Sahyadri Science College ನಾನು ಸಹ್ಯಾದ್ರಿ ವಿಜ್ಞಾನ ಕಾಲೇಜಿನಲ್ಲಿ ಓದಿದ್ದು ಎಂದು ಹೇಳಿಕೊಳ್ಳಲು ತುಂಬಾ ಹೆಮ್ಮೆ ಎನಿಸುತ್ತದೆ, ಅಂತಹ ಪ್ರತಿಷ್ಠಿತ ಕಾಲೇಜು ನಮ್ಮ ಸಹ್ಯಾದ್ರಿ ವಿಜ್ಞಾನ ಕಾಲೇಜು, ನಾವು ಓದಿದ ವಿದ್ಯಾ ಸಂಸ್ಥೆಗೆ ಏನಾದರೂ ಕೊಡುಗೆ ನೀಡುವ ಮೂಲಕ ನಮ್ಮ ಋಣವನ್ನು ತೀರಿಸಬೇಕು ಎಂದು ಶ್ರೀ ಕೆ.ಬಿ. ಅಶೋಕ್ ನಾಯ್ಕ್ ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಹಿರಿಯ ವಿದ್ಯಾರ್ಥಿ ಹಾಗೂ ಮಾಜಿ ಶಾಸಕರು ತಿಳಿಸಿದರು.
ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಂಘದ ಮನವಿ ಮೇರೆಗೆ 1989ನೇ ಬ್ಯಾಚ್ ನ ವಿದ್ಯಾರ್ಥಿಗಳಾದ ಶ್ರೀ ಕೆ. ಬಿ. ಅಶೋಕ್ ನಾಯ್ಕ್ ಮತ್ತು ಸ್ನೇಹಿತರು ಕಾಲೇಜಿಗೆ ಕುಡಿಯುವ ನೀರಿನ ಘಟಕವನ್ನು ಕೊಡುಗೆಯಾಗಿ ನೀಡಿ ಉದ್ಘಾಟಿಸಿ ಮಾತನಾಡಿದರು. ಈ ಕಾಲೇಜು ನಮಗೆಲ್ಲ ನಮ್ಮ ಜೀವನವನ್ನು ರೂಪಿಸಿಕೊಳ್ಳಲು ಕಾರಣವಾಗಿದೆ ಇಂತಹ ಕಾಲೇಜಿನಲ್ಲಿ ಓದಿದ ನಾವು ಧನ್ಯರು. ಈ ಕಾಲೇಜಿನಲ್ಲಿ ಓದಿದ ಪ್ರತಿಯೊಬ್ಬರು ಯಾವುದಾದರು ರೀತಿಯಲ್ಲಿ ಅಳಿಲು ಸೇವೆ ಮಾಡುವ ಮೂಲಕ ಕಾಲೇಜಿನ ಶ್ರೇಯೋಭಿವೃದ್ಧಿಗೆ ಕೈಜೋಡಿಸಿ ಎಂದು ಮನವಿ ಮಾಡಿದರು. ಕಾಲೇಜಿನ ಪ್ರಾಚಾರ್ಯರು ಹಾಗೂ ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರು ಆದ ಡಾ. ರಾಜೇಶ್ವರಿ. ಎನ್ ಮಾತನಾಡಿ ಸುಮಾರು ಮೂರು ಲಕ್ಷ ರೂಪಾಯಿ ಬೆಲೆಬಾಳುವ ನೀರಿನ ಘಟಕವನ್ನು ನಮ್ಮ ಕಾಲೇಜಿನ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ನೆರವು ನೀಡಿದ ಶ್ರೀ ಅಶೋಕ್ ನಾಯ್ಕ್ ಮತ್ತು ಅವರ ಸ್ನೇಹಿತರಿಗೆ ಕಾಲೇಜಿನ ಪರವಾಗಿ ತುಂಬು ಹೃದಯದ ಧನ್ಯವಾದಗಳನ್ನು ತಿಳಿಸಿದರು. ಸಾಕಷ್ಟು ಜನ ಹಿರಿಯ ವಿದ್ಯಾರ್ಥಿಗಳು ನಾವು ಏನಾದರೂ ಕಾಲೇಜಿಗೆ ಕೊಡುಗೆ ಕೊಡಬೇಕು ಎಂಬ ಆಶಯ ವ್ಯಕ್ತಪಡಿಸಿರುವರು ಎಂಬುದನ್ನು ತಿಳಿಸಿದರು.
Sahyadri Science College ಹಿರಿಯ ವಿದ್ಯಾರ್ಥಿಗಳ ಸಂಘದ ಶ್ರೀ ಉಮೇಶ್ ಶಾಸ್ತ್ರಿ ಅವರು ಮಾತನಾಡಿ ನಮ್ಮ ಬ್ಯಾಚಿನಲ್ಲಿ ಸಾಕಷ್ಟು ಜನ ನಾವು ಕಾಲೇಜಿಗೆ ಏನಾದರೂ ಕೊಡುಗೆ ನೀಡೋಣ ಎಂದು ತಮ್ಮ ಆಶಯವನ್ನು ವ್ಯಕ್ತಪಡಿಸಿರುತ್ತಾರೆ ಎಂದು ತಿಳಿಸಿದರು. ಹಿರಿಯ ವಿದ್ಯಾರ್ಥಿಗಳ ಸಂಘದ ಕಾರ್ಯದರ್ಶಿಗಳಾದ ಡಾ. ನಾಗರಾಜ ಪರಿಸರ ಅಭಿನಂದನೆಗಳನ್ನು ತಿಳಿಸಿ ಇನ್ನೂ ಕಾಲೇಜಿನಲ್ಲಿ ಸಾಕಷ್ಟು ಕೆಲಸಗಳು ಆಗಬೇಕಿದೆ ಕಾಲೇಜಿನ ಅಭಿವೃದ್ಧಿಗೆ ಎಲ್ಲಾ ಹಿರಿಯ ವಿದ್ಯಾರ್ಥಿಗಳು ಕೈಜೋಡಿಸಬೇಕೆಂದು ವಿನಂತಿಸಿದರು. ಕೂಡಲೇ ಆಗಬೇಕಿರುವ ಕೆಲವು ಕೆಲಸಗಳ ಬಗ್ಗೆ ತಿಳಿಸಿದರು.
೧.ಕಟ್ಟಡದ ಸುರಕ್ಷತೆಗೆ ಮೇಲ್ಭಾಗದಲ್ಲಿ ಶೀಟ್ ಹಾಕಿಸುವುದು
೨. ಕಾಲೇಜಿಗೆ ಸೋಲಾರ್ ವಿದ್ಯುತ್ ವ್ಯವಸ್ಥೆ ಮಾಡುವುದು
೩. ಪ್ರಯೋಗಶಾಲೆಗಳಿಗೆ ಬೇಕಿರುವ ಉಪಕರಣಗಳನ್ನು ಒದಗಿಸುವುದು.
ಹೀಗೆ ಪಟ್ಟಿ ಬೆಳೆಯುತ್ತದೆ ಆದರೆ ತುರ್ತಾಗಿ ಆಗಬೇಕಿರುವ ಕೆಲಸಗಳನ್ನು ನಮ್ಮ ನಮ್ಮ ಬ್ಯಾಚಿನ ಎಲ್ಲಾ ಸ್ನೇಹಿತರು ಒಟ್ಟಾಗಿ ಸೇರಿ ನಾವು ಕಾರ್ಯನಿರ್ವಹಿಸುತ್ತಿರುವ ಕಂಪನಿಗಳ ಸಿ.ಎಸ್.ಆರ್ ಅನುದಾನವನ್ನು ಬಳಸಿ ಕಾಲೇಜಿನ ಶ್ರೇಯೋಭಿವೃದ್ಧಿಗೆ ಕೈಜೋಡಿಸಲು ಡಾ.ನಾಗರಾಜ ಪರಿಸರ ವಿನಂತಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ವಿದ್ಯಾರ್ಥಿಯಾದ ಶ್ರೀ ವಿಜಯಕುಮಾರ್ ವಿದ್ಯಾರ್ಥಿಗಳ ಸಂಘದ ಪದಾಧಿಕಾರಿಗಳಾದ ಡಾ. ಲತಾ ಕೆ. ಪಿ., ಡಾ. ಕೆ. ಎಲ್. ನಾಯ್ಕ್ , ಹಾಗೂ ಅಧ್ಯಾಪಕ ಅದ್ಯಾಪಕೇತರ ವೃಂದದವರು ಭಾಗವಹಿಸಿದ್ದರು.
Sahyadri Science College ನಾನು ಸಹ್ಯಾದ್ರಿ ವಿಜ್ಞಾನ ಕಾಲೇಜಿನಲ್ಲಿ ಓದಿದ್ದು ಎಂದು ಹೇಳಿಕೊಳ್ಳಲು ತುಂಬಾ ಹೆಮ್ಮೆ ಎನಿಸುತ್ತದೆ :ಕೆ.ಬಿ. ಅಶೋಕ್ ನಾಯ್ಕ್
Date: