Department of Education in preventing child marriage ಬಾಲ್ಯ ವಿವಾಹ ತಡೆಗಟ್ಟುವಲ್ಲಿ ಶಿಕ್ಷಣ ಇಲಾಖೆ ಸಕ್ರಿಯವಾಗಿ ಕೆಲಸ ಮಾಡಬೇಕು. ಬಾಲ್ಯ ವಿವಾಹ ಮತ್ತು ಪೋಕ್ಸೋ ಪ್ರಕರಣ ತಗ್ಗಿಸಲು ಕೈಗೊಳ್ಳಬೇಕಾದ ಕ್ರಮದ ಕುರಿತು ಮುಕ್ತ ಚರ್ಚೆ ಆಗಬೇಕು. ಪೋಕ್ಸೋ ಪ್ರಕರಣ ಬಹಳ ಕಠಿಣ ಮತ್ತು ಕಟ್ಟುನಿಟ್ಟಾಗಿದೆ. ಎಂದು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹಿರಿಯ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಸಂತೋಷ್ ಎಂ ಮಾತನಾಡಿದರು.
ವಿದ್ಯಾರ್ಥಿಗಳ ಗೈರನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಪೋಕ್ಸೋ ಪ್ರಕರಣವನ್ನು ವರದಿ ಮಾಡಲು ವಿಫಲರಾದವರು ಸಹ ಆರೋಪಿ ಆಗುತ್ತಾರೆ. ಆದ್ದರಿಂದ ವರದಿ ಮಾಡುವುದು ಬಹಳ ಮುಖ್ಯ ಎಂದ ಅವರು ಶಾಲಾ ಮಕ್ಕಳ ಪ್ರಾರ್ಥನೆ ವೇಳೆ ಮಕ್ಕಳಿಗೆ ಗುಡ್, ಬ್ಯಾಡ್ ಟಚ್, ಪೋಕ್ಸೋ ಕಾಯ್ದೆ ಕುರಿತು ಅರಿವು ಮೂಡಿಸಬೇಕೆಂದು ಈ ಕಾರ್ಯಾಗಾರದಲ್ಲಿ
ತಿಳಿಸಿದರು.
Department of Education in preventing child marriage ಡಯಟ್ ಕಾಲೇಜಿನ ಉಪನ್ಯಾಸಕರಾದ ಹರಿಪ್ರಸಾದ್ ಜಿ.ವಿ ಶಾಲೆಯಲ್ಲಿದೆ ಶಿಕ್ಷಣದ ಜೊತೆ ರಕ್ಷಣೆ ಮತ್ತು ಆರ್‌ಟಿಇ ಕಾಯ್ದೆ ಕುರಿತು ಮಾತನಾಡಿದರು.
ಸಭೆಯಲ್ಲಿ ಡಿಡಿಪಿಐ ಎಸ್.ಆರ್.ಮಂಜುನಾಥ್, ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿಯಾದ ಆರ್.ಮಂಜುನಾಥ್, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರಾದ ತಾಜುದ್ದೀನ್ ಖಾನ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು, ಶಾಲಾ ಮುಖ್ಯೋಪಾಧ್ಯಾಯರು, ಬಿಆರ್‌ಸಿ, ಸಿಆರ್‌ಸಿ, ಅನುದಾನಿಕ ಶಾಲೆ ಶಿಕ್ಷಕರು ಹಾಜರಿದ್ದರು.