Red Cross Sanjeevini Blood Bank 54ನೇ ರಾಷ್ಟೀಯ ಸುರಕ್ಷತಾ ಸಪ್ತಾಹ ಕಾರ್ಯಕ್ರಮದಡಿಯಲ್ಲಿ ಶಂಕರನಾರಾಯಣ ನಿರ್ಮಾಣ ಸಂಸ್ಥೆಯು ರೆಡ್ ಕ್ರಾಸ್ ರಕ್ತನಿಧಿ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ರಕ್ತದಾನ ಶಿಬಿರವನ್ನು ಜೋಗ ಫಾಲ್ಸ್‍ನಲ್ಲಿ ಆಯೋಜಿಸಲಾಯಿತು.
ರಕ್ತದಾನದ ಬಗ್ಗೆ ಅಲ್ಲಿ ಕೆಲಸ ಮಾಡುತ್ತಿರುವ ಹೊರರಾಜ್ಯದಿಂದ ಬಂದಿರುವ ಕಾರ್ಮಿಕರಿಗೆ ರಕ್ತದಾನದ ಮಹತ್ವವನ್ನು ತಿಳಿಸುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದ್ದು, ರೆಡ್ ಕ್ರಾಸ್ ರಕ್ತನಿಧಿಯ ಪ್ರತಿನಿಧಿಗಳಾದ ಡಿ.ಜೆ.ದಿನಕರ್ ರವರು ರಕ್ತದಾನದ ಮಹತ್ವದ ಬಗ್ಗೆ ಅಲ್ಲಿ ನೆರೆದಿದ್ದ ಎಲ್ಲರಿಗೂ ಸವಿಸ್ತಾರವಾಗಿ ತಿಳಿಸಿದರು.
ಎಸ್‍ಎನ್‍ಸಿ ಸಂಸ್ಥೆಯ ಪ್ರಾಜೆಕ್ಟ್ ಮ್ಯಾನೇಜರ್ ಮಾತನಾಡಿ, ರಕ್ತದಾನದ ಪ್ರಯೋಜನಗಳನ್ನು ತಮ್ಮ ಸಿಬ್ಬಂದಿಗಳಿಗೆ ಹಾಗೂ ಕಾರ್ಮಿಕರಿಗೆ ತಿಳಿಸಿ, ತಾವು ರಕ್ತದಾನ ಮಾಡುವುದರ ಮೂಲಕ ಅಲ್ಲಿ ನೆರೆದಿದ್ದ ಎಲ್ಲರಿಗೂ ರಕ್ತದಾನ ಮಾಡಲು ಪ್ರೋತ್ಸಾಹಿಸಿದರು.
ಎಸ್‍ಎನ್‍ಸಿ ಸಂಸ್ಥೆಯು ಆಯೋಜಿಸಿದ್ದ ಈ ರಕ್ತದಾನ ಶಿಬಿರದಲ್ಲಿ ಸುಮಾರು 43 ಜನರು ರಕ್ತದಾನ ಮಾಡಿದರು. ಈ ಕಾರ್ಯಕ್ರಮದಲ್ಲಿ ಶಂಕರನಾರಾಯಣ ಕನ್ಸ್‍ಟ್ರಕ್ಷನ್ಸ್ ಪ್ರೈವೇಟ್ ಲಿಮಿಟೆಡ್ ಪ್ರಾಜೆಕ್ಟ್ ಮ್ಯಾನೇಜರ್ ಸಂದೀಪ್.ಟಿ.ಆರ್, ಅಡ್ಮಿನ್ ಮ್ಯಾನೇಜರ್ ಶಶಿಧರ್ ಶೆಟ್ಟಿ, ಸುರಕ್ಷತಾ ಸಿಬ್ಬಂದಿ ತಬ್ರೇಜ್ ಹಾಗೂ ರೆಡ್ ಕ್ರಾಸ್ ಪ್ರತಿನಿಧಿಗಳಾದ ಡಿ.ಜೆ.ದಿನಕರ್, ಮಂಜುನಾಥ್ ಅಪ್ಪಾಜಿ, ಡಾ. ದಿನಕರ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.