Chandragutti Renukamba Temple ಸೊರಬ ತಾಲೂಕಿನ ಪುರಾಣ ಹಾಗೂ ಐತಿಹಾಸಿಕ ಪ್ರಸಿದ್ಧ ಚಂದ್ರಗುತ್ತಿಯ ಶ್ರೀ ರೇಣುಕಾಂಬ ದೇವಿ ಮಹಾರಥೋತ್ಸವದಲ್ಲಿ ಪೊಲೀಸ್ ಇಲಾಖೆ ವತಿಯಿಂದ ಶ್ರೀ ದೇವಿಗೆ ಬೃಹತ್ ಹಾರವನ್ನು ಸಮರ್ಪಿಸಿ, ನಾಡಿನ ಜನತೆಯ ಸುಭೀಕ್ಷತೆಗೆ ಪ್ರಾರ್ಥಿಸಲಾಯಿತು.
ಈ ಸಂದರ್ಭದಲ್ಲಿ ಡಿವೈಎಸ್‌ಪಿ ಇ. ಕೇಶವ್, ಸಿಪಿಐ ಎಲ್. ರಾಜಶೇಖರ್, ಪಿಎಸ್‌ಐಗಳಾದ ಎಚ್.ಎನ್. ನಾಗರಾಜ್, ಚಂದನ್, ರಾಜುರೆಡ್ಡಿ, ಎಎಸ್‌ಐಗಳಾದ ಲಿಂಗರಾಜ್, ಶಿವಮೂರ್ತಿ, ಸಿಬ್ಬಂದಿ ನಾಗೇಶ್, ನಾಗರಾಜ್, ರಾಘವೇಂದ್ರ, ಲೋಕೇಶ್, ವಿನಯ್, ಪ್ರದೀಪ್, ಸಂದೀಪ್, ಮಂಜುನಾಥ ದೈವಜ್ಞ, ಉಷಾ, ಹೇಮಲತಾ ಸೇರಿದಂತೆ ಇಲಾಖಾ ಸಿಬ್ಬಂದಿ ಮತ್ತು ಸ್ಥಳೀಯ ಮುಖಂಡರು ಇದ್ದರು.