Marikamba Temple ಸೊರಬ ತಾಲೂಕಿನ ಜಡೆ-ಕೋಟೆ ಯಡಗೊಪ್ಪ, ಕಲ್ಲಕೊಪ್ಪ ಗ್ರಾಮಗಳ ಶ್ರೀ ಮಾರಿಕಾಂಬ ದೇವಿ ಜಾತ್ರಾ ಮಹೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮ ಸಡಗರದಿಂದ ಜರುಗಿತು.
ಪ್ರತಿ ಐದು ವರ್ಷಕೊಮ್ಮೆ ನಡೆಯುವ ಶ್ರೀ ಮಾರಿಕಾಂಬಾ ಜಾತ್ರಾ ಮಹೋತ್ಸವ ವಿಶೇಷತೆಗಳಿಂದ ಕೂಡಿದ್ದು, ದೇಶ ಕಲ್ಯಾಣಾರ್ಥ ಪೂಜಾ ಉತ್ಸವಗಳನ್ನು ಒಳಗೊಂಡ ಉತ್ಸವ ಇದಾಗಿದೆ. ಗುರುವಾರದಿಂದ ಜಾತ್ರಾ ಮಹೋತ್ಸವ ಆರಂಭವಾಗಿದ್ದು, ಮಾ. ೩ರವರೆಗೆ ಜರುಗಲಿದೆ. ಮಹಾರಥೋತ್ಸವ ಸಕಲ ವಾಧ್ಯ ಮೇಳಗಳೊಂದಿಗೆ ಜರುಗಿತು. ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಉತ್ಸವ ಸಾಗಿತು.
ಡೊಳ್ಳು ಕುಣಿತ, ಬೆಳ್ತಂಗಡಿಯ ವಂಶಕಿಕ ಮತ್ತು ತಂಡದವರ ಮಿರರ್ ಡ್ಯಾನ್ಸ್ ರಥೋತ್ಸವಕ್ಕೆ ಮೆರಗು ತಂದವು. ಜಾತ್ರಾ ಮಹೋತ್ಸವ ಅಂಗವಾಗಿ ಶ್ರೀ ದೇವಿಗೆ ಭಕ್ತರಿಂದ ಹರಕೆ ತುಲಾಭಾರ ಅರ್ಪಿಸುವ ಕಾರ್ಯ ನಡೆಯಿತು. ಫೆ.23 ಮತ್ತು 24ರಂದು ಬಯಲು ಜಂಗಿ ಕುಸ್ತಿ ಏರ್ಪಡಿಸಲಾಗಿದೆ. ನಿತ್ಯ ಸಂಜೆ ದೇವಿ ಸನ್ನಿಧಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದೆ.
ಜಾತ್ರಾ ಸಮಿತಿ ಅಧ್ಯಕ್ಷ ರುದ್ರಗೌಡ ಕಮರೂರು, ಉಪಾಧ್ಯಕ್ಷ ನಟರಾಜ್ ಗೌಡ, ಖಜಾಂಚಿ ವಿರೂಪಾಕ್ಷಪ್ಪ ಯಡಗೊಪ್ಪ, ಪ್ರಧಾನ ಕಾರ್ಯದರ್ಶಿ ಬಸವಂತಪ್ಪ ಕೋಟೆ, ಗೌರವಾಧ್ಯಕ್ಷ ರಘು ಕಲ್ಲಕೊಪ್ಪ, ಕಾರ್ಯಾಧ್ಯಕ್ಷ ನಿಂಗಪ್ಪ, ಕಾರ್ಯದರ್ಶಿ ನಾರಾಯಣಪ್ಪ, ರಥ ನಿರ್ಮಾಣ ಸಮಿತಿ ಅಧ್ಯಕ್ಷ ನಾಗರಾಜ ಕಲ್ಲಕೊಪ್ಪ, ವೀರೇಶ್, ಚಂದ್ರಪ್ಪ ಸೇರಿದಂತೆ ಸಮಿತಿಯ ಸದಸ್ಯರು, ಸುತ್ತಲಿನ ಗ್ರಾಮಸ್ಥರು ಜಾತ್ರೋತ್ಸವದಲ್ಲಿ ಪಾಲ್ಗೊಂಡಿದ್ದರು.
Marikamba Temple ಸೊರಬ ತಾಲೂಕಿನಲ್ಲಿ ಶ್ರೀ ಮಾರಿಕಾಂಬ ದೇವಿ ಜಾತ್ರಾ ಮಹೋತ್ಸವ
Date: