Idagunji Mahaganapati Yakshagana Mandali ಸ್ವಾತಂತ್ಯ ಪೂರ್ವದಲ್ಲಿ ಅಂದರೆ 1934ರಲ್ಲಿ ಸ್ಥಾಪನೆಯಾದ ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಕೆರೆಮನೆಗೆ ಈಗ 90ನೇ ವರುಷದ ಸಂಭ್ರಮ.
ಈ ಸಮಯದಲ್ಲೇ ಸಂಸ್ಥೆಗೆ ವಿಶ್ವಸಂಸ್ಥೆಯ ಮಾನ್ಯತೆ, ಗೌರವ ಪ್ರಾಪ್ತವಾಗಿದೆ.
ಯಕ್ಷಗಾನ ಸಂಸ್ಥೆಯೊಂದಕ್ಕೆ ಈ ಮಾನ್ಯತೆ ಸಿಕ್ಕಿದ್ದು ಇದೇ ಪ್ರಥಮ. ವಿಶ್ವದ 58 ರಾಷ್ಟ್ರೀಯ ಸಂಸ್ಥೆಗಳಲ್ಲಿ ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಕೆರೆಮನೆ (ರಿ) ಒಂದಾಗಿದೆ.
ಜೂನ್ ತಿಂಗಳಿನಲ್ಲಿ ಯುನೆಸ್ಕೋ ಮುಖ್ಯ ಕಚೇರಿಯಲ್ಲಿ ನಡೆದ 10ನೇ ಅಧಿವೇಶನದಲ್ಲಿ ಮಂಡಳಿಗೆ ಮಾನ್ಯತೆ ಘೋಷಿಸಲಾಗಿದೆ. ಯುನೆಸ್ಕೋ 2003ರ ಅಮೂರ್ತ ಸಾಂಸ್ಕೃತಿಕ ಪರಂಪರೆ, ಸಂರಕ್ಷಣೆ, ಆಂತರಿಕ ಸಮಿತಿಗೆ ಸಲಹೆ ಮಾಡಲು ಮಂಡಳಿ ಮಾನ್ಯತೆ ಪಡೆದಿದೆ.
Idagunji Mahaganapati Yakshagana Mandali ಯಕ್ಷರಂಗದ ಮೇರು ಕಲಾವಿದರಾದ ದಿವಂಗತ ಕೆರೆಮನೆ ಶಿವರಾಮ ಹೆಗಡೆ ಅವರಿಂದ ಸ್ಥಾಪಿತವಾದ ಸಂಸ್ಥೆ. ಯಕ್ಷ ದಿಗ್ಗಜರಾದ (ಪುತ್ರರು) ಶಂಭು ಹೆಗಡೆ, ಮಹಾಬಲ ಹೆಗಡೆ ಮತ್ತು ಗಜಾನನ ಹೆಗಡೆ ಅವರು,ಸಮರ್ಥವಾಗಿ ಮುನ್ನಡೆಸಿದರು. ಪ್ರಸ್ತುತ ಶಿವಾನಂದ ಹೆಗಡೆ ಅವರ ಮುಂದಾಳತ್ವದಲ್ಲಿ ಸಂಸ್ಥೆ ಕಲಾಸೇವೆಯಲ್ಲಿ ಮುನ್ನಡೆದಿದೆ.