Saturday, March 1, 2025
Saturday, March 1, 2025

CM Siddaramaiah ಮೊಬೈಲ್ & ಡಿಜಿಟಲ್ ಗೀಳಿನಿಂದ ಹೊರ ಬಂದು ಪುಸ್ತಕ‌ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು- ಸಿದ್ಧರಾಮಯ್ಯ

Date:

CM Siddaramaiah ನಾವು ಮಾನವೀಯ ಮೌಲ್ಯಗಳನ್ನು ರೂಪಿಸಿಕೊಳ್ಳಲು ಒಳ್ಳೆಯ ಪುಸ್ತಕಗಳನ್ನು ಓದುವ ಅಭ್ಯಾಸ ರೂಡಿಸಿಕೊಳ್ಳಬೇಕು. ಇದರಿದ ನಮ್ಮ‌ ಜ್ಞಾನ ವಿಕಾಸ ಹೊಂದುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಿವಿಮಾತು ಹೇಳಿದರು.

ವಿಧಾನಸಭೆಯ ವತಿಯಿಂದ ವಿಧಾನಸೌಧದಲ್ಲಿ ಪ್ರಪ್ರಥಮ ಬಾರಿಗೆ ಆಯೋಜಿಸಲಾಗಿರುವ ಪುಸ್ತಕ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿಗಳು, ನಾವು ಸಮಾದಲ್ಲಿ ಉತ್ತಮ ಪ್ರಜೆಗಳಾಗಿ ಬದುಕಬೇಕಾದರೆ ಉತ್ತಮವಾದ ಪುಸ್ತಕಗಳನ್ನು ಓದುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು. ಸಾಹಿತ್ಯದ ಮೌಲ್ಯಗಳು ಅರಿಯಲು ಪುಸ್ತಕಗಳೇ ಮೂಲಕಾರಣ. ನಾವು ಪುಸ್ತಕಗಳನ್ನು ಓದುವ ಅಭ್ಯಾಸವನ್ನು ಬೆಳೆಸಿಕೊಳ್ಳುವುದರ ಜೊತೆಗೆ ನಮ್ಮ ಮಕಳ್ಳಲ್ಲಿಯೂ ಸಹ ಈ ಅಭಿರುಚಿಯನ್ನು ಬೆಳೆಸಬೇಕು. ಮಕ್ಕಳು ಮೊಬೈಲ್ ಮತ್ತು ಡಿಜಿಟಲ್ ಚಟದಿಂದ ಹೊರಗೆ ಬಂದು ಪುಸ್ತಕಗಳನ್ನು ಓದುವ ಹವ್ಯಾಸ, ಅಭ್ಯಾಸ ಬೆಳೆಸಿಕೊಳ್ಳಬೇಕು. ಪುಸ್ತಕಗಳನ್ನು ಖರೀದಿಸಿ, ಮನೆ ಮನೆಯಲ್ಲಿ ಗ್ರಂಥಾಲಯ ಮಾಡಿಕೊಳ್ಳಿ ಎಂದು ಇದೇ ಸಂದರ್ಭದಲ್ಲಿ ಕರೆ ನೀಡಿದರು

ಇತ್ತೀಚಿನ ದಿನಗಳಲ್ಲಿ ಡಿಜಿಟಲಿಕರಣದ ದಿಸೆಯಿಂದಾಗಿ ಪುಸ್ತಕಗಳನ್ನು ಓದವ ಅಭ್ಯಾಸ ಕಡಿಮೆಯಾಗುತ್ತಿದೆ. ಹಿಂದೆ ಪ್ರತಿ ಮನೆಲ್ಲಿ ಕನಿಷ್ಟ ಹತ್ತಾರು ಪುಸ್ತಕಗಳಾದರೂ ಇರುತ್ತಿದ್ದವು. ಈಗ ಮೊಬೈಲ್ ಮತ್ತು ಡಿಜಿಟಲ್ ಹವ್ಯಾಸದಿಂದಾಗಿ ಪುಸ್ತಕಗಳ ಓದುವ ಅಭ್ಯಾಸವೇ ಕಡಿಮೆಯಾಗಿ, ನಮ್ಮಲ್ಲಿ ಸಾಹಿತ್ಯದ ಜ್ಞಾನವೇ ಇಲ್ಲದಂತಾಗಿದೆ ಎಂದು ತಿಳಿಸಿದರು.

ವಿಧಾಸಭೆಯ ಸಭಾಧ್ಯಕ್ಷರು ಹಾಗೂ ವಿಧಾನ ಪರಿಷತ್ತಿನ ಸಭಾಪತಿಗಳು ಆಲೋಚನೆ ಮಾಡಿ ಪುಸ್ತಕಮೇಳವನ್ನು ಏರ್ಪಾಡು ಮಾಡಿರುವುದು ಸಂತೋಷದ ವಿಷಯ. ಪುಸ್ತಕ ಮೇಳದಲ್ಲಿ 150 ಸ್ಟಾಲ್‌ ಗಳಿದ್ದು, ಬೇರೆ ಭಾಷೆಯ ಪುಸ್ತಕಗಳು ಕನ್ನಡಕ್ಕೆ ತರ್ಜುಮೆ ಯಾಗಿರುವ ಪುಸ್ತಕಗಳು, ಕನ್ನಡದಿಂದ ಬೇರೆ ಭಾಷಗೆ ತರ್ಜುಮೆಯಾಗಿರುವ ಪುಸ್ತಕಗಳು ಮಳಿಗೆಗಳಲ್ಲಿ ಲಭ್ಯವಿದೆ. ಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಳ್ಳುವುದಲ್ಲದೇ ಸಿಬ್ಬಂದಿಗಳು ಹೆಚ್ಚಾಗಿ ಪುಸ್ತಕಗಳನ್ನ ಖರೀದಿಸಿ ಓದಬೇಕು ಎಂದರು.

ವಿಧಾನಸೌಧದಲ್ಲಿ ಓದುಗರ, ಸಾಹಿತ್ಯಾಸಕ್ತರ ಹಬ್ಬ. ಇದನ್ನು ಸಾಹಿತ್ಯಾಸಕ್ತರು ಸದುಪಯೋಗ ಪಡಿಸಿಕೊಳ್ಳಬೇಕು. ಇನ್ನು ಮುಂದೆ ಪ್ರತೀ ವರ್ಷ ವಿಧಾನಸೌಧದಲ್ಲಿ ಸಾಹಿತ್ಯ, ಪುಸ್ತಕ ಹಬ್ಬ ನಡೆಸಲಾಗುವುದು‌. ಸರ್ಕಾರ ಇದಕ್ಕೆ ಎಲ್ಲಾ ರೀತಿಯ ಸಹಕಾರ ನೀಡಲಿದೆ ಎಂದರು.

CM Siddaramaiah ಈ ಪುಸ್ತಕಮೇಳವು ಕರ್ನಾಟಕದ ಪ್ರವಾಸಿಗರಿಗೆ ಅನುಕೂಲವಾಗಲಿ. ಅಲ್ಲದೇ ಶಾಸಕರು ಸಹ ಪುಸ್ತಕಗಳನ್ನು ಖರೀದಿ ಮಾಡಿ ತಮ್ಮ ಕ್ಷೇತ್ರದ ಗ್ರಂಥಾಲಯಗಳಿಗೆ ನೀಡಲಿ. ವಿಧಾನ ಸಭೆಯ ಸಭಾಧ್ಯಕ್ಷರು ಹಾಗೂ ವಿಧಾನ ಪರಿಷತ್ತಿನ ಸಭಾಪತಿಗಳು ಹಲವು ಯೋಜನೆಗಳನ್ನು ರೂಪಿಸಿದ್ದಾರೆ. ಅವರ ಯೋಜನೆಗಳಿಗೆ ಸರ್ಕಾರದ ಬೆಂಬಲವಿದೆ ಎಂದರು.‌

ಪುಸ್ತಕಗಳನ್ನು ಓದುವುದರಿಂದ ಇತಿಹಾಸ ಅರಿವಾಗುವುದು – ಉಪ ಮುಖ್ಯಮಂತ್ರಿ ಡಿ.ಕೆ ಶಿ

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತಾನಾಡುತ್ತಾ, ಪುಸ್ತಕಗಳನ್ನು ಓದುವುದರಿಂದ ಇತಿಹಾಸ ತಿಳಿಯುವುದರೊಂದಿಗೆ ಜ್ಞಾನದ ಅರಿವಾಗುತ್ತದೆ. ಅವಕಾಶಗಳನ್ನು ಬಳಸಿಕೊಳ್ಳುವುದು ಹೇಗೆ ಎಂದು ಸಭಾಧ್ಯಕ್ಷರು ತಿಳಿಸಿದ್ದಾರೆ. ವಿಧಾನಸಭೆಗೆ ಹೊಸ ರೂಪ ನೀಡಿದ್ದಾರೆ. ವಿಧಾನ ಸಭೆಯ ಸಭಾಧ್ಯಕ್ಷರು ಹಾಗೂ ವಿಧಾನ ಪರಿಷತ್ತಿನ ಸಭಾಪತಿಗಳು ಹಲವು ಯೋಜನೆಗಳನ್ನು ರೂಪಿಸಿದ್ದಾರೆ. ಅವರ ಯೋಜನೆಗಳಿಗೆ ಸರ್ಕಾರದ ಬೆಂಬಲವಿದೆ ಎಂದರು. ಪುಸ್ತಕ ಮೇಳವನ್ನು ಪ್ರತಿ ವರ್ಷ ನಡೆಯಬೇಕು. ಪುಸ್ತಕ ಮೇಳದಿಂದ ಮಕ್ಕಳಿಗೆ ಅನುಕೂಲವಾಗುತ್ತದೆ ಎಂದರು.

ವಿವಿಧ ಸಮುದಾಯಗಳನ್ನು ಒಗ್ಗೂಡಿಸುವ ಮಹತ್ವ ಪುಸ್ತಕ ಕ್ಕಿದೆ – ಸಭಾಧ್ಯಕ್ಷ ಯು.ಟಿ ಖಾದರ್

ಸಭಾಧ್ಯಕ್ಷರಾದ ಯು.ಟಿ ಖಾದರ್‌ ಪ್ರಾಸ್ತಾವಿಕವಾಗಿ ಮಾತನಾಡಿ, ವಿವಿಧ ಸಮುದಾಯಗಳನ್ನು ಒಗ್ಗೂಡಿಸಿ ಮುನ್ನಡೆಸುವ ಶಕ್ತಿ ಪುಸ್ತಕಗಳಿಗಿವೆ. ಪುಸ್ತಕಗಳನ್ನು ಓದಿ ಸಾಹಿತ್ಯವನ್ನು ಸಮರ್ಪಕವಾಗಿ ಅರ್ಥ ಮಾಡಿಕೊಳ್ಳಬೇಕು. ಸಾಹಿತಿಗಳಿಗೆ ವಿಶೇಷ ಸ್ಥಾನವನ್ನು ಕೊಡಬೇಕು. ಸಾಹಿತಿಗಳು ಸತ್ಯವನ್ನು ಅನ್ವೇಷಣೆ ಮಾಡುತ್ತಾರೆ. ಸತ್ಯಾಸತ್ಯತೆಗಳನ್ನು ತಮ್ಮ ಬರಹಗಳ ಮೂಲಕ ಸಮಾಜಕ್ಕೆ ತಿಳಿಸುತ್ತಾರೆ‌ ಎಂದು ಹೇಳಿದರು

ಇದೊಂದು ಐತಿಹಾಸಿಕ ಕಾರ್ಯಕ್ರಮ. ಈ ಪುಸ್ತಕ ಮೇಳಕ್ಕೆ ಸಹಕಾರ ನೀಡಿದ ಸರ್ಕಾರಕ್ಕೆ ಧನ್ಯವಾದಗಳು. ಈ ಪುಸ್ತಕಮೇಳದಿಂದ ಪುಸ್ತಕ ಪ್ರಿಯರಿಗೆ, ಬರಹಗಾರರಿಗೆ ಮುಖ್ಯವಾಗಿ ಪ್ರಕಾಶಕರಿಗೆ ಅನುಕೂಲವಾಗುತ್ತದೆ, ಸಾಹಿತಿಗಳ ಕನಸು ನನಸು ಮಾಡಲು ಪ್ರಕಾಶಕರು ಅತ್ಯವಶ್ಯ. ಪ್ರಕಾಶಕರು ಇಲ್ಲದಿದ್ದಲ್ಲಿ ಬರಹಗಳು ಜನರಿಗೆ ತಲುಪಲು ಸಾಧ್ಯವಿಲ್ಲ. ಈ ಪುಸ್ತಕ ಮೇಳಕ್ಕೆ ಎಲ್ಲರಿಗೂ ಮುಕ್ತ ಪ್ರವೇಶವಿದೆ. ಈ ಪುಸ್ತಕಮೇಳದಲ್ಲಿ ವಿದ್ಯಾರ್ಥಿಗಳು ಮುಖ್ಯವಾಗಿ ಯುವಕರು ಮುಕ್ತವಾಗಿ ಭಾಗವಹಿಸಿ ಪುಸ್ತಕಮೇಳದ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಪುಸ್ತಕಮೇಳಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪುಸ್ತಕ ಪ್ರಾಧಿಕಾರ ಕೈಜೋಡಿಸಿದ್ದಾರೆ. ಅಲ್ಲದೇ ಈ ಪುಸ್ತಕ ಮೇಳ ಕುರಿತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವಿಶೇಷ ಪ್ರಚಾರ ನೀಡಿದೆ ಎಂದರು. ಪುಸ್ತಕ ಮೇಳ ಯಶಸ್ವಿಯಾಗಲು ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದರು.

ಸಭಾಪತಿಗಳಾದ ಬಸವರಾಜ ಹೊರಟ್ಟಿ ಅವರು ಪುಸ್ತಕ ಮೇಳವು ಫೆಬ್ರವರಿ 27 ರಿಂದ ಮಾರ್ಚ್‌ 02 ರವರೆಗೆ ನಡೆಯಲಿದ್ದು, ಸಾರ್ವಜನಿಕರಿಗೆ ಮುಕ್ತವಾಗಿದೆ. ಕರ್ನಾಟಕದ ಎಲ್ಲಾ ರೀತಿಯ ಪುಸ್ತಕಗಳು ಒಂದೇ ಸೂರಿನಲ್ಲಿ ಲಭ್ಯವಿದೆ, ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಹಾಗೂ ಪುಸ್ತಕ ಮೇಳದ ಸಂದರ್ಭದಲ್ಲಿ ಕವಿಗೋಷ್ಠಿ, ಚರ್ಚೆಗಳು, ಸಂವಾದಗಳು ಜರುಗಲಿವೆ ಎಂದರು.

ಇದೇ ವೇಳೆ, ಹಿರಿಯ ಸಾಹಿತಿ, ಜ್ಞಾನಪೀಠ ಪುರಸ್ಕೃತ ಚಂದ್ರಶೇಖರ ಕಂಬಾರ, ಗೋವಾ ರಾಜ್ಯದ ಹಿರಿಯ ಸಾಹಿತಿ, ಜ್ಞಾನಪೀಠ ಪುರಸ್ಕೃತ ದಾಮೋದರ್ ಮೌಜೋ ಸೇರಿದಂತೆ ಇತರೆ ಹಿರಿಯ ಸಾಹಿತಿಗಳಿಗೆ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಗೋವಿಂದರಾಜು ಮತ್ತು ನಸೀರ್ ಅಹ್ಮದ್‌, ವಿಧಾನ ಪರಿಷತ್ತಿನ ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹ್ಮದ್‌, ಸರ್ಕಾರದ ನವದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಹೆಚ್.ಎಂ. ರೇವಣ್ಣ, ಶಾಸಕರಾದ ರಾಜುಗೌಡ, ರಿಜ್ವಾನ್ ಅರ್ಷದ್, ನಾಗರಾಜ ಯಾದವ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಶಿ ಸೇರಿದಂತೆ ಇತರೆ ಗಣ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

National Science Day ವೈಜ್ಞಾನಿಕ ಚಿಂತನೆಯಿಂದ ಮೂಢ ನಂಬಿಕೆ ತೊಡೆದು ಹಾಕಿ-ಡಿಡಿಪಿಐ ಮಂಜುನಾಥ್

National Science Day ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವ ಬೆಳಿಸಿಕೊಂಡು, ವಿಜ್ಞಾನದ ಅಧ್ಯಯನದಲ್ಲಿ...

KUWJ Shivamogga ಶಿವಮೊಗ್ಗದ ಪತ್ರಕರ್ತರಾದ ಗಿರೀಶ್ ‌ಉಮ್ರಾಯ್, ಶೃಂಗೇರಿ ಚಂದ್ರಶೇಖರ್ & ಕವಿತಾ ಅವರಿಗೆ ವಾರ್ಷಿಕ ದತ್ತಿ ಪ್ರಶಸ್ತಿ

KUWJ Shivamogga ವೃತ್ತಿ ಸೇವೆ, ಸಾಮಾಜಿಕ ಬದ್ಧತೆ ಮತ್ತು ಸಾಧನೆಗಳನ್ನು ಗುರುತಿಸಿ...

Karnataka Govt Urban Development ಹೊರಗುತ್ತಿಗೆ ವಾಹನ ಚಾಲಕರು & ಸಹಾಯಕರಿಗೆ ನೇರ‌ಪಾವತಿ ಮಾಡಲು ಮನವಿ

Karnataka Govt Urban Development ಶಿವಮೊಗ್ಗನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ವಾಹನ...