Monday, February 2, 2026
Monday, February 2, 2026

Consumer Disputes Redressal Commission ಗ್ರಾಹಕರ ಪರ ತೀರ್ಪು ‌ನೀಡಿದ‌‌ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ

Date:

Consumer Disputes Redressal Commission ಎಸ್.ಕೆ. ಅನ್ಸರ್ ಖಾನ್ ಬಿನ್ ಎಸ್.ಕೆ.ಖಾಸಿಂ ಎಂಬುವವರು ಮಹರಾಜ ಗೃಹ ವೈಭವ ಕುವೆಂಪು ರಸ್ತೆ, ಶಿವಮೊಗ್ಗ ಮತ್ತು ಬಿ.ಎಸ್.ಹೆಚ್. ಹೌಸ್‌ಹೋಲ್ಡ್ ಅಪ್ಲಯನ್ಸಸ್ ಮ್ಯಾನಿಫ್ಯಾಕ್ಟರಿಂಗ್ ಪ್ರೈ., ಜೆ.ಪಿ.ನಗರ, ಬೆಂಗಳೂರು ಇವರುಗಳ ವಿರುದ್ದ ಸೇವಾನ್ಯೂನ್ಯತೆ ಕುರಿತು ದಾಖಲಿಸಿದ್ದ ಪ್ರಕರಣದಲ್ಲಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಪರಿಹಾರ ನೀಡಲು ಆದೇಶಿಸಿದೆ.

ಅರ್ಜಿದಾರ ಎಸ್.ಕೆ.ಅನ್ಸರ್ ಖಾನ್ ರವರು 2019ರಲ್ಲಿ ಎದುರುದಾರ ಮಹರಾಜ ಗೃಹ ವೈಭವದಲ್ಲಿ ಬಾಸ್ಕ್ ಕಂಪನಿಯ ರೆಫ್ರಿಜಿರೇಟರ್‌ನ್ನು ರೂ. 40,000/- ಪಾವತಿಸಿ ಖರೀದಿಸಿದ್ದು, 10 ವರ್ಷಗಳ ವಾರಂಟಿಯನ್ನು ಪಡೆದಿರುತ್ತಾರೆ. 2023ರಲ್ಲಿ ರೆಫ್ರಿಜಿರೇಟರ್ ಹಾಳಾಗಿದ್ದು, ಎದುರುದಾರರ ಟೆಕ್ನಿಷಿಯನ್ ಮನೆಗೆ ಬಂದು ಪರಿಶೀಲಿಸಿ ಕಂಪ್ರೆಸರ್ ಹಾಳಾಗಿದೆ ಎಂದು ಹೊಸ ಕಂಪ್ರೆಸರ್ ಬದಲಾಯಿಸಿದ್ದರು. ಆದರೂ ಪುನಃ ಹಾಳಾಗಿದ್ದು, ದೂರು ನೀಡಿದರೂ ಎದುರುದಾರರು ರಿಪೇರಿ ಮಾಡಿಕೊಡದೆ ಹೊಸ ರೆಫ್ರಿಜಿರೇಟರ್ ತೆಗೆದುಕೊಳ್ಳಲು ತಿಳಿಸಿದರು.

ಈ ಕುರಿತು ಆಯೋಗದ ಮುಂದೆ ಸೂಕ್ತ ಪರಿಹಾರ ಕೋರಿ ಪ್ರಕರಣ ದಾಖಲಿಸಿದ್ದು, ಪ್ರಕರಣದ ಅಂಶಗಳು ಮತ್ತು ಅರ್ಜಿದಾರರು ಹಾಜರುಪಡಿಸಿದ ದಾಖಲೆಗಳನ್ನು ಪರಿಗಣಿಸಿ, ಎದುರುದಾರರಿಗೆ ಆಯೋಗವು ನೋಟೀಸ್ ನೀಡಿ ದೂರಿನ ಬಗ್ಗೆ ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಸಲು ತಿಳಿಸಿದ್ದು, ದೂರುದಾರರು ರೆಫ್ರಿಜಿರೇಟರ್‌ನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡದೇ ಇರುವುದರಿಂದ ರಿಪೇರಿಗೆ ಬಂದಿರುತ್ತದೆ ಹಾಗೂ ಇದು ತಯಾರಿಕಾ ದೋಷವೆಂದು ನಿರ್ಧರಿಸಲು ಪ್ರಯೋಗಾಲಯದ ವರದಿಯನ್ನು ಸಲ್ಲಿಸಿರುವುದಿಲ್ಲವಾದ ಕಾರಣ ದೂರನ್ನು ವಜಾ ಮಾಡಲು ಎದುರುದಾರರು ಕೋರಿರುತ್ತಾರೆ.

Consumer Disputes Redressal Commission ಅರ್ಜಿದಾರರ ಅಂಶಗಳು, ಪ್ರಮಾಣ ಪತ್ರ, ದಾಖಲೆಗಳನ್ನು ಮತ್ತು ದೂರುದಾರರ ಪರ ವಕೀಲರ ವಾದವನ್ನು ಆಲಿಸಿ, ಎದುರುದಾರರು ಸೇವಾ ನ್ಯೂನತೆ ಎಸಗಿರುತ್ತಾರೆಂದು ಪರಿಗಣಿಸಿ ಎದುರುದಾರರಿಗೆ ರೆಫ್ರಿಜಿರೇಟರ್‌ನ ಬೆಲೆ ರೂ. 40,000/-ಗಳಲ್ಲಿ ದೂರುದಾರರು ರೆಫ್ರಿಜಿರೇಟರ್ ನಾಲ್ಕು ವರ್ಷ ಉಪಯೋಗಿಸಿರುವುದರಿಂದ ಸವಕಳಿಯನ್ನು ಕಳೆದು ರೂ. 30,000/- ಗಳನ್ನು ಶೇ. 9% ಬಡ್ಡಿಯೊಂದಿಗೆ ದೂರದಾರರು ಲೀಗಲ್ ನೋಟಿಸ್ ನೀಡಿದ ದಿನಾಂಕದಿಂದ ಈ ಆದೇಶವಾದ 45 ದಿನಗಳೊಳಗಾಗಿ ಪಾವತಿಸಲು, ತಪ್ಪಿದಲ್ಲಿ ಸದರಿ ಮೊತ್ತಕ್ಕೆ ಶೇ.10 ರಂತೆ ಬಡ್ಡಿಯನ್ನು ಸೇರಿಸಿ, ಈ ಆದೇಶವಾದ ದಿನಾಂಕದಿಂದ ಪೂರಾ ಮೊತ್ತವನ್ನು ನೀಡುವವರೆಗೂ ಕೊಡಬೇಕೆಂದು ಹಾಗೂ ರೂ. 25,000/-ಗಳನ್ನು ಮಾನಸಿಕ ಹಿಂಸೆಗಾಗಿ ಮತ್ತು ರೂ. 10,000 ಗಳನ್ನು ವ್ಯಾಜ್ಯದ ಖರ್ಚು ವೆಚ್ಚದ ಬಾಬ್ತಾಗಿ ನೀಡುವಂತೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಟಿ. ಶಿವಣ್ಣ, ಸದಸ್ಯರಾದ ಸವಿತಾ ಬಿ ಪಟ್ಟಣಶೆಟ್ಟಿ ಮತ್ತು ಬಿ.ಡಿ.ಯೋಗಾನಂದ ಭಾಂಡ್ಯ ಇವರ ಪೀಠವು ಜ.20 ರಂದು ಆದೇಶಿಸಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...

MESCOM ಹೊಳೆಹೊನ್ನೂರು ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ. 03 ರಂದು ಬೆಳಿಗ್ಗೆ...

Shivamogga Police ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ, ಮೂವರಿಗೆ 5 ವರ್ಷ ಜೈಲು ಶಿಕ್ಷೆ

Shivamogga Police ಮಾರಣಾಂತಿಕವಾಗಿ ಹಲ್ಲೆ ಮಾಡಿ ಹಾಗೂ ಅವಾಚ್ಯ ಶಬ್ದಗಳಿಂದ ಬೈದು...