ರಾಜ್ಯ ಸರ್ಕಾರದ ನೂತನ ಕೈಗಾರಿಕಾ ನೀತಿಯಿಂದ ೨೦ಲಕ್ಷ ಉದ್ಯೋಗ ಸೃಷ್ಠಿಯಾಗಿರುವ ಸಾಧ್ಯತೆ ಇದೆ. ರಾಜ್ಯದಲ್ಲಿ ಹೆಚ್ಚಿನ ಹೂಡಿಕೆ ಆಕರ್ಷಿಸುವ ಉದ್ದೇಶದಿಂದ 13.688ಕೋಟಿಯ ಆರ್ಥಿಕ ನೆರವು ಮತ್ತು ಸಹಾಯ ನೀಡಿರುವುದು ಅಭಿನಂದನೀಯ ಎಂದು ಎಂಎಸ್‌ಎಂಇ ಸಮಿತಿ ಛೇರ್‌ಮನ್ ಪ್ರದೀಪ್ ಎಲಿ ಅವರು ತಿಳಿಸಿದ್ದಾರೆ.
ನಿನ್ನೆ ಮಂಡಿಸಿದ ಸರ್ಕಾರದ ಬಜೆಟ್‌ನಲ್ಲಿ 6.980ಕೋ. ರೂ. ಅನುದಾನ ಮೀಸಲಿಟ್ಟಿರುವುದರಿಂದ 50ಸಾವಿರ ಉದ್ಯೋಗ ಸೃಷ್ಠಿಗೆ ಸಹಕಾರಿ ಯಾಗಿದೆ. ಸಣ್ಣಕೈಗಾರಿಕೆಗಳಿಗೆ ಪ್ರೋತ್ಸಾ ಹಿಸಲು 185ಕೋಟಿ ನೀಡುತ್ತಿರುವುದು ಸ್ವಾಗತಾರ್ಹ ಎಂದು ತಿಳಿಸಿದರು.
ಶಿವಮೊಗ್ಗ ಜಿಲ್ಲೆಗೆ ಹೊರ ರಾಜ್ಯಗಳು ಮತ್ತು ನೆರೆ-ಹೊರೆ ಜಿಲ್ಲೆಗಳಿಂದ ಬರುವ ಭಾರಿ ಟ್ರಾನ್ಸ್ಪೋರ್ಟ್ ಮತ್ತು ಟ್ರಕ್‌ಗಳ ನಿಲುಗಡೆಗೆ ಎಲ್ಲೂ ಸ್ಥಳಗಳಿಲ್ಲ ಅದಕ್ಕಾಗಿ ಬಹು ಬೇಡಿಕೆಯಾಗಿರುವ ಟ್ರಕ್ ಟರ್ಮಿನಲ್ ನಿರ್ಮಿಸಲು ಇದಕ್ಕೆ ಸಂಬಂಧಪಟ್ಟ ಇಲಾಖೆಯು ಸರ್ಕಾರಕ್ಕೆ ಒತ್ತಡ ತಂದು ಸ್ಥಳ ನಿಗದಿ ಮಾಡಲು ಒತ್ತಾಯಿಸಿದ್ದಾರೆ.
ಜೊತೆಗೆ ಶಿವಮೊಗ್ಗ ಜಿಲ್ಲೆಯ ಜೋಗ ಸೇರಿದಂತೆ ಇನ್ನಿತರ ಪ್ರವಾಸೋಧ್ಯಮ ಕ್ಷೇತ್ರಗಳಿಗೆ ಇನ್ನಷ್ಠು ಅನುದಾನ ನೀಡಿದಲ್ಲಿ ವ್ಯಾಪಾರ ವಹಿವಾಟು ಕಾರ್ಯಗಳು ಹೆಚ್ಚು ವೃದ್ಧಿಯಾಗುತ್ತದೆ ಎಂದು ತಿಳಿಸಿದ್ದಾರೆ.
ಉದ್ಯೋಗ ಸೃಷ್ಡಿಸುವ ಉತ್ತಮ ಬಜೆಟ್ – ಪ್ರದೀಪ್ ಎಲಿ
Date: