Thursday, February 27, 2025
Thursday, February 27, 2025

Mahashivratri 2025 “ಭೋಲೇನಾಥ್ ಕಿ‌ ಜೈ”-ಲೇ: ಎನ್.ಜಯಭೀಮ ಜೊಯಿಸ್. ಶಿವಮೊಗ್ಗ

Date:

Mahashivratri 2025 ಮಹಾಶಿವರಾತ್ರಿ ಹಿಂದೂಗಳ ಪ್ರಮುಖ ಹಬ್ಬಗಳಲ್ಲೊಂದಾಗಿದೆ.ಈ ಹಬ್ಬದ ವೈಶಿಷ್ಟ್ಯವೆಂದರೆ
ಇಡೀದಿನ ಉಪವಾಸ,ಜಾಗರಣೆಗಳನ್ನು ಮಾಡಿ,
ನಾಲ್ಕು ಯಾಮಗಳಲ್ಲಿಯೂ ಶಿವಪೂಜೆಯನ್ನು ಮಾಡುವುದರ ಮೂಲಕ ಆಚರಿಸಲಾಗುತ್ತದೆ.ಇಡೀ
ಭಾರತದಾದ್ಯಂತಬಹುತೇಕಎಲ್ಲಾಭಾಗಗಳಲ್ಲಿಯೂ ಆಚರಿಸುವ ಹಬ್ಬ ಇದಾಗಿದೆ.
ಶಿವಭಕ್ತರ ಪಾಲಿಗೆ ಮಂಗಳಕರರಾತ್ರಿ.ಸಾಮಾನ್ಯ
ವಾಗಿ ಎಲ್ಲ ಹಬ್ಬಗಳಲ್ಲಿಯೂ ದೇವರಿಗೆ ಹಗಲು
ಹೊತ್ತು ಪೂಜೆ ನಡೆಯುತ್ತದೆ.ರಾತ್ರಿ ಎಂದರೆ ಕತ್ತಲು,ಕತ್ತಲು ಎಂದರೆ ಅಜ್ಞಾನ,ಅಜ್ಞಾನವನ್ನು ಹೋಗಲಾಡಿಸಿ ಸುಜ್ಞಾನವನ್ನು ದಯಪಾಲಿಸು ಎಂದು ಶಿವನನ್ನು ಪ್ರಾರ್ಥಿಸುವ ಶುಭ ದಿನವೇ ಶಿವ
ರಾತ್ರಿ.ಅಜ್ಞಾನವೆಂಬೊ ಅಂಧಕಾರ ತುಂಬಿರುವಲ್ಲಿ
ಶಿವನು ತನ್ನ ಕಟಾಕ್ಷದಿಂದ ಅಜ್ಞಾನವನ್ನು ಪರಿಹರಿಸಿ
ಜ್ಞಾನದ ಬೆಳಕನ್ನು ನೀಡುತ್ತಾನೆ ಎಂಬ ದೃಢವಾದ ನಂಬಿಕೆ ಇದೆ.
ಶಿವಪುರಾಣದಲ್ಲಿಹೇಳಿರುವಪ್ರಕಾರಶಿವರಾತ್ರಿ
ಯಂದು ತನ್ನನ್ನು ಪೂಜಿಸುವ ಭಕ್ತರಿಗೆ ತಾನು ವಿಶೇಷವಾಗಿಅನುಗ್ರಹಮಾಡುವುದಾಗಿಸ್ವತ:ಶಿವನೇ ಪಾರ್ವತಿಯಲ್ಲಿ ತಿಳಿಸಿದ್ದಾನೆ.ಹಿಮವಂತನ ಮಗಳು ಪಾರ್ವತಿ ಈ ದಿನದಂದು ರಾತ್ರಿಯಿಡೀ ಶಿವನ ಕುರಿತು ಜಪ ಮಾಡುತ್ತಾ,ತಪಸ್ಸು ಮಾಡಿ ಶಿವನ ಮೆಚ್ಚಿಕೆಗೆಪಾತ್ರಳಾಗಿವಿವಾಹವಾದಳೆಂಬುದು ಪ್ರತೀತಿ.ಶಿವರುದ್ರತಾಂಡವನಾಡಿದ ರಾತ್ರಿಯೂ ಇಂದೇ ಎನ್ನಲಾಗುತ್ತದೆ.ದೇವತೆಗಳು ಹಾಗೂ ಅಸುರರ ನಡುವೆಸಮುದ್ರ ಮಂಥನ ನಡೆದು ವಿಷ ಉದ್ಭವವಾದಾಗ ಅದನ್ನು ಶಿವ ಕುಡಿದ.ವಿಷವನ್ನು ಗಂಟಲೊಳಗಿಂದ ಇಳಿಯದಂತೆ ಪಾರ್ವತೀ ಇಡೀ ರಾತ್ರಿತಡೆದಳು ಎಂದು ತಿಳಿಸುತ್ತದೆ ಶಿವಪುರಾಣ.
ವಿಷಕುಡಿದಪರಿಣಾಮವಾಗಿಶಿವನಕಂಠ(ಗಂಟಲು)ನೀಲಿ ಬಣ್ಣಕ್ಕೆತಿರುಗುತ್ತದೆ.ಆದ್ದರಿಂದಲೇ ಶಿವನನ್ನು “ನೀಲಕಂಠ”ಎಂದುಕರೆಯುತ್ತಾರೆ.ವಿಷ್ಣುಅಲಂಕಾರ ಪ್ರಿಯನಾದರೆ,ಶಿವ ಅಭಿಷೇಕ ಪ್ರಿಯ,ಸತತ ಜಲಾ
ಭಿಷೇಕ ಪ್ರಿಯನು.
Mahashivratri 2025 ಶಿವನುಭೋಲೇನಾಥಅಂದರೆಮುಗ್ಧನು.ಬೇಡಿದ್ದ
ನ್ನು ನೀಡುವ ದಯಾಳು.ಲಂಕಾಧೀಶ ರಾವಣನಿಗೆ ಅವನಭಕ್ತಿಗೆಮೆಚ್ಚಿಆತ್ಮಲಿಂಗವನ್ನೇಕೊಡುತ್ತಾನೆ.ಶಿವಭಕ್ತಮಾರ್ಕಂಡೇಯನಭಕ್ತಿಗೆಮೆಚ್ಚಿಅವನನ್ನು
ಚಿರಂಜೀವಿಯನ್ನಾಗಿಮಾಡುತ್ತಾನೆ.ಶಿವಭಕ್ತಸಿರಿಯಾಳನಿಗೂ ಒಲಿದ ಶಿವ.ಕರುಣಾಮಯಿಯಾದ ಶಿವನು ಭಕ್ತಿಗೆ ಒಲಿಯುವನು.
ಶಿವನದೇವಾಲಯಗಳಲ್ಲಿರಾತ್ರಿಯಿಡೀಪೂಜಾದಿಗಳು,ಶಿವನಸ್ತೋತ್ರಪಾರಾಯಣಎಲ್ಲವೂನಡೆಯುವವು.ಶಿವರಾತ್ರಿಯ ಮಾರನೆಯ ದಿನ ಪಾರಣೆಯನ್ನು
ಮಾಡಿ ಶಿವರಾತ್ರಿ ಹಬ್ಬವನ್ನು ಆಚರಿಸುವರು.
ಶಿವರಾತ್ರಿಹಬ್ಬದಂದುಭಕ್ತರುಶಿವನದೇವಾಲಯ
ಗಳಿಗೆಹೋಗಿಶಿವನದರ್ಶನಮಾಡಿಧನ್ಯರಾಗುವರು.
ಶಿವರಾತ್ರಿಹಬ್ಬದಂದು ಎಲ್ಲರಿಗೂಸನ್ಮಂಗಳವನ್ನು ಕರುಣಿಸುವಂತೆ ಪರಮೇಶ್ವರನಲ್ಲಿ ಭಕ್ತಿಯಿಂದ
ಪ್ರಾರ್ಥನೆ ಮಾಡೋಣ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Sahyadri Narayana Hospital Shimoga ಶ್ರೀಮತಿ ಮೀನಾಕ್ಷಿಯವರ ಆರೋಗ್ಯ ಸ್ಥಿತಿಗೆ ಸಂಬಂಧಿಸಿದ ವರದಿ ಬಗ್ಗೆ ಸ್ಪಷ್ಟೀಕರಣ

Sahyadri Narayana Hospital Shimoga ಸಹ್ಯಾದ್ರಿ ನಾರಾಯಣ ಆಸ್ಪತ್ರೆಯಲ್ಲಿ ದಾಖಲಾಗಿರುವ...

Chandragutti ಸೊರಬದಿಂದ ಚಂದ್ರಗುತ್ತಿಗೆ ಭಕ್ತಾದಿಗಳಿಂದ ಶಿವರಾತ್ರಿ‌ಯ ವಿಶೇಷ ಪಾದಯಾತ್ರೆ

Chandragutti ಸೊರಬ ಪಟ್ಟಣದ ಶ್ರೀ ರಂಗನಾಥ ದೇವಸ್ಥಾನದ ಮುಂಭಾಗದಿಂದ ಐತಿಹಾಸಿಕ ಹಾಗೂ...

Eshwara Vana ಶಿವರಾತ್ರಿ ಪ್ರಯುಕ್ತ‌ “ಈಶ್ವರವನ”ದಲ್ಲಿ ರಕ್ತದಾನ ಶಿಬಿರ

Eshwara Vana ಇಂದು ಮಹಾಶಿವರಾತ್ರಿ ಅಂಗವಾಗಿ ನವ್ಯಶ್ರೀ ಈಶ್ವರ ವನ ಅಬ್ಬಲೆಗೆರೆಯಲ್ಲಿ....

S N Channabasappa ಕ್ರೀಡೆ, ಮನಸ್ಸುಗಳನ್ನ ಪರಸ್ಪರ ಹತ್ತಿರವಾಗಿಸುತ್ತದೆ- ಶಾಸಕ ಚನ್ನಬಸಪ್ಪ

S N Channabasappa ಡೆಗಳಿಂದ ಮಾನಸಿಕ ಒತ್ತಡ ನಿವಾರಣೆಯಾಗುತ್ತದೆ. ಆರೋಗ್ಯಕ್ಕೆ ಆಟಗಳೇ...