Rovers Club Shivamogga ಸಮಾಜದಲ್ಲಿ ಸಾರ್ಥಕ ಸೇವೆ ಸಲ್ಲಿಸಿ ಸಾಧನೆ ಮಾಡಿ, ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ ನಮ್ಮ ರೋವರ್ಸ್ ಕ್ಲಬ್ ನ ಸದಸ್ಯರು ನಮ್ಮ ಸಂಸ್ಥೆಗೆ ಗೌರವ ತಂದಿದ್ದಾರೆ. ಇಂತಹ ಸಾಧಕರನ್ನು ಗುರುತಿಸಿ ಗೌರವಿಸಿದಾಗ ನಮ್ಮ ಸಂಸ್ಥೆಯ ಹೆಮ್ಮೆ ಹೆಚ್ಚುವುದು ಎಂದು ರೋವರ್ಸ್ ಕ್ಲಬ್ ನ ಅಧ್ಯಕ್ಷರಾದ ಹೆಚ್.ಸಿ.ಸುರೇಶ್ ಹೇಳಿದರು.
ಶಿವಮೊಗ್ಗ ನಗರದ ರೋವರ್ಸ್ ಕ್ಲಬ್ ನ ಸದಸ್ಯರು ಪದಾಧಿಕಾರಿಗಳು ವಿವಿಧ ಸಂಘ ಸಂಸ್ಥೆಗಳಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ ಗಣ್ಯರಾದ ಕೆ.ಶಂಕರ್ (ಗನ್ನಿ), ಎಂ.ಕೆ.ಸುರೇಶ್ ಕುಮಾರ್ (ಚಾಣಕ್ಯ), ಎಸ್.ಡಿ.ಸೋಮಶೇಖರ್, ಜಿ.ವಿಜಯ್ ಕುಮಾರ್, ಪರಶುರಾಮ್, ಪಿ.ಎಲ್.ನಾಗರಾಜ್ ಪಾಟ್ನರ್, ಎಸ್.ಜಿ.ಆನಂದ್, ರಾಕೇಶ್ ಇವರಿಗೆ ರೋವರ್ಸ್ ಕ್ಲಬ್ ನಲ್ಲಿ ನಡೆದ ಸರ್ವ ಸದಸ್ಯರ ಮಹಾಸಭೆಯಲ್ಲಿ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿ ಮಾತನಾಡಿದ ಅವರು, ಸುಮಾರು 40 ವರ್ಷಗಳ ಒಂದು ಕೌಟುಂಬಿಕ ಕ್ಲಬ್ ರೋವರ್ಸ್ ಕ್ಲಬ್ ಆಗಿದೆ. ನಮ್ಮ ಕ್ಲಬ್ ಮೂಲಕ ಸುನಾಮಿ ಸಂದರ್ಭದಲ್ಲಿ ಕೋವಿಡ್ ಹಾಗೂ ಬೇರೆ ಬೇರೆ ಸಂದರ್ಭಗಳಲ್ಲಿ ಹಲವಾರು ಸಮಾಜ ಮುಖಿ ಸೇವಾ ಕಾರ್ಯಗಳನ್ನು ನಿರ್ವಹಿಸುತ್ತಾ ಬಂದಿದೆ ಎಂದು ನುಡಿದರು.
Rovers Club Shivamogga ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ಹೆಚ್.ಕೃಷ್ಣ, ಕಾರ್ಯದರ್ಶಿ ಅ.ಮಾ.ಪ್ರಕಾಶ್, ಎಂ.ಬಿ.ವಿನಾಯಕ, ಎಸ್.ಚಿನ್ನಪ್ಪ, ಅಗಡಿ ಮಹೇಶ್, ಎಂ.ಆರ್.ಬಸವರಾಜ್, ಎಸ್.ಸುನಿಲ್ ಕುಮಾರ್, ಮಹಾದೇವಾಚಾರ್, ಮಾಜಿ ಅಧ್ಯಕ್ಷರಾದ ಕೆ.ಸಿ.ಮಲ್ಲಿಕಾರ್ಜುನ್, ಹಿರಿಯ ಸದಸ್ಯರುಗಳಾದ ಗೋವಿಂದಪ್ಪ, ಜಿ.ಕೆ.ಪ್ರಕಾಶ್, ರಾಜಶೇಖರ್, ದಿನೇಶ್, ಈಶ್ವರಪ್ಪ, ಮಾಜಿ ಖಜಾಂಚಿ ಎ.ಹೆಚ್.ಸುನಿಲ್ ಹಾಗೂ ಇನ್ನಿತರ ಸದಸ್ಯರು ಉಪಸ್ಥಿತರಿದ್ದರು.