Monday, February 24, 2025
Monday, February 24, 2025

Adhichunchanagiri Mahasamsthana Math ಮಕ್ಕಳೇ,ಕಲಿಯಿರಿ.ಚೆನ್ನಾಗಿ ಓದಿ. ಸೋಮಾರಿತನ ಬಿಡಿ.ಸಂಸ್ಕೃತಿ ಅರಿವು ನಿಮಗಿರಲಿ- ಶ್ರೀಪ್ರಸನ್ನನಾಥಶ್ರೀ

Date:

Adhichunchanagiri Mahasamsthana Math ಶಿವಮೊಗ್ಗ ಸಂಸ್ಕೃತಿ ಹಾಗೂ ಕಲೆಗಳ ತವರೂರು ಇಂತಹ ತವರೂರಿನಲ್ಲಿ ಜನಿಸಿದ ನಾವು ಪುಣ್ಯವಂತರು. ಈ ತಾಯಿಯ ಅಂಗಳದಲ್ಲಿ ನಾವುಗಳು ಕೇವಲ ಅಂಕಗಳಿಗೋಸ್ಕರ ಓದುವುದು ಬೇಡ, ಅದರ ಜೊತೆಗೆ ನಮ್ಮ ಸಂಸ್ಕೃತಿ ಸಂಸ್ಕಾರದ ಅರಿವನ್ನು ಹೊಂದುವುದು ಮುಖ್ಯ ಎಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿ, ಶ್ರೀ ಪ್ರಸನ್ನನಾಥ ಸ್ವಾಮೀಜಿ ತಿಳಿಸಿದರು.
ಅವರು ಶಿವಮೊಗ್ಗ ಗುರುಪುರ ಹೊರ ವಲಯದ ಬಿಜಿಎಸ್ ಶಾಲಾ-ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡುತ್ತಾ, ನಮಗೆ ನಮ್ಮ ಗುರುಗಳು ಯಾವತ್ತೂ ಭಿಕ್ಷೆ ಎತ್ತುವುದನ್ನು ಬಿಡಬೇಡಿ ಜನಸೇವೆಗೆ ಅದರಿಂದ ಸಹಾಯ ಮಾಡಿ ಉಳ್ಳವರ ಕೈಯಿಂದ ಪಡೆದು ಅಶಕ್ತರ, ದುಬ್ಬಲರ ಬದುಕಿಗೆ ದಾರಿ ದೀಪವಾಗುವಂತಹ ಕೆಲಸವನ್ನು ಮಾಡಿ,ಈ ಹಿನ್ನೆಲೆಯಲ್ಲಿ ಜ್ಞಾನದಾಸೋಹ, ಅನ್ನದಾಸೋಹವನ್ನ ಮಕ್ಕಳಿಗೆ ಹಾಗೂ ಜನರಿಗೆ ನೀಡುವ ಮೂಲಕ ಸಮಾಜದ ಒಳಿತಿಗೆ,ಸಂಸ್ಕೃತಿಯ ಒಳಿತಿಗೆ ಕೆಲಸ ಮಾಡಲು ನಿರ್ಧರಿಸಿ, ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠ ಹತ್ತಾರು ಮಹತ್ತರ ಸಾಮಾಜಿಕ ಕಾರ್ಯಕ್ರಮಗಳನ್ನ ನಡೆಸುತ್ತಾ ಬಂದಿದೆ. ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಅಡಿಯಲ್ಲಿ ಅಂದರ, ಕಿವುಡರ ಬದುಕಿಗೆ ದಾರಿದೀಪವಾಗುವಂತಹ ಶಾಲೆಗಳನ್ನು ತೆರೆದಿದೆ. ವೃದ್ಯಾಪ್ಯದಲ್ಲಿ ಅವರನ್ನು ಅನಾಥರನ್ನಾಗಿಸುವ ಮಕ್ಕಳ ಸ್ಥಿತಿಯನ್ನು ಅವಲೋಕಿಸಿದಾಗ ನಿಜಕ್ಕೂ ಬೇಸರವಾಗುತ್ತದೆ.ಈ ಹಿನ್ನೆಲೆಯಲ್ಲಿ ನಾವು ಗುರು ಹಿರಿಯರನ್ನ ಪೂಜ್ಯ ತಂದೆ-ತಾಯಿಯರನ್ನ ಗೌರವಿಸುವ ಪಾಠ ಕಲಿಯಬೇಕಿದೆ. ಮಕ್ಕಳು ಕನಿಷ್ಠಪಕ್ಷ ದಿನಕ್ಕೊಮ್ಮೆಯಾದರೂ ಹಿರಿಯರನ್ನ, ಹೆತ್ತವರನ್ನು ಗೌರವಿಸುವುದನ್ನು, ನಮಸ್ಕರಿಸುವುದನ್ನು ಕಲಿಯಿರಿ, ಚೆನ್ನಾಗಿ ಓದಿ, ಸೋಮಾರಿತನ ಬಿಡಿ ಸಂಸ್ಕೃತಿ ಅರಿವು ನಿಮಗಿರಲಿ ಮಕ್ಕಳಿಗೆ ಕಿವಿಮಾತು ಹೇಳಿದರು.
ಶಿವಮೊಗ್ಗ ಶಾಸಕರಾದ ಎಸ್. ಎನ್.ಚನ್ನಬಸಪ್ಪ ಅವರು ಮಾತನಾಡುತ್ತಾ,ಗುರುಗಳಿದ್ದಾಗ ಮಾತ್ರ ಗುರಿ ತಲುಪಲು ಸಾಧ್ಯ,ನಮ್ಮ ಧರ್ಮ ಒಂದು ಮಹತ್ತರ ಮೈಲಿಗಲ್ಲನ್ನು ತಲುಪಿದೆ ಎಂದು ತಿಳಿಸಿದರು.
Adhichunchanagiri Mahasamsthana Math ಶ್ರೀ ಆದಿಚುಂಚನಗಿರಿ ವಿದ್ಯಾ ಸಂಸ್ಥೆ ರಾಜ್ಯ ಹಾಗೂ ಹೊರರಾಜ್ಯಗಳಲ್ಲಿ ೪೫೦ಕ್ಕೂ ಹೆಚ್ಚು ಎಲ್ಲಾ ಬಗೆಯ ಶಾಲಾ ಕಾಲೇಜುಗಳನ್ನು ನಡೆಸುತ್ತಿದ್ದು, ಸುಮಾರು ಒಂದು ಲಕ್ಷ ನಲವತ್ತು ಸಾವಿರ ಮಕ್ಕಳಿಗೆ ವಿದ್ಯಾಭ್ಯಾಸ ನೀಡುತ್ತಿರುವ ವಿಷಯ ತಿಳಿದು ಸಂತೋಷವಾಯಿತು. ಸರ್ಕಾರ ಮಾಡಬೇಕಾದ ಕಾರ್ಯವನ್ನು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠಹಾಗೂ ಗುರುಗಳು ಮಾಡುತ್ತಿದ್ದಾರೆ. ನಿಜಕ್ಕೂ ಈ ವಿಷಯದಲ್ಲಿ ನಾವು ಧನ್ಯರು ಎಂದರು.
ಈ ಕಾರ್ಯಕ್ರಮದಲ್ಲಿ ಪೂಜ್ಯ ಶ್ರೀ ಸಾಯಿನಾಥ ಸ್ವಾಮೀಜಿಯವರು, ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಶಿವಮೊಗ್ಗ ಶಾಖೆಯ ನಿರ್ದೇಶಕರಗಳು, ಪ್ರಾಂಶುಪಾಲರು, ಸಿಬ್ಬಂದಿಯ ವರ್ಗದವರು, ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು.
ರಾಜ್ಯ ಹಾಗೂ ರಾಷ್ಟ್ರಮಟ್ಟದ ವಿವಿಧ ಕ್ರೀಡೆಗಳಲ್ಲಿ ಸಾಧನೆ ಮಾಡಿದ ಶಾಲಾ ಕಾಲೇಜಿನ ಪ್ರತಿಭಾನ್ವಿತ ಕ್ರೀಡಾಪಟುಗಳಿಗೆ ಪೂಜ್ಯರಿಂದ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಅಂಕ ಗಳಿಸಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ, ಸನ್ಮಾನಿಸಲಾಯಿತು. ಶಾಲಾ ಮಕ್ಕಳಿಂದ ಕೊನೆಯಲ್ಲಿ ಬಿಜಿಎಸ್ ಕಲಾ ಸಂಭ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Rotary Club Shimoga ಸಮಾಜದ ಬೆಳವಣಿಗೆಗೆ ರೋಟರಿಯಂತಹ ಸಂಸ್ಥೆಗಳು ತೋರುತ್ತಿರುವ ಕಾಳಜಿ ಪ್ರೇರಣೀಯ : ಜಿ.ಎಸ್.ನಾರಾಯಣ ರಾವ್

Rotary Club Shimoga ಯಾವುದೇ ಸಮಾಜಮುಖಿ ಯೋಜನೆಗಳ ಅನುಷ್ಟಾನ ಮತ್ತು ನಿರ್ವಹಣೆಯ...

Rotary Club Shimoga ಆರೋಗ್ಯದ ಬಗ್ಗೆ ಜಾಗೃತಿ ಅಗತ್ಯ: ರೊ. ರೂಪ ಪುಣ್ಯಕೋಟಿ

Rotary Club Shimoga ಇಂದು ಆರೋಗ್ಯವೆ ಭಾಗ್ಯ. ಪ್ರತಿನಿತ್ಯದ ಜಂಜಾಟದಿಂದ, ಆಹಾರದ...