Thursday, March 13, 2025
Thursday, March 13, 2025

Guarantee Scheme ಸತ್ಯ & ಶುದ್ಧ ಮಾರ್ಗದಿಂದ ರಾಷ್ಟ್ರ ಕಟ್ಟಲು ಸಾಧ್ಯ- ಸಿ.ಎಸ್.ಚಂದ್ರಭೂಪಾಲ್

Date:

Guarantee Scheme ಅಂತರಂಗ ಮತ್ತು ಬಹಿರಂಗ ಶುದ್ದಿಯಿಂದ ಹಾಗೂ ಸತ್ಯದ ಮಾರ್ಗದಲ್ಲಿ ಸಾಗಿದಾಗ ಮಾತ್ರ ಸದೃಢ ರಾಷ್ಟ್ರ ಕಟ್ಟಲು ಸಾಧ್ಯವೆಂದು ಶ್ರೀ ಜಗದ್ಗುರು ರೇಣುಕಾಚಾರ್ಯ ಅವರು ಪ್ರತಿಪಾದಿಸಿದ್ದರು ಎಂದು ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷರಾದ ಚಂದ್ರಭೂಪಾಲ ಸಿ ಎಸ್ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಜಿಲ್ಲಾ ಜಂಗಮ ಹಾಗೂ ಬೇಡ ಜಂಗಮ ಸಮಾಜ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವವನ್ನುಉದ್ಘಾಟಿಸಿ ಮಾತನಾಡಿದರು.

ಶ್ರೀ ರೇಣುಕಾಚಾರ್ಯರು, ಬಸವಾದಿ ಶರಣರು ನೀಡಿದ ತತ್ವಗಳ ಆಧಾರದಲ್ಲಿ ಸಮಾಜವನ್ನು ಸುಂದರವಾಗಿ ಕಟ್ಟಬಹುದು. ಈ ಸಮಾಜ ಕೂಡ ಆಚಾರ್ಯರ ತತ್ವಗಳ ಆಧಾರದ ಮೇಲೆ ಉತ್ತಮ ಸಮಾಜ ಕಟ್ಟಿದೆ. ಅವರು ನೀಡಿದ ಅಂಶಗಳನ್ನು ಅನುಸರಿಸುವ ಮೂಲಕ ಅಭಿವೃದ್ದಿ ಸಾಧ್ಯವಾಗುತ್ತದೆ. ಶ್ರೀ ರೇಣುಕಾಚಾರ್ಯರು ಸೇರಿದಂತೆ ನಮ್ಮ ಸಮಾಜದ ಮಹನೀಯರು ಯಾವುದೇ ಒಂದು ಜಾತಿಗೆ ಸೀಮಿತರಲ್ಲ.
ಎಲ್ಲರೂ ಸಮಾನರಾಗಿ ಪರಿಪೂರ್ಣರಾಗಿ ಬದುಕಿದಾಗಲೇ ದೇಶ ಕಲ್ಯಾಣವಾಗುತ್ತದೆ. ಸತ್ಯದ ಮಾರ್ಗದಲ್ಲಿ ಸಾಗಬೇಕೆಂದು ಪ್ರತಿಪಾದಿಸಿದ ಆಚಾರ್ಯರು ಮನೆ ಮನೆಗೆ ಹೋಗಿ ಭಿಕ್ಷಾಟಣೆ ಮಾಡಿ ಧಾರ್ಮಿಕ ಚಿಂತನೆಯನ್ನು ಬಿತ್ತುತ್ತಿದ್ದರು. ಇಂತಹ ಮಹನೀಯರ ಆದರ್ಶ, ಸಿದ್ದಾಂತ, ತತ್ವಗಳನ್ನು ಮೈಗೂಡಿಸಿಕೊಂಡು ನಡೆಯೋಣವೆಂದು ತಿಳಿಸಿದರು.

Guarantee Scheme ಬಸವೇಶ್ವರ ವಿದ್ಯಾ ಸಂಸ್ಥೆಯ ನಿವೃತ್ತ ಪ್ರಾಚಾರ್ಯರಾದ ಗುರುಸಿದ್ದ ಶಾಸ್ತ್ರಿ ಬಿ ಟಿ ಎಂ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಶ್ರೀ ರೇಣುಕಾಚಾರ್ಯರ ಉದಯ ಸ್ಪೂರ್ತಿದಾಯಕವಾಗಿದೆ. ಶ್ರೀಗಳ ಬಗ್ಗೆ ನಾವು ಹೆಚ್ಚೆಚ್ಚು ತಿಳಿಯಬೇಕು. ಜಗದ್ಗುರು ರೇಣುಕಾಚಾರ್ಯ ಮತ್ತು ಪಂಚಾಚಾರ್ಯರನ್ನು ನೆನೆಸಿದರೆ ನಮ್ಮಲ್ಲಿರುವ ಪಾಪ ನಾಶವಾಗುತ್ತದೆ.
ಅಗಸ್ತ್ಯ ಮುನಿಗಳಿಗೆ ರೇಣುಕಾಚಾರ್ಯರು ಶಿವಾದ್ವೆಂತ ಸಿದ್ದಾಂತವನ್ನು ಉಪದೇಶಿಸುತ್ತಾರೆ. ಅದನ್ನೇ ಸಿದ್ದಾಂತ ಶಿಖಾಮಣಿ ಎಂದು ಕರೆಯಲಾಗಿತ್ತದೆ. ಇದರಲ್ಲಿ 55 ಲಿಂಗ ಅಂತಸ್ತು ಮತ್ತು 57 ಲಿಂಗಸ್ತರಗಳಿವೆ. ಜೀವ ದೇವನಾಗುವ ಬಗೆಯನ್ನು ಇದು ಹೇಳಿದೆ. ಲಿಂಗದ ಬಗ್ಗೆ ಶ್ರದ್ದೆ ಮತ್ತು ಭಕ್ತಿ ಇರುವವರೆಲ್ಲ ಲಿಂಗವನ್ನು ಆರಾಧಿಸಬಹುದು. ಲಿಂಗವನ್ನು ಗುರು ಧೀಕ್ಷೆಯ ಮೂಲಕ ನೀಡಲಾಗುವುದು.
ಲಿಂಗದ ಪೂಜೆಯಿಂದ ಹಿಂದಿನ ಜನ್ಮದ ಪಾಪ ಹೋಗಿ ಶಿವಜ್ಞಾನ ಪ್ರಾಪ್ತಿಯಾಗುತ್ತದೆ. ಗುರುವಿನ ರೂಪದಲ್ಲಿ ದೇವರು ಕಾಣಿಸಿಕೊಳ್ಳುತ್ತಾನೆ. ಲಿಂಗ ಕೇವಲ ಕಲ್ಲಲ್ಲ, ವಿಶ್ವ ಚೈತನ್ಯದ ಭಾಗ. ಇದನ್ನು ಪೂಜಿಸಿದರೆ ವಿಶ್ವವನ್ನೇ ಪೂಜಿಸಿದಂತೆ. ವೀರಶೈವ ಧರ್ಮದ ಪ್ರಾಚೀನ ಇತಿಹಾಸ ಮತ್ತು ಸಂಸ್ಕೃತಿ ಅವಲೋಕಿಸಿದರೆ ಸುಸಂಸ್ಕೃತ ಸಮಾಜ ನಿರ್ಮಿಸುವಲ್ಲಿ ಆಚಾರ್ಯರು, ಬಸವಾದಿ ಶರಣರು ಕೆಲಸ ಮಾಡುತ್ತಾ ಬಂದಿರುವುದನ್ನು ಕಾಣಬಹುದು.
ಕಲಿಯುಗದಲ್ಲಿ ಐದು ಪೀಠಗಳಿವೆ. ಪೀಠಗಳು ಶಾಂತ ಮತ್ತು ಸುಂದರ ಪರಿಸರದಲ್ಲಿವೆ. ಪೀಠಗಳು ಧರ್ಮ ಬೋಧನೆ ಅಷ್ಟೇ ಮಾಡುವುದಿಲ್ಲ, ಜೊತೆಗೆ ಆಧ್ಯಾತ್ಮಿಕ ವಿಜ್ಞಾನ , ಸಾಮಾಜಿಕ ಸೌಹಾರ್ಧತೆ, ಶಾಂತಿ ಸೂತ್ರಗಳನ್ನು ತಿಳಿಸುತ್ತವೆ. ಮನೋ ಬೆಳವಣಿಗೆ, ಸಂಸ್ಕೃತಿ ಬೆಳವಣಿಗೆ ಆಗಬೇಕು. ರೇಣುಕಾಚಾರ್ಯರು ಶಾಂತಿ, ಅಹಿಂಸೆಯನ್ನು ಪ್ರತಿಪಾದಿಸಿದ್ದಾರೆ.

ದಯ, ಕ್ಷಮೆ, ಶಾಂತಿ, ಮನೋನಿಗ್ರಹ, ದಾನ, ಪೂಜೆ, ಧ್ಯಾನ ಸೇರಿದಂತೆ ಸಿದ್ದಾಂತ ಶಿಖಾಮಣಿಯಲ್ಲಿನ ದಶ ಸೂತ್ರಗಳನ್ನು ಪಾಲಿಸೋಣ. ಸರ್ಕಾರ ಮಹನೀಯರ ಜಯಂತಿಗಳ ಆಚರಣೆಗಳನ್ನು ಆಚರಿಸುತ್ತಿರುವುದು ಅತ್ಯುತ್ತಮ ಹಾಗೂ ಶ್ಲಾಘನೀಯವಾಗಿದ್ದು ಎಲ್ಲರೂ ಇದರ ಉಪಯೋಗ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ರುದ್ರಮುನಿ ಸಜ್ಜನ್ ಮಾತನಾಡಿ, ಐದು ಸ್ಥಳಗಳಲ್ಲಿ ಪೀಠಗಳನ್ನು ಸ್ಥಾಪಿಸಿ, ವೀರಶೈವ ಧರ್ಮ ಪ್ರತಿಪಾದನೆ ಮಾಡಲಾಗುತ್ತಿದೆ. ಈ ಐದು ಪೀಠಗಳನ್ನು ಶಿವನ ಐದು ಮುಖಗಳೆಂದು ಹೇಳಲಾಗುತ್ತದೆ. ಶಾಂತಿ, ಸಹಬಾಳ್ವೆ, ಸಾಮರಸ್ಯ, ಜ್ಞಾನ ಬೋಧನೆಯನ್ನು ಇಲ್ಲಿ ಮಾಡುತ್ತಾ ಬರಲಾಗಿದೆ. ಬಹಳ ಭಕ್ತಿಯಿಂದ ಇಂತಹ ಜಯಂತಿಗಳ ಆಚರಣೆ ಆಗಬೇಕು. ಅವರು ನೀಡಿದ ತತ್ವಗಳನ್ನು ಅಳವಡಿಸಿಕೊಳ್ಳಬೇಕು. ವೀರಶೈವ ಲಿಂಗಾಯತ ಧರ್ಮದಲ್ಲಿ 83 ಪಂಗಡಗಳಿದ್ದು ಎಲ್ಲ ಪಂಗಡಗಳೂ ಒಂದೇ. ಒಟ್ಟಾಗಿ, ಒಗ್ಗಟ್ಟಿನಿಂದ ಜಯಂತಿಯನ್ನು, ಕಾರ್ಯಕ್ರಮಗಳನ್ನು ಮಾಡಬೇಕು ಎಂದ ಅವರು ಅಂಗದ ಮೇಲೆ ಲಿಂಗ ಇರಬೇಕು. ಲಿಂಗ ಪೂಜೆ ಮಾಡಿಕೊಳ್ಳಬೇಕೆಂದು ಕರೆ ನೀಡಿದರು.

ಜಿಲ್ಲಾ ಜಂಗಮ ಸಮಾಜದ ಅಧ್ಯಕ್ಷರಾದ ವೇದಮೂರ್ತಿ ಚಂದ್ರಯ್ಯ ಮಾತನಾಡಿ, ಆಚಾರ್ಯರು, ಶರಣಾದಿ ಬಸವರು ಜಾತಿ, ಮತಗಳನ್ನು ನೋಡಲಿಲ್ಲ. ಜಂಗಮ ಎಂದರೆ ಚರ. ಅನ್ನವನ್ನು ಭಿಕ್ಷೆ ಬೇಡಿ ತಂದು ಹಿಂದುಳಿದವರಿಗೆ ಅನ್ನವನ್ನು ನೀಡುತ್ತಾ, ಜೊತೆಗೆ ಜ್ಞಾನ ದಾಸೋಹ ಮಾಡಿದವರು ವೀರಶೈವ ಜಂಗಮ ಪೀಳಿಗೆ. ಧರ್ಮ ಪ್ರಚಾರ ಹಾಗೂ ಮಾನವನನ್ನು ದೇವನನ್ನಾಗಿ ಮಾಡುವುದು ಆಚಾರ್ಯರ ಉದ್ದೇಶವಾಗಿತ್ತು.

ಲಿಂಗಾರಾಧನೆಯಿಂದ ದೇಹದ ಶುಚಿತ್ವದ ಜೊತೆಗೆ ಮನಸ್ಸಿಗೆ ವಿಶ್ರಾಂತಿ ದೊರೆಯುತ್ತದೆ. ಆದ್ದರಿಂದ ಎಲ್ಲರೂ ಲಿಂಗ ಪೂಜೆ ಮಾಡಬೇಕೆಂದು ತಿಳಿಸಿದರು.
ಬಿಳಕಿ ಹಿರೇಮಠದ ರಾಚೋಟೇಶ್ವರ ಶಿವಾಚಾರ್ಯ ಸ್ವಾಮಿಗಳು, ಹರ‍್ನಹಳ್ಳಿಯ ಶ್ರೀ ರಾಮಲಿಂಗೇಶ್ವರ ಮಠದ ವಿಶ್ವೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ತಾಲ್ಲೂಕು ಬೇಡ ಜಂಗಮ ಸಮಾಜದ ಅಧ್ಯಕ್ಷರಾದ ವೇದಮೂರ್ತಿ ಲೋಕೇಶ್ ಹೆಚ್.ಎಂ, ಜಿಲ್ಲಾ ಬೇಡ ಜಂಗಮ ಸಮಾಜದ ಪ್ರಧಾನ ಕಾರ್ಯದರ್ಶಿ ಕೆ ಆರ್ ಸೋಮನಾಥ್, ಎಸಿ ಕಚೇರಿಯ ತಹಶೀಲ್ದಾರ್ ಎಂ.ಲಿಂಗರಾಜ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್, ಇತರೆ ಅಧಿಕಾರಿಗಳು, ಸಮಾಜದ ಮುಖಂಡರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

State Film Awards 2020 ನೇ ಸಾಲಿನ ಚಲನಚಿತ್ರ ಪ್ರಶಸ್ತಿ ಘೋಷಣೆ

State Film Awards 2020ನೇ ಸಾಲಿನ ಆಯ್ಕೆ ಸಮಿತಿಯು ಸಲ್ಲಿಸಿರುವ ವರದಿಯಲ್ಲಿ...

Klive Special ಹೆತ್ತವಳಿಗೊಂದು ಕವನ-ನಮನ

Klive Special ದೇವರ ಸ್ವರೂಪ ಗರ್ಭದಲ್ಲಿ ಹೊತ್ತುನವಮಾಸಕ್ಕೆ ಹೆತ್ತುಮೌಲ್ಯಗಳನ್ನೇ ಬಿತ್ತುಸಲಹಿದೆ ನೀಡಿ ಕೈತುತ್ತು ಅಮ್ಮ...

JCI Shivamogga ಜೆಸಿಐ ವತಿಯಿಂದ ಮಹಿಳಾ ವಸತಿ ತಾಂತ್ರಿಕ ಶಾಲೆಗೆ ಪ್ಯಾಡ್ ಬರ್ನಿಂಗ್ ಮಿಷನ್ ಕೊಡುಗೆ

JCI Shivamogga ಶಿವಮೊಗ್ಗ ಜೆಸಿಐ ಸಮೃದ್ಧಿ ಘಟಕದ ಸಂಸ್ಥಾಪಕ ಅಧ್ಯಕ್ಷರಾದ ಜೆಸಿ...