S.N.Chennabasappa ಶಿವಮೊಗ್ಗದ ಸಾಗರ ರಸ್ತೆಯ ಪುರದಾಳ್ ಕ್ರಾಸ್ ನಲ್ಲಿ ಸಿರಿಮಲ್ಲಿಗೆ ನಿವಾಸಿಗಳ ಸಂಘ ವು ಉದ್ಘಾಟನೆಗೊಂಡಿತು. ಶಿವಮೊಗ್ಗ ನಗರ ವಿಧಾಸಭಾ ಕ್ಷೇತ್ರದ ಸದಸ್ಯರಾದ ಎಸ್.ಎನ್. ಚನ್ನಬಸಪ್ಪ ಅವರು ಉದ್ಘಾಟಿಸಿದರು.
ಬಡಾವಣೆಯ ಫಲಕಕ್ಕೆ ಪುಷ್ಪಾರ್ಚನೆ
ಮಾಡಿ, ಉದ್ಯಾನವನದಲ್ಲಿ ಸಸಿ ನೆಟ್ಟು ನೀರೆರೆದರು.
ನಂತರ ಮಾತನಾಡಿದ ಶಾಸಕರು
ನಿವಾಸಿಗಳ ಸಂಘಕ್ಕೆ ಎಲ್ಲರೀತಿಯ ನೆರವು ಮತ್ತು ಸಹಕಾರ ನೀಡುತ್ತೇನೆ ಎಂದು ಭರವಸೆ ನೀಡಿದರು.
ಸಮಾರಂಭದ ಅಧ್ಯಕ್ಷತೆಯನ್ನ ಸಿರಿಮಲ್ಲಿಗೆ ನಿವಾಸಿಗಳ ಸಂಘದ ಅಧ್ಯಕ್ಷರಾದ ಡಾ.ಸುಧೀಂದ್ರ ಅವರು ವಹಿಸಿದ್ದರು. ಸಂಘದ ಗೌರವಾಧ್ಯಕ್ಷರಾದ ಅಧ್ಯಕ್ಷ ಚಂದ್ರಕಾಂತ್,ಓಂಕಾರಪ್ಪ ,ಉಪಾಧ್ಯಕ್ಷ ದೇವರಾಜ್ ಕಾರ್ಯದರ್ಶಿ ಶ್ರೀಧರ್ ಉಪಸ್ಥಿತರಿದ್ದರು