Chamber Of Commerce Shivamogga ರಾಜ್ಯ ಸರ್ಕಾರದ ನೂತನ ಕೈಗಾರಿಕಾ ನೀತಿಯಿಂದ 20 ಲಕ್ಷ ಉದ್ಯೋಗ ಸೃಷ್ಟಿಯಾಗುವ ಸಾಧ್ಯತೆ ಇದೆ. ರಾಜ್ಯದಲ್ಲಿ ಹೆಚ್ಚಿನ ಹೂಡಿಕೆ ಆಕರ್ಷಿಸುವ ಉದ್ದೇಶದಿಂದ 13692 ಕೋಟಿ ರೂ. ಆರ್ಥಿಕ ನೆರವು ಮತ್ತು ಸಹಾಯಧನ ನೀಡಿರುವುದು ಅಭಿನಂದನೀಯ ಎಂದು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಹೇಳಿದ್ದಾರೆ.
ದೇಶದ ಜಿಡಿಪಿಗೆ ಶೇ. 8.4ರಷ್ಟು ರಾಜ್ಯ ಕೊಡುಗೆ ನೀಡಲಿದೆ. ಕರ್ನಾಟಕದ ಆರ್ಥಿಕತೆಯಲ್ಲಿ ಸೇವಾ ವಲಯಗಳ ಪಾಲು ಶೇ. 66ಕ್ಕೆ ಏರಿಕೆಯಾಗಿದೆ. ರಾಜ್ಯ ಸರ್ಕಾರದ ಬಜೆಟ್‌ನಲ್ಲಿ ಕೈಗಾರಿಕೆಗಳಿಗೆ ಪ್ರೋತ್ಸಾಹಿಸಲು 6,980 ಕೋಟಿ ರೂ. ಅನುದಾನ ಮೀಸಲಿಟ್ಟಿರುವುದರಿಂದ 50 ಸಾವಿರ ಉದ್ಯೋಗ ಸೃಷ್ಟಿಗೆ ಸಹಕಾರಿಯಾಗಲಿದೆ. 3,758 ಸಣ್ಣ ಕೈಗಾರಿಕೆಗಳಿಗೆ ಪ್ರೋತ್ಸಾಹಿಸಲು 185 ಕೋಟಿ ರೂ. ನೆರವು ನೀಡುತ್ತಿರುವುದು ಸ್ವಾಗತಾರ್ಹ.
ಬಜೆಟ್‌ನಲ್ಲಿ ಜಿಲ್ಲಾ ರಸ್ತೆ ಮತ್ತು ರಾಜ್ಯ ಹೆದ್ದಾರಿ ನಿರ್ಮಾಣಕ್ಕೆ ಅನುದಾನ ಮೀಸಲಿಡಸಲಾಗಿದೆ. ವಿಜಯಪುರ ವಿಮಾಣ ನಿಲ್ದಾಣಕ್ಕೆ 348 ಕೋಟಿ ರೂ. ಅನುದಾನ, ಮೈಸೂರು ರನ್‌ವೇ ರಸ್ತೆ ವಿಸ್ತರಣೆ, ರಾಯಚೂರು ವಿಮಾನ ನಿಲ್ದಾಣ ಪ್ರಾರಂಭಕ್ಕೆ ಅನುದಾನ, ರಾಮನಗರ, ಶಿಡ್ಲಘಟ್ಟದಲ್ಲಿ ಹೈಟೆಕ್ ರೇಷ್ಮೆ ಮಾರುಕಟ್ಟೆ ನಿರ್ಮಾಣ, ದೇವನಹಳ್ಳಿಯಲ್ಲಿ ಮೊಬೈಲ್ ಉತ್ಪಾದನಾ ಘಟಕ ಪ್ರಾರಂಭಿಸಲು ಸರ್ಕಾರ ಮುಂದಾಗಿರುವುದು ಅಭಿನಂದನೀಯ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನೇಕಾರರ ಆರ್ಥಿಕ ಸ್ವಾವಲಂವನೆಗೆ ವಿಶೇಷ ಪ್ಯಾಕೇಜ್, 5,000 ಕಿರು ಆಹಾರ ಸಂಸ್ಕರಣಾ ಘಟಕ, ಹತ್ತು ಜಿಲ್ಲಾ ಪ್ರವಾಸಿ ತಾಣದ ಅಭಿವೃದ್ಧಿಗೆ 50 ಕೋಟಿ ರೂ. ಬೆಂಗಳೂರಿನಲ್ಲಿ ಇವಿ ವಾಹನ ತಯಾರಿಕಾ ಕ್ಲಸ್ಟರ್ ನಿರ್ಮಾಣಕ್ಕೆ 25 ಕೋಟಿ ರೂ. ಅನುದಾನ ನೀಡಲಾಗಿದೆ. 8000 ಕೋಟಿ ರೂ. ಮೂಲಸೌಕರ್ಯ ಅಭಿವೃದ್ಧಿಗೆ ಅನುದಾನ, ಅಕ್ಕ ಕೋಆಪರೇಟೀವ್ ಸೋಸೈಟಿ ಸ್ಥಾಪನೆ, ಸಿನಿಮಾವನ್ನು ಕೈಗಾರಿಕಾ ಕ್ಷೇತ್ರದ ಉದ್ಯಮ ಎಂದು ಪರಿಗಣನೆ, ಮಹಾನಗರ ಪಾಲಿಕೆ ಅಭಿವೃದ್ಧಿಗೆ 2000 ಕೋಟಿ ರೂ. ಅನುದಾನ ಒದಗಿಸಲಾಗಿದೆ ಎಂದು ತಿಳಿಸಿದ್ದಾರೆ.
Chamber Of Commerce Shivamogga ಚಂದ್ರಗುತ್ತಿ ವಿಶೇಷ ಪ್ರವಾಸಿ ತಾಣವಾಗಿ ಅಭಿವೃದ್ಧಿಗೆ ನಮ್ಮ ಮೆಟ್ರೋ ದೇವನಹಳ್ಳಿವರೆಗೂ ವಿಸ್ತರಣೆ, ಮಂಗಳೂರಿನಲ್ಲಿ ಕ್ರೂಸ್ ವಾಟರ್ ಮಟ್ರೋ ನಿರ್ಮಾಣಕ್ಕೆ ಅನುದಾನ, ಬ್ರ್ಯಾಂಡ್ ಬೆಂಗಳೂರಿಗೆ 1800 ಕೋಟಿ ರೂ. ಅನುದಾನ ನೀಡಲಾಗಿದೆ. ಕೃಷಿ, ಕೈಗಾರಿಕೆ ಮತ್ತು ಪ್ರವಾಸೋದ್ಯಮ ದೃಷ್ಟಿಯಿಂದ ಹೆಚ್ಚಿನ ಅನುದಾನ ಒದಗಿಸಲಾಗಿದೆ ಎಂದು ತಿಳಿಸಿದ್ದಾರೆ.