ಕರ್ನಾಟಕ ವಿಧಾನ ಸಭೆ ಸಚಿವಾಲಯವು ಪ್ರಥಮ ಬಾರಿಗೆ ನಾಡಿನ ಜನತೆಗೆ ಅತಿ ಅಮೂಲ್ಯವಾದ ಪುಸ್ತಕಗಳನ್ನು ವೀಕ್ಷಿಸುವ ಮತ್ತು ಖರೀದಿಸುವ ಸಲುವಾಗಿ ವಿಧಾನಸೌದದ ಆವರಣದಲ್ಲಿ ಫೆ. 27 ರಿಂದ ಮಾ. 03ರವರೆಗೆ ಪುಸ್ತಕ ಮೇಳವನ್ನು ಆಯೋಜಿಸಿದೆ.
ಈ ಪುಸ್ತಕ ಮೇಳದಲ್ಲಿ ಭಾಗವಹಿಸಲು ಇಚ್ಛಿಸುವ ನಾಡಿನ ಪ್ರಕಾಶಕರು/ ಮಾರಾಟಗಾರರು ನಿಗದಿತ ಅರ್ಜಿ ನಮೂನೆಯನ್ನು ಮುಖ್ಯ ಗ್ರಂಥಪಾಲಕರು, ಕರ್ನಾಟಕ ವಿಧಾನ ಸಭೆ ಸಚಿವಾಲಯ, ವಿಧಾನಸೌಧ, ಬೆಂಗಳೂರು ಅಥವಾ ವೆಬ್‌ಸೈಟ್ www.kla.kar.nic.in ರಿಂದ ಉಚಿತವಾಗಿ ಪಡೆದು, ಮಳಿಗೆಯೊಂದಕ್ಕೆ ಭದ್ರತಾ ಠೇವಣಿ ರೂ. 1000/-ಗಳ ಡಿಡಿಯನ್ನು ಲಗತ್ತಿಸಿ ಫೆ. 12 ರೊಳಗಾಗಿ ಕಾರ್ಯದರ್ಶಿಗಳು, ಕರ್ನಾಟಕ ವಿಧಾನ ಸಭೆ ಸಚಿವಾಲಯ, ವಿಧಾನಸೌದ, ಬೆಂಗಳೂರು ಇಲ್ಲಿಗೆ ಸಲ್ಲಿಸುವಂತೆ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
Ministry of Karnataka Legislature ಭದ್ರತಾ ಠೇವಣಿ ಡಿಡಿಯನ್ನು ಕಾರ್ಯದರ್ಶಿಗಳು, ಕರ್ನಾಟಕ ವಿಧಾನ ಸಭೆ ಸಚಿವಾಲಯ, ವಿಧಾನಸೌದ, ಬೆಂಗಳೂರು ಇವರ ಹೆಸರಿಗೆ ತೆಗೆದುಕೊಳ್ಳುವುದು.
Ministry of Karnataka Legislature ಫೆಬ್ರವರಿ 27 ರ ಪುಸ್ತಕ ಮೇಳದಲ್ಲಿ ಪ್ರಕಾಶಕರು/ ಮಾರಾಟಗಾರರಿಗೆ ಉಪಯುಕ್ತ ಪ್ರಕಟಣೆ
Date: