Bharat Scouts and Guides ಶಿವಮೊಗ್ಗ ಜಿಲ್ಲಾ ಸ್ಕೌಟ್ ಗೈಡ್ ಸಂಸ್ಥೆ ಬದ್ಧತೆಯ ನಾಯಕರನ್ನು ಹೊಂದಿದೆ ಎಂದು ಪಿ.ಜಿ.ಆರ್ ಸಿಂಧ್ಯಾ ಮೆಚ್ಚುಗೆ ವ್ಯಕ್ತಪಡಿಸಿದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಶಿವಮೊಗ್ಗ ಜಿಲ್ಲಾ ಸಂಸ್ಥೆಗೆ ಭೇಟಿ ನೀಡಿ, ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಶಿವಮೊಗ್ಗ ಜಿಲ್ಲಾ ಸಂಸ್ಥೆಯ ಇತಿಹಾಸದಲ್ಲಿ ಬದ್ಧತೆಯ ನಾಯಕರು ಕಟ್ಟಿ ಬೆಳೆಸಿರವ ಸಂಸ್ಥೆಯನ್ನು ಉಳಿಸಿಕೊಂಡು, ಇನ್ನೂ ಹೆಚ್ಚಿನ ರೀತಿಯಲ್ಲಿ ಬೆಳೆಸಿಕೊಂಡು ಹೋಗುವಂತೆ, ಗಣತಿಯನ್ನು ಹೆಚ್ಚಿಸುವಂತೆ, ರಚನಾತ್ಮಕ ಚಟುವಟಿಕೆಯನ್ನು ಹಮ್ಮಿಕೊಳ್ಳುವಂತೆ, ಮುಂದಿನ ಬೇಸಿಗೆ ಶಿಬಿರಗಳನ್ನು ಯಶಸ್ವಿಗೊಳಿಸುವಂತೆ ಪದಾಧಿಕಾರಿಗಳಿಗೆ ತಿಳಿಸಿದರು. ರಾಜ್ಯದ ಎಲ್ಲಾ ಜಿಲ್ಲಾ ಸಂಸ್ಥೆ ಸ್ಥಳೀಯ ಸಂಸ್ಥೆಗಳು ಹಾಗೂ ಶಿಕ್ಷಣ ಸಂಸ್ಥೆಗಳ ಸಹಕಾರದಿಂದ ದೇಶದಲ್ಲೇ ನಮ್ಮ ಕರ್ನಾಟಕ ರಾಜ್ಯ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಪ್ರಥಮ ಸ್ಥಾನದಲ್ಲಿದೆ ಎಂದು ನುಡಿದರು.
ಅಂತರ ರಾಷ್ಟ್ರೀಯ ಉಪ ಆಯುಕ್ತರಾದ ಮಧುಸೂದನ್ ಮಾತನಾಡಿ, ಜಿಲ್ಲೆಯಲ್ಲಿ ಸ್ಕೌಟ್ ಗೈಡ್ ಚಳುವಳಿಯನ್ನು ವಿಸ್ತರಿಸಲು ವಿಫುಲ ಅವಕಾಶವಿದ್ದು, ಸರ್ವರೂ ಅದರ ಕಡೆ ಗಮನ ಹರಿಸಬೇಕೆಂದು ಕೋರಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಮುಖ್ಯ ಆಯುಕ್ತರಾದ ಶಕುಂತಲಾ ಚಂದ್ರಶೇಖರ ಮಾತನಾಡಿ, ಶಿವಮೊಗ್ಗ ಜಿಲ್ಲೆಯೂ ರಾಜ್ಯದ ಎಲ್ಲಾ ಕಾರ್ಯ ಚಟುವಟಿಕೆಯಲ್ಲಿ ಭಾಗವಹಿಸುತ್ತಿದೆ ಮತ್ತು ಮುಂದಿನ ಎಲ್ಲಾ ಕಾರ್ಯಗಳಿಗೂ ನಮ್ಮ ಸಹಕಾರ ಇರುತ್ತದೆ ಎಂದು ತಿಳಿಸಿದರು.
Bharat Scouts and Guides ಸಭೆಯಲ್ಲಿ ರಾಜ್ಯ ಸಂಘಟನಾ ಆಯುಕ್ತ ಎಂ.ಪ್ರಭಾಕರ್ ಭಟ್, ಸ್ಕೌಟ್ ಮಾಜಿ ಜಿಲ್ಲಾ ಆಯುಕ್ತರಾದ ಎಸ್.ಉಮೇಶ್ ಶಾಸ್ತ್ರೀ, ಜಿಲ್ಲಾ ಕೇಂದ್ರ ಸ್ಥಾನಿಕ ಆಯುಕ್ತರಾದ ಜಿ.ವಿಜಯ್ ಕುಮಾರ್, ರಾಘವೇಂದ್ರ, ಜಿಲ್ಲಾ ಖಜಾಂಜಿ ಚೂಡಾಮಣಿ ಈ ಪವಾರ್, ಜಂಟಿ ಕಾರ್ಯದರ್ಶಿ ಲಕ್ಷ್ಮಿ ರವಿ, ಸಹ ಕಾರ್ಯದರ್ಶಿ ವೀರೇಶಪ್ಪ, ಜಿಲ್ಲಾ ತರಬೇತಿ ಆಯುಕ್ತರಾದ ಶಿವಶಂಕರ ಮತ್ತು ಗೀತಾ ಚಿಕ್ಮಟ್ಟ್, ಸಹಾಯಕ ಜಿಲ್ಲಾ ಆಯುಕ್ತ ಹೆಚ್.ಪರಮೇಶ್ವರ, ತರಬೇತಿ ನಾಯಕಿ ಕಾತ್ಯಾಯಿನಿ, ಹೇಮಲತಾ, ಮೀನಾಕ್ಷಮ್ಮ, ತರಬೇತಿ ನಾಯಕ ರಾಜೇಶ್ ಅವಲಕ್ಕಿ, ಕಛೇರಿ ಸಿಬ್ಬಂದಿಗಳು ಉಪಸ್ಥಿತರಿದ್ದರು. ಸ್ಕೌಟ್ ಜಿಲ್ಲಾ ಆಯುಕ್ತರಾದ ಎಸ್.ಜಿ.ಆನಂದ್ ಸ್ವಾಗತಿಸಿದರು, ರೋವರ್ ಜಿಲ್ಲಾ ಆಯುಕ್ತರಾದ ಕೆ.ರವಿ, ಕಳೆದ ಮೂರು ತಿಂಗಳಿನ ವರದಿ ಸಲ್ಲಿಸಿದರು. ಜಿಲ್ಲಾ ಕಾರ್ಯದರ್ಶಿ ಚಂದ್ರಶೇಖರಯ್ಯ ವಂದಿಸಿದರು.