Shimoga Premier Badminton League ಪ್ರಥಮ ಬಾರಿಗೆ ಐಪಿಎಲ್ ಮಾದರಿಯಲ್ಲಿ ನಗರದಲ್ಲಿ ಆಯೋಜಿಸಿದ್ದ ಶಿವಮೊಗ್ಗ ಬ್ಯಾಡ್ಮಿಂಟನ್ ಪ್ರೀಮಿಯರ್ ಲೀಗ್ ಪಂದ್ಯಾವಳಿಯಲ್ಲಿ ಆರ್ ಆರ್ ಸ್ಮಾಷರ‍್ಸ್ ತಂಡ ದ್ವಿತೀಯ ಸ್ಥಾನ ಪಡೆಯಿತು.
ಅತ್ಯಂತ ಯಶಸ್ವಿಯಾಗಿ ನಡೆದ ಶಿವಮೊಗ್ಗ ಬ್ಯಾಡ್ಮಿಂಟನ್ ಪ್ರೀಮಿಯರ್ ಲೀಗ್‌ನಲ್ಲಿ ಒಟ್ಟು ಎಂಟು ತಂಡಗಳು ಭಾಗವಹಿಸಿದ್ದವು. ಬೆಳಗ್ಗೆಯಿಂದ ರಾತ್ರಿ 8ರವರೆಗೂ ನಡೆದ ಪಂದ್ಯಗಳು ಅತ್ಯಂತ ರೋಚಕತೆಯಿಂದ ಕೂಡಿದ್ದವು. ಫೈನಲ್ ಪಂದ್ಯದಲ್ಲಿ ಜಿಕೆಜಿ ಬುಲ್ಸ್ ತಂಡ ಪ್ರಥಮ ಸ್ಥಾನ ಹಾಗೂ ಆರ್ ಆರ್ ಸ್ಮಾಷರ‍್ಸ್ ತಂಡವು ದ್ವಿತೀಯ ಸ್ಥಾನ ಪಡೆದವು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿದರು. ಮೋಹನ್, ಅಶೋಕ್, ತಂಡದ ಮಾಲೀಕರಾದ ಆರ್ ಆರ್ ಸ್ಮಾಷರ‍್ಸ್ ನ ರಮೇಶ್.ಎನ್, ಜೆಕೆಜಿ ಬುಲ್ಸ್ ನ ಗೋಕುಲ್, ಆರ್ ವಿ ಡಿ ರಾಕರ್ಸ್ ನ ರಘುನಂದನ್, ಅಲ್ಟ್ರಾ ಸ್ಮಾರ‍್ಸ್ ನ ಜಿತೇಂದ್ರ ಹಿರೇಮಠ್, ಸ್ಮಾಷ್ ಇಟ್ ಎಚ್‌ಬಿ ಶಿವಮೊಗ್ಗದ ಪ್ರಶಾಂತ್, ಗುತ್ತಿ ಸ್ಟ್ರೈಕರ್ಸ್ ನ ದರ್ಶನ್.ವಿ.ಪಿ, ಬ್ಯಾಡ್ಮಿಂಟನ್ ವಾರಿಯರ್ಸ್ ರಘು ಬಿ ಇ ಹಾಗೂ ಭದ್ರಾ ಬ್ಲ್ಯಾಕ್ ಪ್ಯಾಂಥರ್ ನ ಲೋಕೇಶ್ , ಕಾರ್ಯ ಕ್ರಮ ಸಂಯೋಜಕ ದೀಪಕ್ ಉಪಸ್ಥಿತರಿದ್ದರು.