PES Trust ಪಿ.ಇ.ಎಸ್ ಟ್ರಸ್ಟ್ ಹಾಗೂ ಅನ್ವೇಷಣ ಸಂಸ್ಥೆಯ ವತಿಯಿಂದ ಶಿವಮೊಗ್ಗದ ಸಾಗರ ರಸ್ತೆಯಲ್ಲಿರುವ PESITM ಕಾಲೇಜು ಆವರಣದ ಪ್ರೇರಣಾ ಕನ್ವೆನ್ಷನ್ ಹಾಲ್ ನಲ್ಲಿ “Malnad Startup Summit – 2025” ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕೇಂದ್ರದ ಕೃಷಿ ಮತ್ತು ರೈತರ ಕಲ್ಯಾಣ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಯ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಈ ವಿಶೇಷ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ “Start Up Exhibition” ಹಾಗೂ ಸಭಾ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ ನೀಡಿದರು.
ಈ ದೇಶ ಬಹುಪಾಲು ಭಾಗ ಗ್ರಾಮಗಳಿಂದ ಕೂಡಿದೆ. ಹೆಚ್ಚಿನ ಜನರು ಕೃಷಿಯನ್ನು ಹಾಗೂ ಹೈನುಗಾರಿಕೆ ನಂಬಿ ಜೀವನ ನಡೆಸುತ್ತಿದ್ದಾರೆ. ಹಗಲು ರಾತ್ರಿ, ಬಿಸಿಲು ಮಳೆ ಲೆಕ್ಕಿಸದೇ ಉಳುಮೆ ಮಾಡುವ ರೈತ ಒಬ್ಬ ಸೈನಿಕನಂತೆ ಎಂದರಿತ ನಾವು “ಜೈ ಜವಾನ್ – ಜೈ ಕಿಸಾನ್” ಎಂಬ ಘೋಷಣೆ ನೀಡಿ ವಿಶೇಷ ಗೌರವ ಕೂಡ ನೀಡಿದೆ.
ಕೇಂದ್ರದಲ್ಲಿ ಪ್ರಧಾನಿ ಶ್ರೀ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅನ್ನದಾತನಿಗೆ ಭರಪೂರ ಕೊಡುಗೆಗಳನ್ನು ಜಾರಿಗೆ ತಂದು ರೈತರ ಶ್ರೇಯೋಭಿವೃದ್ಧಿಗೆ ಕೈಜೋಡಿಸಿದೆ. ಕೃಷಿ ಬೆಳೆಗಳಿಗೆ ಗರಿಷ್ಠ ಬೆಂಬಲ ಬೆಲೆ ನೀಡುವುದರ ಮೂಲಕ ರೈತರ ಕಲ್ಯಾಣಕ್ಕಾಗಿ ಶ್ರಮಿಸುತ್ತಿದೆ.
ಜೊತೆಗೆ ಭಾರತ ತನ್ನ ಎಲ್ಲ ರಂಗದಲ್ಲಿಯೂ ಹೊಸ ರೀತಿಯ ಅನ್ವೇಷಣೆ ನಡೆಸಿ ಅಭಿವೃದ್ಧಿ ಹೊಂದುತ್ತಾ ಮುಂದುವರಿದ ರಾಷ್ಟ್ರಕ್ಕೆ ಸರಿ ಸಮಾನವಾಗಿ ನಿಲ್ಲುತ್ತಿದೆ. ಅವಕಾಶಕ್ಕಾಗಿ ಎಲ್ಲರನ್ನೂ ತನ್ನತ್ತ ಸೆಳೆಯುತ್ತಿದೆ. ಇದರಲ್ಲಿ ಕೃಷಿ ಕ್ಷೇತ್ರವು ಹೊರತಾಗಿಲ್ಲ. ಕೃಷಿ ಕ್ಷೇತ್ರವನ್ನು ಆಧುನಿಕತೆಗೆ ತೆರೆದಿಡಲು ದೇಶ ಮುಕ್ತವಾಗಿ ಸ್ವಾಗತಿಸುತ್ತಿದೆ.
PES Trust ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕೂಡ ಕೃಷಿ ಕ್ಷೇತ್ರದ Startup ಗಳಿಗೆ ಅನೇಕ ಯೋಜನೆಗಳನ್ನು ಹಾಗೂ ಕೊಡುಗೆಗಳನ್ನು ನೀಡುತ್ತಿದ್ದು, ಇದರ ಭವಿಷ್ಯದ ಆಲೋಚನೆಗಳನ್ನು ಮತ್ತು ರೈತರಿಗೆ ಇದರಿಂದಾಗುವ ಅನೇಕ ಪ್ರಯೋಜನಗಳನ್ನು ಪ್ರಸ್ತುತ ಪಡಿಸಲು ಈ ವಿಶೇಷ ಪ್ರದರ್ಶನ ಹಾಗೂ ಕಾರ್ಯಕ್ರಮಕ್ಕೆ ಮುನ್ನುಡಿ ಬರೆಯಲಾಗಿದೆ.
ಈ ಸಂದರ್ಭದಲ್ಲಿ ಅನ್ವೇಷಣ ಸಂಸ್ಥೆಯ ಸಿಇಒ ಶ್ರೀ ಪಾಟೀಲ್ ಅವರು, ಶಾಸಕರುಗಳಾದ ಶ್ರೀ ಚನ್ನಬಸಪ್ಪ ಅವರು, ಶ್ರೀ ಧನಂಜಯ ಸರ್ಜಿ ಅವರು, ಶ್ರೀ ಅರುಣ್ ಅವರು, ಗಣ್ಯರಾದ ಶ್ರೀ ಸುಭಾಷ್ ರಾಘವೇಂದ್ರ ಅವರು, ಶ್ರೀ ಮೇಘರಾಜ್ ಅವರು, ಶ್ರೀ ನಾಗರಾಜ್ ಅವರು ಉಪಸ್ಥಿತರಿದ್ದರು.