JCI Shivamogga ಶಿವಮೊಗ್ಗ ನಗರದ ಸರ್ಕಾರಿ ನೌಕರರ ಭವನದಲ್ಲಿ ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಸಂಸ್ಥೆ ವತಿಯಿಂದ ಜ. 21ರಂದು ಸಂಜೆ 6.30ಕ್ಕೆ 2025ನೇ ಸಾಲಿನ ನೂತನ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಪದವಿ ಸ್ವೀಕಾರ ಸಮಾರಂಭ ಹಮ್ಮಿಕೊಳ್ಳಲಾಗಿದೆ.
2025ರ ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಅಧ್ಯಕ್ಷರಾಗಿ ಗಣೇಶ್ ಜಿ ಹಾಗೂ ಕಾರ್ಯದರ್ಶಿಯಾಗಿ ಮಂಜುನಾಥ್ ರಾವ್ ಕದಂ ಅವರು ಪದಾಧಿಕಾರಿಗಳೊಂದಿಗೆ ಅಧಿಕಾರ ಸ್ವೀಕರಿಸುವರು.
JCI Shivamogga ಬಸವಕೇಂದ್ರದ ಶ್ರೀ ಡಾ. ಬಸವ ಮರುಳಸಿದ್ಧ ಸ್ವಾಮೀಜಿ ಉದ್ಘಾಟಿಸುವರು. 2024ರ ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಅಧ್ಯಕ್ಷೆ ಡಾ. ಲಲಿತಾ ಭರತ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಜೆಸಿಐ ಭಾರತ ವಲಯ 24ರ ವಲಯಾಧ್ಯಕ್ಷ ಗೌರೀಶ್ ಭಾರ್ಗವ್, ಸಮುದಾಯ ಅಭಿವೃದ್ಧಿ ರಾಷ್ಟ್ರೀಯ ನಿರ್ದೇಶಕ ಅನೂಷ್ ಗೌಡ, ವಲಯ ಉಪಾಧ್ಯಕ್ಷ ಸಿ.ಎ.ಮಧುಸೂದನ್ ನಾವಡ, ಜೆಎಸಿ ಉಪಾಧ್ಯಕ್ಷ ಶೇಷಗಿರಿ.ಡಿ.ಕೆ. ಉಪಸ್ಥಿತರಿರುವರು.
2025ನೇ ಸಾಲಿನ ಕಾರ್ಯಕಾರಿ ಸಮಿತಿ ಪದಾಧಿಕಾರಿಗಳು ಹಾಜರಿರುವರು.