Narega Scheme ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಕೂಲಿಕಾರರನ್ನು ಸಂಘಟಿಸಿ, ಕಾಮಗಾರಿಗಳಲ್ಲಿ ತೊಡಗಿಸುವ ಮೂಲಕ ಹೆಚ್ಚು ಮಾನವ ದಿನಗಳನ್ನು ಸೃಜನೆ ಮಾಡಲು ಮತ್ತು ಅನುಷ್ಟಾನಗೊಳಿಸುವ ಕಾರ್ಯಸ್ಥಳದ ಮೇಲ್ವಿಚಾರಣೆ ಮಾಡಲು 05 ಬಿಎಫ್‌ಟಿ(ಬೇರ್ ಫುಟ್ ಟೆಕ್ನೀಷಿಯನ್) ಅಭ್ಯರ್ಥಿಗಳ ಆಯ್ಕೆಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಏಪ್ರಿಲ್ 03 ಅರ್ಜಿ ಸಲ್ಲಿಸಲು ಕಡೆಯ ದಿನವಾಗಿದ್ದು, ಅರ್ಜಿಯನ್ನು ಜಿಲ್ಲಾ ಪಂಚಾಯತ್ ಮಹಾತ್ಮಾ ಗಾಂಧಿ ನರೇಗಾ ಶಾಖೆಗೆ ಸಲ್ಲಿಸಬೇಕು. ಆಸಕ್ತ ಅಭ್ಯರ್ಥಿಗಳು ಈ ಯೋಜನೆಯಡಿ ಉದ್ಯೋಗ ಚೀಟಿ ಹೊಂದಿದ್ದು ಸಕ್ರಿಯ ಕೆಲಸಗಾರನಾಗಿರಬೇಕು. ಅಂದರೆ 2021 ರಿಂದ 2023 ರವರೆಗೆ 3 ವರ್ಷಗಳಲ್ಲಿ ಕನಿಷ್ಟ 2 ವರ್ಷಗಳಲ್ಲಿ 25 ದಿನಗಳಿಗೆ ಕಡಿಮೆ ಇಲ್ಲದಷ್ಟು ಯೋಜನೆಯಡಿ ಕೂಲಿಕಾರರಾಗಿ ಕೆಲಸ ಮಾಡಿರಬೇಕು.
ಕನಿಷ್ಟ 10 ನೇ ತರಗತಿ ಉತ್ತೀರ್ಣರಾಗಿರಬೇಕು. ಸ್ಥಳೀಯ ಅಭ್ಯರ್ಥಿಗೆ ಆದ್ಯತೆ ನೀಡಲಾಗುವುದು. ಮಹಿಳೆಯರಿಗೆ, ಪ.ಜಾ ಮತ್ತು ಪ.ಪಂ ಅಭ್ಯರ್ಥಿಗಳಿಗೆ ಸಾಕಷ್ಟು ಪ್ರಾಧ್ಯಾನ್ಯತೆ ನೀಡಲಾಗುವುದು. 45 ವರ್ಷಕ್ಕಿಂತ ಕಡಿಮೆ ವಯೋಮಿತಿ ಉಳ್ಳವರಾಗಿರಬೇಕು ಎಂದು ಜಿ.ಪಂ ಸಿಇಓ ಎನ್.ಹೇಮಂತ್ ತಿಳಿಸಿದ್ದಾರೆ.
ನರೇಗಾ ಯೋಜನೆ ಬರಿಗಾಲು ತಂತ್ರಜ್ಞರ( ಬಿಎಫ್ ಟಿ) ಹುದ್ದೆಗೆ ಅರ್ಜಿ ಆಹ್ವಾನ
Date: