Klive Special Article ‘ ಆಕಾಶವಾಣಿ ‘ ಸಂಸ್ಕ್ರತ ಮೂಲದ ಒಂದು ಪದ.ಇದರರ್ಥ ಆಕಾಶದಿಂದ ಬರುವ ‘ ಘೋಷಣೆ ‘, ಅಥವ ‘ ಸ್ವರ್ಗದಿಂದ ಬರುವ ಧ್ವನಿ”. ಯುರೋಪ್ನಲ್ಲಿ ನಡೆದ ಪುನರುತ್ಥಾನ ಕಾಲದಲ್ಲಿ ವಿಜ್ಞಾನಿ ಮಾರ್ಕೋನಿ ರೇಡಿಯೋವನ್ನು ಕಂಡು ಹಿಡಿದ. 1936 ರಲ್ಲಿ ರೇಡೀಯೋ ವಿಷಯದಲ್ಲಿ ಆಕಾಶವಾಣಿ ಶಬ್ಧವನ್ನು ಎಂ.ವಿ.ಗೋಪಾಲಸ್ವಾಮಿ ತಮ್ಮ ನಿವಾಸದಲ್ಲಿ ಬಾನುಲಿ ಕೇಂದ್ರ ಸ್ಥಾಪನೆಯಾದ ನಂತರ ಈ ಶಬ್ಧ ಚಾಲ್ತಿಯಲ್ಲಿ ಬಂತು.
ನಭೋಮಂಡಲದ ಪೂರ್ವದಿಕ್ಕಿನಲ್ಲಿ ವರ್ಣಮಯ ರಂಗೋಲಿಯ ಚಿತ್ತಾರವನ್ನು ಬಾನಿನಂಗಳದಲ್ಲಿ ಬಿಡಿಸುವುದರೊಂದಿಗೆ
ಮತ್ತು ಆಕಾಶವಾಣಿಯಲ್ಲಿ ಮುಂಜಾನೆ ಪ್ರಸಾರವಾಗುತ್ತಿದ್ದ ” Signature Tune ‘ ಅನ್ನು ಖುಷಿಯಿಂದ ಕಿವಿಗೊಟ್ಟು ಆಲಿಸುವುದರೊಂದಿಗೆ ನಮ್ಮೆಲ್ಲರ ದೈನಂದಿನ ಬದುಕು ಆರಂಭವಾಗುತಿತ್ತು.
ಶ್ರವ್ಯ ಮಾದ್ಯಮದಲ್ಲಿ ಅತ್ಯಂತ ಪರಿಣಾಮಕಾರಿಯಾಗಿದ್ದ ಆಕಾಶವಾಣಿಯ ಜತೆಗಿನ ನಮ್ಮೆಲ್ಲರ ಒಡನಾಟ- ಸಂಬಂಧ,ಆತ್ಮೀಯತೆ ಇಂದಿಗೂ ಕಾಡುತ್ತೆ. ಲೇಖಕರು,ಕಲಾವಿದರು,ಜಾನಪದ ಗಾಯಕರು ತಮ್ಮ ಪ್ರತಿಭೆಯನ್ನು ಅಭಿವ್ಯಕ್ತಿಸಲು ಸೂಕ್ತ ವೇದಿಕೆಯನ್ನು ಒದಗಿಸಿ, ಬೊಗಸೆ ತುಂಬಾ ಕಾಸು ತುಂಬುತ್ತಿದ್ದ ಆಕಾಶವಾಣಿ ಅನೇಕರಿಗೆ ಒಂದು ರೀತಿಯ ತವರುಮನೆ. ಸದ್ದುಗದ್ದಲ ಮಾಡದೆ, ಜುಜುಬಿ ಪ್ರಚಾರದಿಂದ ದೂರವಿರುತ್ತಿದ್ದ , ಮೂಲೆ ಮೂಲೆಗಳಲ್ಲಿನ ಪ್ರತಿಭೆಗಳ ಶೋಧಿಸಿ ಅವಕಾಶ ಕಲ್ಪಿಸಿಕೊಟ್ಟದ್ದು ಆಕಾಶವಾಣಿ.
ತನ್ನ ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಲಕ್ಷಾಂತರ ಶೋತೃಗಳ ಮನದಂಗಳಲ್ಲಿ ಬೆಚ್ಚನೆಯ ನೆನಪು,ಸಾರ್ಥಕತೆಯ ಭಾವದ ಹಿತವಾದ ಸ್ಪರ್ಶದ ಬೀಜ ಬಿತ್ತಿದ್ದ ಆಕಾಶವಾಣಿಯ ಸಾಧನೆ ಒಂದಲ್ಲ,ಎರಡಲ್ಲ…
Klive Special Article ಸರ್ಕಾರ-ಸಾರ್ವಜನಿಕರ ನಡುವೆ ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸುವ ಆಕಾಶವಾಣಿ ಮಾಹಿತಿ-ಮನರಂಜನೆಯ ಆಶಯದೊಂದಿಗೆ ಅಸ್ತಿತ್ವಕ್ಕೆ ಬಂದಿದೆ.ಆಯಾ ಪ್ರದೇಶದ ಸಂಸ್ಕ್ರತಿ,ಪರಂಪರೆ,ವಾಣಿಜ್ಯ,ಕೈಗಾರಿಕೆ- ಕೃಷಿಯ ಮೇಲೆ ಬೆಳಕು ಬೀರುವಂತಹ ಉಪಯುಕ್ತ ಕಾರ್ಯಕ್ರಮಗಳನ್ನು ಬಿತ್ತರಿಸುವುದರಲ್ಲಿ ಮನೆಮಾತಾಗಿ ,ಎಲ್ಲರ ಮನವನ್ನು ಅಪಹರಿಸಿರುವ ಭದ್ರಾವತಿ ಆಕಾಶವಾಣಿಗೆ ವಜ್ರಮಹೋತ್ಸವದ ಸಂಭ್ರಮ- ದೊಡ್ಡ ಗೌರವ.ಕಳೆದೋದ ೬೦ ವರ್ಷಗಳ ಸುಧೀರ್ಘ ಅವಧಿಯಲ್ಲಿ ಆಕಾಶವಾಣಿಯ ಪ್ರಗತಿಗಾಗಿ ನಿಷ್ಠೆ , ಪ್ರಾಮಾಣಿಕತೆ , ಕಾರ್ಯತತ್ಪರತೆ ಮತ್ತು ಬದ್ದತೆಯಿಂದ ಸದಾ ಹಸನ್ಮುಖರಾಗಿ ಸೇವೆ ಸಲ್ಲಿಸಿರುವ ಅಧಿಕಾರಿ ವೃಂದ ಮತ್ತು ಸಿಬ್ಬಂದಿ ವರ್ಗವನ್ನು ನಾವಿಂದು ಸ್ಮರಿಸಬೇಕಾಗಿದೆ..
ಆಕಾಶವಾಣಿಯ ವಜ್ರಮಹೋತ್ಸವ ಸಮಾರಂಭ ಗಣ್ಯರ ,ಶೋತೃಗಳ ಉಪಸ್ಥಿತಿಯಲ್ಲಿ ಅರ್ಥಪೂರ್ಣವಾಗಿ,ಯಶಸ್ವಿಯಾಗಿ ಚಂದಗಾಣಲಿ.
ಮತ್ತೊಮ್ಮೆ ಶುಭಾಶಯ
ಶರಣುಶರಣಾರ್ಥಿ
ಬಿ.ಎನ್.ಜ್ವಾಲನಪ್ಪ
” ಪರ್ವ ” ,ರೂಪಾನಗರ
ಮೈಸೂರು
Klive Special Article ಆಕಾಶವಾಣಿ ಭದ್ರಾವತಿ.ವಜ್ರಮಹೋತ್ಸವ ಸಂಭ್ರಮ.ಲೇ; ಬಿ.ಎನ್.ಜ್ವಾಲನಪ್ಪ. ಮೈಸೂರು
Date: