Delhi Assembly Elections ರಾಷ್ಟ್ರ ರಾಜಧಾನಿ ದೆಹಲಿ ವಿಧಾನಸಭೆ ಚುನಾವಣೆ ಫಲಿತಾಂಶ ಬಂದಿದ್ದು, 27 ವರ್ಷಗಳ ನಂತರ ಬಿಜೆಪಿ ಭರ್ಜರಿ ಗೆಲುವು ಪಡೆದಿದೆ. ಸರ್ಕಾರ ರಚನೆಗೆ ಬೇಕಾದ ಸಿದ್ಧತೆಗಳು ಆರಂಭವಾಗಿವೆ ಎನ್ನಲಾಗುತ್ತಿದೆ.
ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ) ಹೀನಾಯ ಸೋಲನುಭವಿಸಿದ ಒಂದು ದಿನದ ನಂತರ ದೆಹಲಿ ಮುಖ್ಯಮಂತ್ರಿ ಅತಿಶಿ ಭಾನುವಾರ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರಿಗೆ ರಾಜೀನಾಮೆ ನೀಡಿದ್ದಾರೆ.
ಬರೋಬ್ಬರಿ 26 ವರ್ಷಗಳ ನಂತರ ದೆಹಲಿಯಲ್ಲಿ ಬಿಜೆಪಿ ಅಧಿಕಾರಕ್ಕೆ ಮರಳಿದೆ. 70 ವಿಧಾನಸಭಾ ಕ್ಷೇತ್ರಗಳ ಪೈಕಿ 48 ಕ್ಷೇತ್ರಗಳಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿದೆ.
ಫೆಬ್ರುವರಿ 5 ರಂದು ನಡೆದ ಚುನಾವಣೆಯಲ್ಲಿ ಎಎಪಿ 22 ಸ್ಥಾನಗಳನ್ನು ಗೆದ್ದರೆ, ಕಾಂಗ್ರೆಸ್ ಶೂನ್ಯಕ್ಕೆ ತೃಪ್ತಿಪಟ್ಟುಕೊಂಡಿದೆ.
ವಿಧಾನಸಭಾ ಚುನಾವಣೆ ಫಲಿತಾಂಶದಲ್ಲಿ ಎಎಪಿ ಪರಿಷ್ಠ ಅರವಿಂದ ಕೇಜ್ರಿವಾಲ್ ಅವರಿಗೆ ಭಾರಿ ಮುಖಭಂಗವಾಗಿದೆ.
ಅರವಿಂದ ಕೇಜ್ರಿವಾಲ್ ಅವರಿಗೆ ನವದೆಹಲಿ ಕ್ಷೇತ್ರದಲ್ಲಿ ಬಿಜೆಪಿಯ ಪರ್ವೇಶ್ ವರ್ಮಾ ವಿರುದ್ಧ ಸೋಲಾಗಿದೆ.
Delhi Assembly Elections ಚುನಾವಣಾ ಆಯೋಗದ ವೆಬ್ಸೈಟ್ನಲ್ಲಿ ದೊರೆತ ಮಾಹಿತಿ ಪ್ರಕಾರ, ಬಿಜೆಪಿ ಅಭ್ಯರ್ಥಿ ಪರ್ವೇಶ್ ವರ್ಮಾ 30,088 ಮತಗಳನ್ನು ಪಡೆದರೆ, ಕೇಜ್ರಿವಾಲ್ ಪರ 25,999 ಮತಗಳು ಚಲಾವಣೆಯಾಗಿವೆ. ಕಾಂಗ್ರೆಸ್ ಅಭ್ಯರ್ಥಿ ಸಂದೀಪ್ ದೀಕ್ಷಿತ್ 4,568 ಮತಗಳನ್ನು ಪಡೆದಿದ್ದಾರೆ. ಕೇಜ್ರಿವಾಲ್ ಅವರಿಗೆ 4,089 ಮತಗಳ ಅಂತರದ ಸೋಲಾಗಿದೆ. ಅಣ್ಣ ಹಜಾರೆ ಅವರ ಗೈರು ಹಾಜರಿ ಕೂಡ ಆಪ್ ಗೆ ಸೋಲುಂಟಾಗಲು ಬಲವಾದ ಕಾರಣವಾಗಿದೆ. ಪ್ರಮುಖವಾಗಿ ಅಣ್ಣಾ ಹಜಾರೆ ಅವರು ಆರಂಭದಲ್ಲೇ ಕೇಜ್ರಿವಾಲ್ ಅವರಿಗೆ ಅಬಕಾರಿ ಮತ್ತು ಮುಂತಾದ ವಿಷಯಗಳ ಬಗ್ಗೆ ಕೈಗೆತ್ತಿಕೊಳ್ಳದಿರಲು ಎಚ್ಚರಿಕೆ ನೀಡಿದ್ದರು. ಆದರೆ ಅವರ ಮಾತನ್ನು ಲೆಕ್ಕಿಸದೆ ಕೇಜ್ರಿವಾಲ್ ಅವರು ತಾವೇ ಸೃಷ್ಟಿಸಿದ ಭ್ರಷ್ಟಾಚಾರದ ಬಲೆಯೊಳಗೆ ಸಿಕ್ಕು ಅಧಿಕಾರ ಕಳೆದುಕೊಂಡರು. ಕಾಂಗ್ರೆಸ್ ಕೇವಲ ಗ್ಯಾರಂಟಿಗಳ ಮೇಲೆಯೇ ಚುನಾವಣೆಯನ್ನು ಎದುರಿಸಿತು. ಆದರೆ ಅದು ಹಿಮಾಚಯ ಪ್ರದೇಶ ಮತ್ತು ಕರ್ನಾಟಕ ರಾಜ್ಯದಲ್ಲಿನ ಗ್ಯಾರೆಂಟಿ ಯೋಜನೆಗಳ ಕುಂಟುವಿಕೆ ಪ್ರಸ್ತುತ ದೆಹಲಿ ಪ್ರತಿಕೂಲವಾಗಿ ಪರಿಣಮಿಸಿತು.