JCI Shivamogga ಸಮಾಜಮುಖಿ ಕಾರ್ಯಗಳಲ್ಲಿ ಜೆಸಿಐ ಘಟಕಗಳು ಸಂಘಟನಾತ್ಮಕವಾಗಿ ಕೆಲಸ ಮಾಡಲಿವೆ ಎಂದು ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಘಟಕದ ಅಧ್ಯಕ್ಷ ಜಿ.ಗಣೇಶ್ ಹೇಳಿದರು.
ಶಿವಮೊಗ್ಗ ನಗರದ ಮಥುರಾ ಪ್ಯಾರಾಡೈಸ್ ಸಭಾಂಗಣದಲ್ಲಿ ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಘಟಕದಿಂದ ಆಯೋಜಿಸಿದ್ದ ಜೆಸಿಐ ಶಿವಮೊಗ್ಗ ಶಕ್ತಿ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಸ್ವಾತಿ ಅವರು 24 ಗಂಟೆಯಲ್ಲಿ ಹೊಸ ಘಟಕ ಮಾಡಿರುವುದು ಶ್ಲಾಘನೀಯ. ಮುಂದಿನ ದಿನಗಳಲ್ಲಿ ಜೆಸಿಐನಿಂದ ಹೆಚ್ಚು ಸಮಾಜಮುಖಿ ಕಾರ್ಯ ನಡೆಸಲು ಒಟ್ಟಾಗಿ ಕಾರ್ಯ ನಿರ್ವಹಿಸೋಣ ಎಂದು ತಿಳಿಸಿದರು.
ಜೆಸಿಐ ವಲಯ-24 ಅಧ್ಯಕ್ಷ ಗೌರೀಶ್ ಭಾರ್ಗವ್ ಮಾತನಾಡಿ, 24 ಗಂಟೆಯಲ್ಲೇ ಹೊಸ ಘಟಕ ಸ್ಥಾಪಿಸಿದ ಸ್ವಾತಿ ಅವರು ಜೆಸಿಐ ಶಿವಮೊಗ್ಗ ಶಕ್ತಿ ಘಟಕಕ್ಕೆ ನಿಜವಾಗಿಯೂ ಶಕ್ತಿಯೇ ಆಗಿದ್ದಾರೆ.
ಶಕ್ತಿಯುತವಾದ ಘಟಕಕ್ಕೆ ಶಕ್ತಿಯುತ ವ್ಯಕ್ತಿ ಅಧ್ಯಕ್ಷರಾಗಿರುವುದು ಸಂತಸ ತಂದಿದೆ. ಅಧಿಕಾರ ವಹಿಸಿಕೊಂಡ ಕೆಲ ಸಮಯದಲ್ಲಿ ಶೇ. 100 ಸದಸ್ಯತ್ವ ಹೆಚ್ಚು ಮಾಡಿದ್ದು, ಶಕ್ತಿ ಬುಲೆಟಿನ್ ರಿಲೀಸ್ ಮಾಡಿರುವುದು, ಜತೆಗೆ ತರಬೇತಿ ಮತ್ತು ಸಾಮಾಜಿಕ ಜಾಗೃತಿ ವಿಚಾರದಲ್ಲಿ ಶಿವಮೊಗ್ಗ ಸಿಬಿಆರ್ ರಾಷ್ಟ್ರೀಯ ಕಾನೂನು ಕಾಲೇಜಿನವರೊಂದಿಗೆ ಎಂಎಯು ಕೂಡ ಮಾಡಿಕೊಳ್ಳುತ್ತಿರುವ ವಿಚಾರ ಅಭಿನಂದನೀಯ ಎಂದು ಅಭಿಪ್ರಾಯಪಟ್ಟರು.
JCI Shivamogga ಜೆಸಿಐ ಶಿವಮೊಗ್ಗ ಶಕ್ತಿ ಘಟಕದ ಅಧ್ಯಕ್ಷೆ ಸ್ವಾತಿ ಎಸ್.ಎಂ ಮಾತನಾಡಿ, ಜೆಸಿಐ ಶಿವಮೊಗ್ಗ ಶಕ್ತಿ ಘಟಕ ನಿರ್ಮಿಸಲು ಎಸ್.ವಿ.ಶಾಸ್ತ್ರಿ ಮತ್ತು ಶ್ಯಾಮಲಾ ಶಾಸ್ತ್ರಿ ಕಾರಣಕರ್ತರು. ಉತ್ತಮ ನಾಯಕನಾಗಿ ಒಂದು ವರ್ಷದ ಅವಧಿ ಜೆಸಿಐ ಶಿವಮೊಗ್ಗ ಶಕ್ತಿ ಘಟಕವನ್ನು ಮುನ್ನಡೆಸುತ್ತೇನೆ. ಎಲ್ಲರ ಸಹಕಾರ, ಮಾರ್ಗದರ್ಶನ ಅವಶ್ಯಕ. ಸಾಮಾಜಿಕ ಕಳಕಳಿಯೊಂದಿಗೆ ಜೆಸಿಐ ಶಿವಮೊಗ್ಗ ಶಕ್ತಿ ಘಟಕ ಕೆಲಸ ಮಾಡಲಿದೆ ಎಂದು ತಿಳಿಸಿದರು.
ಜೆಸಿಐ ಶಿವಮೊಗ್ಗ ಶಕ್ತಿ ಘಟಕ ಉದ್ಘಾಟನೆಗೆ ಡಾ. ಎಸ್.ವಿ.ಶಾಸ್ತ್ರಿ ಮತ್ತು ಶ್ಯಾಮಲಾ ಶಾಸ್ತ್ರಿ ಶುಭಕೋರಿದರು. ಜೆಸಿಐ ವಿವಿಧ ಘಟಕದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.