B.Y. Raghavendra ಶಿವಮೊಗ್ಗ ದೂರದರ್ಶನ ಅಧಿಕ ಶಕ್ತಿ ಮರು ಪ್ರಸಾರ ಕೇಂದ್ರದಲ್ಲಿ ಭದ್ರಾವತಿ ಆಕಾಶವಾಣಿಯ ೧೦ ಕೆವಿ ಎಫ್ ಎಂ ಟ್ರಾನ್ಸ್ ಮಿಟರ್ ಅಳವಡಿಕೆ ಕಾರ್ಯಕ್ರಮ ಏರ್ಪಾಡಾಗಿತ್ತು.
ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ಡಾ.ಎಲ್.ಮುರುಗನ್ ರಿಂದ ನೂತನ ಟ್ರಾನ್ಸ್ ಮಿಟರ್ ಗೆ ಪೂಜೆ ನೆರವೇರಿತು.
ಸಂಸದ ಬಿ.ವೈ.ರಾಘವೇಂದ್ರ ಅವರು ಈ ಸಂದರ್ಭದಲ್ಲಿ ಮಾತನಾಡಿದರು
ಸುಮಾರು 10 ಕೋಟಿ ವೆಚ್ಚದ ಟ್ರಾನ್ಸ್ ಮೀಟರ್ ಕೆನಡಾದಿಂದ ಬಂದಿದೆ
ಇದರಿಂದ ವೈವಿಧ್ಯಮಯ ಕಾರ್ಯಕ್ರಮಗಳ ಪ್ರಸಾರಕ್ಕೆ ಅನುಕೂಲವಾಗಲಿದೆ
60 ಕಿ.ಮೀ ಅಂತರದ ವ್ಯಾಪ್ತಿಯಲ್ಲಿ ಕಾರ್ಯಕ್ರಮ ಕೇಳಬಹುದು
ಪ್ರಧಾನಿ ನರೇಂದ್ರ ಮೋದಿ ಅವರ ಮನ್ ಕಿ ಬಾತ್ ಕಾರ್ಯಕ್ರಮ ಆಕಾಶವಾಣಿಯಿಂದ ಜನಪ್ರಿಯವಾಗಲಿದೆ ಹಾಗಾಗಿ ಶಿವಮೊಗ್ಗದ ಮರು ಪ್ರಸಾರ ಕೇಂದ್ರಕ್ಕೆ ಪ್ರತ್ಯೇಕ ಸ್ಟುಡಿಯೋ ಅಗತ್ಯವಿದೆ
ಸಚಿವ ಡಾ.ಮುರುಗನ್ ಅವರು ಉದ್ಘಾಟನೆ ಪೂಜೆಯಲ್ಲಿ ಪಾಲ್ಗೊಂಡು ಮಾತನಾಡಿದರು
ಸಂಸದರ ನಿರಂತರ ಪ್ರಯತ್ನದ ಫಲವಾಗಿ ಮರು ಪ್ರಸಾರ ಟ್ರಾನ್ಸ್ ಮಿಟರ್ ಸ್ಥಾಪನೆ ಸಾಧ್ಯವಾಗಿದೆ
ಹಾಗಾಗಿ ಇಲ್ಲಿ ಪ್ರತ್ಯೇಕ ಸ್ಟುಡಿಯೋ ಸ್ಥಾಪಿಸಲಾಗುತ್ತದೆ
ಈ ನಿಟ್ಟಿನಲ್ಲಿ ಕೇಂದ್ರ ಅಗತ್ಯ ನೆರವು ನೀಡಲಿದೆ
B.Y. Raghavendra ಡಿಡಿಯನ್ನು ಪ್ರಸ್ತುತ ದಿನಮಾನಕ್ಕೆ ತಕ್ಕಂತೆ ಉನ್ನತೀಕರಿಸಲಾಗುತ್ತಿದೆ
ಉನ್ನತೀಕರಣಕ್ಕೆ ಅಗತ್ಯವಾದ ಹಣಕಾಸಿನ ನೆರವನ್ನು ಕೇಂದ್ರ ನೀಡುತ್ತಿದೆ
ರಾಣೆಬೆನ್ನೂರು, ಉಡುಪಿ ಸೇರಿದಂತೆ ರಾಜ್ಯದ 4 ಕಡೆ ಕೇಂದ್ರ ಕಾರ್ಯಾರಂಭ ಮಾಡಲಿದೆ
ಶಿವಮೊಗ್ಗದ ಈ ಕೇಂದ್ರ 20 ಕಿ.ಮೀ.ವ್ಯಾಪ್ತಿಯಲ್ಲಿ ತನ್ನ ಪ್ರಸಾರ ಮಾಡಲಿದೆ.
ಮಾಹಿತಿ ಮತ್ತು ಸರ್ಕಾರದ ಯೋಜನೆ ಮತ್ತಿತರ ಮಾಹಿತಿ ಹಂಚಿಕೊಳ್ಳಲು ನೆರವಾಗಲಿದೆ
ಸ್ಥಳೀಯ ಕಲೆ, ಸಂಸ್ಕೃತಿಯನ್ನು ಉಳಿಸಿ ಬೆಳಸುವಲ್ಲಿ ದೂರದರ್ಶನ ಹಾಗು ಆಕಾಶವಾಣಿ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ಸಚಿವ ಮುರುಗನ್ ಹೇಳಿದರು.