Monday, May 4, 2026
Monday, May 4, 2026

Karnataka Lokayukta ಭದ್ರಾವತಿ ತಾಲ್ಲೂಕಿನ ಕೆಲವು ಅಂಗನವಾಡಿ‌ ಕೇಂದ್ರಗಳ ಬಗ್ಗೆ ಲೋಕಾಯುಕ್ತ ಅಧಿಕಾರಿಗಳ‌ ಪರಿಶೀಲನಾ ವರದಿ

Date:

Karnataka Lokayukta ಶ್ರೀ ಮಂಜುನಾಥ್ ಚೌದರಿ ಎಂ.ಹೆಚ್ ಪೊಲೀಸ್ ಅಧೀಕ್ಷಕರು, ಕರ್ನಾಟಕ ಲೋಕಾಯುಕ್ತ, ಶಿವಮೊಗ್ಗ ರವರ ಮಾರ್ಗದರ್ಶದಲ್ಲಿ ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ರವರುಗಳಾದ ಶ್ರೀ.ಸುರೇಶ್ ಹೆಚ್.ಎಸ್. ಶ್ರೀ.ಪ್ರಕಾಶ. ಶ್ರೀ.ವೀರಬಸಪ್ಪ.ಎಲ್ ಕುಸಲಾಪುರ ಮತ್ತು ಸಿಬ್ಬಂದಿಗಳೊಂದಿಗೆ ಭದ್ರಾವತಿ ತಾಲ್ಲೂಕ್ ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆಯನ್ನು ಕೈಗೊಂಡಿದ್ದರು.

ಭದ್ರಾವತಿ ತಾಲ್ಲೂಕಿನ ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳಾದ 1.ಬೊಮ್ಮನಕಟ್ಟೆ-01, 2. ಬೊಮ್ಮನಕಟ್ಟಿ ಆಶ್ರಯ ಕಾಲೋನಿ, 3.ಹಿರಿಯೂರು-01, 4.ಹಿರಿಯೂರು-02 5.ಸಿರಿಯೂರು ಕ್ಯಾಂಪ್, 6.ಸಿರಿಯೂರು ತಾಂಡ, 7. ಸಿರಿಯೂರು ವೀರಾಪುರ, 8. ಕಲ್ಲಹಳ್ಳಿ, 9.ಹೊಸಸಿದ್ದಾಪುರ, 10.ಸಿದ್ದಾಪುರ ತಾಂಡ, 11. ಹೊಸೂರು 12. ಹೊಸೂರು ಕ್ಯಾಂಪ್ ಗಳಿಗೆ ಭೇಟಿ ನೀಡಿದಾಗ ಕೆಲವೊಂದು ಅಂಗನವಾಡಿ ಕೇಂದ್ರಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಕೊರೆತೆ ಕಂಡು ಬಂದಿರುತ್ತದೆ. ಕೆಲವು ಅಂಗನವಾಡಿ ಕೇಂದ್ರದ ಕೊಠಡಿಗಳು ಶಿಥಲಾ ವ್ಯವಸ್ಥೆಯಲ್ಲಿದ್ದು, ಯಾವುದೇ ಸಮಯದಲ್ಲಿ ಕೊಠಡಿಗಳು ಬಿದ್ದು ಅನಾಹುತವುಂಟಾಗುವ ಸಾಧ್ಯತೆ ಕಂಡು ಬಂದಿರುತ್ತದೆ. ಅಂಗನವಾಡಿ ಸುತ್ತಲೂ ಕಾಂಪೌಂಡ್ ವ್ಯವಸ್ಥೆ ಇರುವುದಿಲ್ಲ, ಸಮರ್ಪಕವಾಗಿ ದಾಖಲಾತಿಗಳನ್ನು ನಿರ್ವಹಿಸದೇ ಕಂಡು ಬಂದಿರುತ್ತದೆ. ಅಂಗನವಾಡಿಗಳಿಗೆ ಸರಬರಾಜು ಮಾಡಿದ ಸಾಮಗ್ರಿಗಳನ್ನು ವ್ಯವಸ್ಥಿತವಾಗಿ ಇಟ್ಟುಕೊಂಡಿರುವುದಿಲ್ಲ. ಅಹಾರ ಪದಾರ್ಥಗಳ ಭೌತಿಕ ದಾಸ್ತಾನಗಳಿಗೂ ಹಾಗೂ ದಾಸ್ತಾನು ನಿರ್ವಹಣೆ ಪುಸ್ತಕಗಳ ಅಂಕಿ-ಸಂಖ್ಯೆಗಳಲ್ಲಿ ವ್ಯತ್ಯಾಸ ಕಂಡು ಬಂದಿರುತ್ತದೆ. ಅಂಗನವಾಡಿಗಳಲ್ಲಿ ಸ್ವಚ್ಚತೆಯನ್ನು ಸರಿಯಾಗಿ ನಿರ್ವಹಿಸಿರುವುದಿಲ್ಲ. ಗರ್ಭಿಣಿಯರಿಗೆ ಮತ್ತು ಬಾಣಂತಿಯವರಿಗೆ ವಿತರಿಸಬೇಕಾದ ಆಹಾರ ಪದಾರ್ಥವನ್ನು ಸರಿಯಾಗಿ ವಿತರಿಸದೇ ಇರುವುದು ಕಂಡು ಬಂದಿರುತ್ತದೆ.

Karnataka Lokayukta ಆಹಾರದಲ್ಲಿ ತರಕಾರಿಗಳನ್ನು ಬಳಸದೇ ಇರುವುದು ಕಂಡು ಬಂದಿರುತ್ತದೆ. ಬೊಮ್ಮನಕಟ್ಟೆ ಆಶ್ರಯ ಕಾಲೋನಿಯಲ್ಲಿರುವ ಅಂಗನವಾಡಿಯು ಸುಮಾರು 30ವರ್ಷಗಳಿಂದ ಬಾಡಿಗೆ ಕಟ್ಟಡದಲ್ಲಿದ್ದು, ಇಲ್ಲಿಯವರೆಗೂ ಅಂಗನವಾಡಿ ಕೇಂದ್ರದ ಕಟ್ಟಡವನ್ನು ನಿರ್ಮಾಣವಾಗಿರುವುದಿಲ್ಲ. ಕೆಲವೊಂದು ಅಂಗನವಾಡಿ ಕೇಂದ್ರಗಳಲ್ಲಿ ಸರಿಯಾದ ಶೌಚಾಲಯಗಳ ವ್ಯವಸ್ಥೆ ಇರುವುದಿಲ್ಲ ಹಾಗೂ ಮಕ್ಕಳಿಗೆ ವೈಧ್ಯಾಧಿಕಾರಿಗಳು ಕಾಲ-ಕಾಲಕ್ಕೆ ವೈದ್ಯಕೀಯ ತಪಾಸಣೆ ಮಾಡದೇ ಇರುವುದು ಕಂಡು ಬಂದಿರುತ್ತದೆ. ಸದರಿ ನ್ಯೂನತೆಗಳ ಬಗ್ಗೆ ಮೇಲಾಧಿಕಾರಿಗಳಿಗೆ ವರದಿಯನ್ನು ಸಲ್ಲಿಸಲಾಗುವುದು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Rotary Shivamogga ವ್ಯಾಪಾರ ವೃದ್ಧಿಸಿಕೊಳ್ಳಲು ಡಿಜಿಟಲ್ ಮಾರ್ಕೆಟಿಂಗ್ ಸಹಕಾರಿ : ಜಿ.ಸುನೀಲ್‌ಕುಮಾರ್

Rotary Shivamogga ತಂತ್ರಜ್ಞಾನ ಮತ್ತು ವೈಜ್ಞಾನಿಕ ಯುಗದಲ್ಲಿ ವ್ಯಾಪಾರದಲ್ಲಿ ಯಶಸ್ಸು...

Shivamogga Police ಗಾಡಿಕೊಪ್ಪ ಸಂಚಾರ ನಿಯತ್ರಣ ಓಕೆ. ಆದರೆ ಮಿಕ್ಕ ಸಮಸ್ಯೆಗಳಿಗೆ ಪರಿಹಾರವಿಲ್ಲ ಯಾಕೆ?

Shivamogga Police ಗಾಡಿಕೊಪ್ಪ‌,ಶಿವಮೊಗ್ಗದ ಸೆಟಲೈಟ್ ಟೌನ್ ಎಂಬ ವ್ಯಾಪ್ತಿಗೆ ಬೆಳೆದುಬಿಟ್ಟಿದೆ. ಅಲ್ಕಿನ ವೃತ್ತಕ್ಕೆ...