Sorab News ಹಸುಗಳ ಕೆಚ್ಚಲು ಕೊಯ್ದು, ಹಲ್ಲೆ ನಡೆಸಿ ವಿಕೃತಿ ಮೆರೆದವರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ತಾಲೂಕು ಗೋ ಸಂರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಜೆ.ಎಸ್. ಚಿದಾನಂದ ಗೌಡ ಆಗ್ರಹಿಸಿದರು.
ಪಟ್ಟಣದ ತಾಲೂಕು ಕಚೇರಿ ಮುಂಭಾಗ ಗೋ ಸಂರಕ್ಷಣಾ ಹೋರಾಟ ಸಮಿತಿ, ರಾಷ್ಟç ಭಕ್ತ ಬಳಗ ಸೇರಿದಂತೆ ವಿವಿಧ ಸಂಘಟನೆಗಳ ವತಿಯಿಂದ ಹಮ್ಮಿಕೊಂಡ ಪ್ರತಿಭಟನೆಯ ನೇತೃತ್ವ ವಹಿಸಿ ಅವರು ಮಾತನಾಡಿದರು.
ಭಾರತೀಯ ಸಂಸ್ಕೃತಿಯಲ್ಲಿ ಗೋವಿಗೆ ಪೂಜ್ಯನೀಯ ಸ್ಥಾನವಿದೆ. ಬಹು ಸಂಖ್ಯಾತ ಹಿಂದೂಗಳು ಗೋವನ್ನು ತಾಯಿ ಎಂದು ಆರಾಧಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ಹಸುವಿನ ಕೆಚ್ಚಲು ಕೋಯ್ದಿರುವುದು ಹೀನ ಕೃತ್ಯವಾಗಿದೆ. ಅಲ್ಲದೇ, ಹೊನ್ನವರ ತಾಲೂಕಿನ ಸಲ್ಕೋಡು ಗ್ರಾಮದಲ್ಲಿಯೂ ಇಂತಹದೇ ಘಟನೆ ಮರುಕಳಿಸಿದೆ. ಇದು ನಾಗರೀಕ ಸಮಾಜ ತಲ್ಲೆ ತಗ್ಗಿಸುವ ಸಂಗತಿ. ಸರ್ಕಾರ ಯಾವುದೇ ಪಕ್ಷಪಾತವಿಲ್ಲದೇ, ಇಂತಹ ಮತೀಯವಾದಿಗಳ ವಿರುದ್ಧ ಕಠಿಣ ಕ್ರಮ ಕೈಗೊಳಗಳ್ಳಬೇಕು ಎಂದು ಆಗ್ರಹಿಸಿದರು.
ರಾಷ್ಟç ಭಕ್ತ ಬಳಗದ ತಾಲೂಕು ಸಂಚಾಲಕ ಕೆ. ಪ್ರಭಾಕರ ರಾಯ್ಕರ್ ಮಾತನಾಡಿ, ಹುಟ್ಟಿದ ಮಗು ಒಂಬತ್ತು ತಿಂಗಳು ತಾಯಿಯ ಹಾಲು ಕುಡಿದರೆ, ಬದುಕಿರುವ ತನಕ ಗೋ ತಾಯಿಯ ಹಾಲನ್ನು ಕುಡಿಯುತ್ತೇವೆ. ಇಂತಹ ಗೋವಿನ ಮೇಲೆ ವಿದ್ವಂಸಕ ಕೃತ್ಯ ಎಸಗಿದವರು ಮನುಷ್ಯರಾಗಿರಲು ಸಾಧ್ಯವೇ ಇಲ್ಲ. ಅಂತಹ ಕಿಡಿಗೇಡಿಗಳಿಗೆ ಯಾವುದೇ ಮುಲಾಜಿಲ್ಲದೇ ಕ್ರಮ ಕೈಗೊಳ್ಳಬೇಕು. ಹಿಂದೂ ಧರ್ಮಕ್ಕೆ ಅಪಮಾನ ಎಸಗಿದವರಿಗೆ ನಿರ್ದಾಕ್ಷಿಣ್ಯ ಕ್ರಮ ತಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
Sorab News ನಂತರ ತಹಶೀಲ್ದಾರ್ ಮಂಜುಳಾ ಹೆಗಡಾಳ್ ಅವರ ಮುಖೇನ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಗೋ ಸಂರಕ್ಷಣಾ ಹೋರಾಟ ಸಮಿತಿ ಕಾರ್ಯದರ್ಶಿ ಶರತ್ ಸ್ವಾಮಿ, ಚಿಕ್ಕಶಕುನ ಗ್ರಾಮ ಸಮಿತಿ ಅಧ್ಯಕ್ಷ ಬಸವರಾಜ್, ಸೀಗೇಹಳ್ಳಿ ಗ್ರಾಮ ಸಮಿತಿ ಅಧ್ಯಕ್ಷ ಕೆರಿಯಪ್ಪ, ಬಾನ್ಕುಳಿ ಮಠದ ಉಪಾಧ್ಯಕ್ಷ ರಾಜು ಹೆಗಡೆ ಹೊಸಬಾಳೆ, ಗಣೇಶ್ ಓಂ ಪಿಕಲ್ಸ್, ಯಲ್ಲಪ್ಪ ಹಿರೇಶಕುನ, ಹುಚ್ಚಪ್ಪ, ಅಣ್ಣಾಜಿ ಗೌಡ, ಗಣಪತಿ, ಶಿವಪ್ಪ, ಸೋಮಪ್ಪ ಸೇರಿದಂತೆ ಇತರರಿದ್ದರು.
೨೧ ಸೊರಬ ೦೧: ಸೊರಬ ಪಟ್ಟಣದ ತಾಲೂಕು ಕಚೇರಿ ಮುಂಭಾಗ ಗೋ ಸಂರಕ್ಷಣಾ ಹೋರಾಟ ಸಮಿತಿ, ರಾಷ್ಟç ಭಕ್ತ ಬಳಗ ಸೇರಿದಂತೆ ವಿವಿಧ ಸಂಘಟನೆಗಳ ವತಿಯಿಂದ ಗೋವಿನ ಮೇಲೆ ವಿಕೃತಿ ಮೆರೆದವರ ಮೇಲೆ ಸೂಕ್ತ ಕಾನೂನು ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು.