ವಿಧಾನಸೌಧದ ಆವರಣದಲ್ಲಿರುವ ನಾಡದೇವಿ ಭುವನೇಶ್ವರಿ ಪ್ರತಿಮೆ ಮುಂಭಾಗದಲ್ಲಿ ಕವಿ ಚಕ್ರವರ್ತಿ ರನ್ನ ವೈಭವದ ‘ರನ್ನರಥ’ಕ್ಕೆ ಅಬಕಾರಿ ಮತ್ತು ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಆರ್ ಬಿ ತಿಮ್ಮಾಪೂರ ಅವರು ಚಾಲನೆ ನೀಡಿದರು.
ಫೆಬ್ರವರಿ 22, 23 ಹಾಗೂ 24 ರಂದು ಮುಧೋಳ ಹಾಗೂ ಬೆಳಗಲಿಯಲ್ಲಿ ಕವಿ ಚಕ್ರವರ್ತಿ ರನ್ನ ವೈಭವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ರನ್ನ ವೈಭವ 2025 ಸಾಂಸ್ಕೃತಿಕ ಉತ್ಸವದ ಅಂಗವಾಗಿ ಇಂದು ರನ್ನರಥಕ್ಕೆ ಚಾಲನೆ ನೀಡಲಾಯಿತು. ರನ್ನರಥವೂ ವಿವಿಧ ಜಿಲ್ಲೆಗಳಲ್ಲಿ ಸಂಚರಿಸಿ ಫೆಬ್ರವರಿ 22 ರಂದು ಬೆಳಗಲಿಗೆ ತಲುಪಲಿದೆ.
ಕಾರ್ಯಕ್ರಮದಲ್ಲಿ ಶಾಸಕರಾದ ಜೆ ಟಿ ಪಾಟೀಲ್, ಬಿಬಿ ಚಿಮ್ಮನಕಟ್ಟಿ, ಪರಿಷತ್ ಸದಸ್ಯರಾದ ಪಿ ಹೆಚ್ ಪೂಜಾರ್, ಹನುಮಂತ ನಿರಾಣಿ, ಮಾಜಿ ಸಚಿವ ಅಜಯ್ ಕುಮಾರ್ ಸರ್ ನಾಯಕ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರಾದ ಧರಣಿದೇವಿ ಮಾಲಗತ್ತಿ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಾಕ್ಷರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.