Akhila Bharatiya Sahitya Parishad ‘ಅಭಾಸಾಪ’ವು ಇದೇ ಬರುವ ಮೇ ತಿಂಗಳಲ್ಲಿ ರಾಜ್ಯ ಅಧಿವೇಶನವನ್ನು ಆಯೋಜಿಸುತ್ತಿದೆ. ‘ಸಾಹಿತ್ಯದಲ್ಲಿ ಸ್ವತ್ವ’ ಎಂಬ ವಿಷಯದ ಮೇಲೆ ನಡೆಯುವ ಈ ಅಧಿವೇಶನದಲ್ಲಿ ಕವಿಗೋಷ್ಠಿಗಾಗಿ ಕವಿತೆಗಳನ್ನು ಆಹ್ವಾನಿಸಿದೆ.
ಸಾಹಿತ್ಯವೂ ಸೇರಿದಂತೆ ಕಲೆ, ಶಿಕ್ಷಣ, ನಡೆ-ನುಡಿ, ಉಡುಗೆ-ತೊಡುಗೆ, ಪರಿಸರ, ಆಚರಣೆ, ವಾಣಿಜ್ಯ ಇತ್ಯಾದಿ ನಮ್ಮ ರಾಷ್ಟ್ರಜೀವನದ ವಿವಿಧ ರಂಗಗಳಲ್ಲಿ ಸ್ವಾತಂತ್ರ್ಯ ಕಳೆದುಕೊಂಡಾಗ ನಷ್ಟಗೊಂಡ ಸ್ವತ್ವವನ್ನು ಮತ್ತೆ ಗಳಿಕೊಳ್ಳಬೇಕಿತ್ತಷ್ಟೆ. ಸ್ವತ್ವವನ್ನು ಕಳಕೊಂಡರೆ ಸ್ವಾತಂತ್ರ್ಯವನ್ನು ಕಳಕೊಂಡಂತೆ. ಸ್ವಾತಂತ್ರ್ಯವನ್ನು ಗಳಿಸಿಕೊಳ್ಳುವುದೆಂದರೆ ಸ್ವತ್ವವನ್ನು ಪಡಕೊಳ್ಳುವುದೆಂದೇ ಅರ್ಥ. ಎಲ್ಲಾ ರಂಗಗಳಲ್ಲೂ ಸ್ವತ್ವದ ಅಭಿವ್ಯಕ್ತಿ ಸಾಧ್ಯವಾದಾಗ ಗಳಿಸಿಕೊಂಡ ಸ್ವಾತಂತ್ರ್ಯ ಪೂರ್ಣವಾಯಿತೆಂದುಕೊಳ್ಳಬಹುದು.
ಎಲ್ಲಾ ರಂಗಗಳಲ್ಲಿ ನಾವು ಕಳೆದುಕೊಂಡ ನಮ್ಮತನವನ್ನು ಮತ್ತೆ ಪಡೆಯುವ ಸಾಧ್ಯತೆಗಳನ್ನು, ಅವು ಪಡೆಯಬೇಕಾದ ಅಭಿವ್ಯಕ್ತಿಯ ಬಗೆಯನ್ನು ಇತ್ಯಾದಿ ಹತ್ತುಹಲವು ಆಯಾಮಗಳಲ್ಲಿ ಕೆಲವನ್ನಾದರೂ ಸ್ಪರ್ಶಿಸಿ ಉತ್ಕೃಷ್ಟ ಕಾವ್ಯಗುಣವುಳ್ಳ ಸ್ವರಚಿತ ಕವಿತೆಗೆ ಈ ಕವಿಗೋಷ್ಠಿಯಲ್ಲಿ ವಾಚನಕ್ಕೆ ಅವಕಾಶವಿದೆ.
- ಕವಿತೆಗಳು ಹದಿನಾರರಿಂದ ಇಪ್ಪತ್ತೆರಡು ಸಾಲುಗಳ ಮಿತಿಯಲ್ಲಿರಲಿ.
- ಭಾರತೀಯ ಭಾಷೆಯಲ್ಲಿರಲಿ.
- ಕನ್ನಡದ ಹೊರತಾದ ಕವಿತೆಗಳ ಕನ್ನಡ ಭಾವಾನುವಾದವನ್ನು ಕಳುಹಿಸಬೇಕು.
- ಆಯ್ಕೆಯಾದ ಕವಿತೆಗಳನ್ನು ರಾಜ್ಯ ಅಧಿವೇಶನದಲ್ಲಿ ವಾಚಿಸಲು ಅವಕಾಶ ನೀಡಲಾಗುವುದು.
- ಆಯ್ಕೆ ಸಮಿತಿಯ ನಿರ್ಣಯವೇ ಅಂತಿಮ.
- ಕವಿತೆಗಳನ್ನು ದಿನಾಂಕ ೨೦೨೫ ಜನವರಿ ೩೧ರ ಒಳಗೆ ಕಳುಹಿಸಬೇಕು.
- ಕವಿತೆಗಳನ್ನು ವಾಟ್ಸಾಪಿನಲ್ಲಿ ವರ್ಡ್ ಫೈಲಿನಲ್ಲಿಯೇ ಕಳಿಸಬೇಕು.
- ಕಳುಹಿಸಬೇಕಾದ ವಾಟ್ಸಾಪ್ ಸಂಖ್ಯೆ
9480007488 (ಸುಜಾತಾ ಹೆಗಡೆ) - ಕವಿತೆ ಜತೆಗೆ ಹೆಸರು, ವಯಸ್ಸು, ವಿಳಾಸ ಹಾಗೂ ಸಂಪರ್ಕ ಸಂಖ್ಯೆಗಳನ್ನು ನಮೂದಿಸಿ.