Co-operative Societies Audit Department ಶಿವಮೊಗ್ಗ ಜಿಲ್ಲೆಯ ಕಾರ್ಯವ್ಯಾಪಿಯಲ್ಲಿ ಬರುವ ಎಲ್ಲಾ ಸಹಕಾರ ಸಂಘಗಳು ಮತ್ತು ಸೌಹಾರ್ದ ಸಹಕಾರಿಗಳು 2024-25 ನೇ ಸಾಲಿನ ಲೆಕ್ಕಪರಿಶೋಧನೆಯನ್ನು ಸಹಕಾರ ಸಂಘಗಳ ಕಾಯ್ದೆ ಕಲಂ 63(1)ರ ಮೇರೆಗೆ ಸೆಪ್ಟೆಂಬರ್ – 01 ರೊಳಗೆ ಪೂರೈಸಿಕೊಳ್ಳಬೇಕಾಗಿರುತ್ತದೆ.
ಆದ್ದರಿಂದ ಇಲಾಖೆಯವರುhttp://www.sahakaradarpana.kar.nic.in ವೆಬ್‌ಸೈಟ್‌ನಲ್ಲಿ ಪ್ರಕಟಿಸಿರುವ ಅರ್ಹ ಲೆಕ್ಕಪರಿಶೋಧಕರ ಪೈಕಿ ಒಬ್ಬರನ್ನು ಸಂಘದ 2023-24 ಸಾಲಿನ ಮಹಾಸಭೆಯಲ್ಲಿ ಆಯ್ಕೆ ಮಾಡಿಕೊಂಡಿರುವ ಬಗ್ಗೆ ಮಾಹಿತಿಯನ್ನು ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖಾ ಕಚೇರಿಗೆ ಸಲ್ಲಿಸದೇ ಇರುವವರು ತಕ್ಷಣವೇ ಉಪ ನಿರ್ದೇಶಕರ ಕಚೇರಿ, ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆ, ಜ್ಯುವೆಲ್ ರಾಕ್ ಹೋಟೆಲ್ ರಸ್ತೆ, ಜಗನ್ನಾಥ ನರ್ಸಿಂಗ್ ಹೋಂ ಪಕ್ಕ, ಪಿಜಿಎಸ್ ಟವ್, 2ನೇ ಮಹಡಿ, ಶಿವಮೊಗ್ಗ ಇವರ ಕಚೇರಿಗೆ ಸಲ್ಲಿಸುವತೆ ಹಾಗೂ ಸಕಾಲದಲ್ಲಿ ಲೆಕ್ಕ ಪರಿಶೋಧನೆ ನಿರ್ವಹಿಸಿಕೊಂಡು, ವರದಿಯ ಪ್ರತಿಯನ್ನು ಕಡ್ಡಾಯವಾಗಿ ದಿ: 01-09-2025 ರೊಳಗೆ ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖಾ ಕಚೇರಿಗೆ ಸಲ್ಲಿಸುವಂತೆ ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.
Co-operative Societies Audit Department ಸೆಪ್ಟೆಂಬರ್ 1 ರೊಳಗೆ ಸಹಕಾರ ಸಂಘಗಳು ತಮ್ಮ ಲೆಕ್ಕಪರಿಶೋಧನೆ ಪೂರೈಸಲು ಇಲಾಖೆ ಸೂಚನೆ
Date: