Monday, February 24, 2025
Monday, February 24, 2025

Sahyadri Arts College ಶಿವಮೊಗ್ಗದ ಸ್ಥಳೀಯ ಸಂಸ್ಥೆಗಳಲ್ಲಿ ಕಲಿಕೆ ಕಾರ್ಯಕ್ರಮ

Date:

Sahyadri Arts College ಭಾರತ ಸರ್ಕಾರ, ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ, ಮೈಭಾರತ್, ಮಹಾನಗರ ಪಾಲಿಕೆಜಿಲ್ಲಾ ನಗರಾಭಿವೃದ್ಧಿ ಕೋಶ, ನೆಹರು ಯುವ ಕೇಂದ್ರ ಹಾಗೂ ಸಹ್ಯಾದ್ರಿ ಕಲಾ ಕಾಲೇಜು, ಸಮಾಜಕಾರ್ಯ ವಿಭಾಗ ಶಿವಮೊಗ್ಗ ಇವರ ಸಂಯುಕ್ತ ಆಶ್ರಯದಲ್ಲಿ ಪಾಲಿಕೆಯಲ್ಲಿ ಹಮ್ಮಿಕೊಳ್ಳಲಾಗಿರುವ ಸಮುದಾಯಕ್ಕೆ ಪ್ರಾಮುಖ್ಯತೆಯಿರುವ ಅನೇಕ ಕ್ಷೇತ್ರಗಳಲ್ಲಿ ಯುವಜನರಿಗೆ ಸ್ವಯಂಸೇವಕ ಅವಕಾಶಗಳಿಗಾಗಿ 15 ದಿನಗಳ ಕಾಲ ಶಿವಮೊಗ್ಗ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಪ್ರಾಯೋಗಿಕ ಕಲಿಕೆ ಕಾರ್ಯಕ್ರಮಕ್ಕೆ ಪಾಲಿಕೆಯ ಆಯುಕ್ತರಾದ ಡಾ.ಕವಿತ ಯೋಗಪ್ಪನವರ್ ಮತ್ತು ಜಿಲ್ಲಾ ನಗರಾಭಿವೃದ್ಧಿ ಕೋಶದ ಕಾರ್ಯಕ್ರಮ ನಿರ್ದೇಶಕರಾದ ರಂಗಸ್ವಾಮಿ.ಕೆ ರವರು ಯುವಜನರಿಗೆ ಮೈಭಾರತ್ ಕಿಟ್‌ನ್ನು ನೀಡುವುದರ ಮೂಲಕ ಚಾಲನೆ ನೀಡಿದರು.

ಕಲಿಕೆ ಕಾರ್ಯಕ್ರದಲ್ಲಿ ನಗರಾಭಿವೃದ್ಧಿ ಕೋಶದ ಪ್ರಸಾದ್ ಮಾತನಾಡಿ, ಪುರಸಭೆಯ ಆಡಳಿತ ಕಾರ್ಯಗಳಾದ ಪುರಸಭೆಗಳ ರಚನೆ, ಅದರ ಪಾತ್ರಗಳು ಮತ್ತು ಜವಾಬ್ದಾರಿಗಳು, ಕೌನ್ಸಿಲ್ ಸಂಸ್ಥೆಗಳು, ಆರ್.ಟಿ.ಐ ಬಗ್ಗೆ ಸಂಬಂಧಿಸಿದ ಮಾಹಿತಿಗಳನ್ನು ವಿವರವಾಗಿ ತಿಳಿಸಿದರು.

Sahyadri Arts College ಪ್ರಾಯೋಗಿಕ ಕಲಿಕೆ ಕಾರ್ಯಕ್ರಮದ ಮುಂದಿನ ದಿನಗಳಲ್ಲಿ ಯುವ ಜನರಿಗೆ ವಿವಿಧ ಸಂಸ್ಥೆಗಳಿಗೆ ಸಂಬಂಧಿಸಿದಂತೆ, ಆದಾಯ ತೆರಿಗೆ ಇಲಾಖೆಗೆ ಸಂಬಂಧಿಸಿದ ಅಂಶಗಳಾದ ಖಾತಾ ಸಂಬಂಧಿತ, ತೆರಿಗೆ, ಅನುಮತಿ ಮತ್ತು ಕಾರ್ಯವಿಧಾನ, ನೀರಿನ ನಿರ್ವಹಣೆ, ಘನ ತ್ಯಾಜ್ಯ ನಿರ್ವಹಣೆ, ಕಲ್ಯಾಣ ಯೋಜನೆಗಳು ಮತ್ತು ಕಾರ್ಯಕ್ರಮಗಳು ವಸತಿ ಯೋಜನೆಗಳು ಮತ್ತು ಕಾರ್ಯಕ್ರಮಗಳು, ಲೆಕ್ಕ ಪರಿಶೋಧನೆಗೆ ಸಂಬಂಧಿಸಿದ ಮಾಹಿತಿಗಳು, ಜಿಎಸ್‌ಟಿ ಮುಂತಾದ ವಿಷಯಗಳ ಬಗ್ಗೆ, ಮಾಹಿತಿ ತಂತ್ರಜ್ಞಾನದ ಬಗ್ಗೆ ಇನ್ನು ಹಲವಾರು ವಿಷಯಗಳ ಕುರಿತಾದ ಮಾಹಿತಿ ನೀಡಲಾಗುವುದು ಎಂದರು.

ನೆಹರು ಯುವ ಕೇಂದ್ರದ ಯುವ ಅಧಿಕಾರಿ ಉಲ್ಲಾಸ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಐ.ಟಿ ನೋಡಲ್ ಅಧಿಕಾರಿ ಸುದೀಪ್ ಹಾಗೂ ಸಹ್ಯಾದ್ರಿ ಕಲಾ ಕಾಲೇಜಿನ ಉಪನ್ಯಾಸಕರಾದ ಗೌರಿಶಂಕರ್ ರವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಭದ್ರಾವತಿಯಲ್ಲಿ ಸಜ್ಜನರು ವಾಸಮಾಡುವಂತಹ ಪರಿಸ್ಥಿತಿಯೇ ಇಲ್ಲವಾಗಿದೆ :ಹಿತರಕ್ಷಣಾ ವೇದಿಕೆ ಮುಖ್ಯಸ್ಥ ಸುರೇಶ್

ಭದ್ರಾವತಿಯಲ್ಲಿ ಸಜ್ಜನರು ವಾಸಮಾಡುವಂತಹ ಪರಿಸ್ಥಿತಿಯೇ ಇಲ್ಲವಾಗಿದೆ. ಪೊಲೀಸ್ ಇಲಾಖೆ ಸೇರಿದಂತೆ ರಾಜಕಾರಣಿಗಳು...

ಫೆ.25 ಎಂದು ಆಶ್ರಯ ಮನೆಗಳ ಹಂಚಿಕೆ ವಿಧಾನ ಪರಿಷತ್ ಶಾಸಕಿ ಬಲ್ಕಿಶ್ ಬಾನು ಮಾಹಿತಿ

ಫೆ.25 ರಂದು ವಸತಿ ಸಚಿವ ಜಮೀರ್ ಅಹ್ಮದ್ ಶಿವಮೊಗ್ಗಕ್ಕೆ ಆಗಮಿಸುತ್ತಿದ್ದು, ಗೋವಿಂದಾ...