂಚಿಕೊಂಡರು.
ಈ ಸಂದರ್ಭದಲ್ಲಿ ಇಬ್ಬರು ಚಲನಚಿತ್ರ ನಟ ನಟಿಯರಿಗೆ ನಮ್ಮ ಟಿವಿ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು. ನಮ್ಮ ಟಿವಿ ನಿರೂಪಕ ಜಿ.ವಿಜಯಕುಮಾರ್, ಶ್ರೀಕಾಂತ್, ತರುಣ್ ಮತ್ತು ಬಿಂದು ವಿಜಯ ಕುಮಾರ್ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು. ಅವರ ಜೊತೆ ಎಂ.ಎನ್.ಸುಂದರ ರಾಜ್, ಶಿಕ್ಷಣ ತಜ್ಞೆ ರಮ್ಯಾ ಅನಿಲ್ ಭಾಗವಹಿಸಿದ್ದರು. ನಂತರ ಅವಿನಾಶ್ ಮತ್ತು ಪ್ರಿಯಾ ಅವರ ಸಂದರ್ಶನ ನಡೆಯಿತು.