Indian Medical Association ಶಿವಮೊಗ್ಗನಗರದ ಬಹುಮುಖಿಯ 45ನೇ ಕಾರ್ಯಕ್ರಮವಾಗಿ ಜ. 17ರ ಶುಕ್ರವಾರ ಸಂಜೆ 5:30ಕ್ಕೆ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನ ಪ್ರೆಂಡ್ಸ್ ಸೆಂಟರ್ ಹಾಲ್‌ನಲ್ಲಿ ಭಾರತೀಯ ವೈದ್ಯಕೀಯ ಸಂಘ, ಸಹಯೋಗದಲ್ಲಿ ದೂರದರ್ಶನದ ಥಟ್ ಅಂತ ಹೇಳಿ ಖ್ಯಾತಿಯ ವೈದ್ಯರು, ಲೇಖಕರು ಆದ ಡಾ. ನಾ. ಸೋಮೇಶ್ವರರವರು ಆರೋಗ್ಯ ನಿರ್ವಹಣೆ ಮತ್ತು ಹಿರಿಯರು ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಡಾ.ನಾ. ಸೋಮೇಶ್ವರರವರು, ವೃತ್ತಿಯಲ್ಲಿ ವೈದ್ಯರು ಹಾಗೂ ಪ್ರವೃತ್ತಿಯಲ್ಲಿ ಬರಹಗಾರರಾಗಿದ್ದು, ಅಂಕಣಕಾರರು ಹಾಗೂ ಕ್ವಿಜ್ ಮಾಸ್ಟರ್ ಆಗಿಯೂ ಚಿರಪರಿಚಿತರು. ಇವರಿಗೆ ವೈದ್ಯ ಸಾಹಿತ್ಯ ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಆರ್ಯಭಟ ಅಂತರಾಷ್ಟ್ರೀಯ ಪ್ರಶಸ್ತಿ, ಡಾ.ಬಿ.ಸಿ. ರಾಯ್ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು ಲಭಿಸಿವೆ.
ಬಹಳ ಮುಖ್ಯವಾಗಿ ಚಂದನ ವಾಹಿನಿಯಲ್ಲಿ ನಡೆಸಿಕೊಂಡು ಬರುತ್ತಿರುವ ‘ಥಟ್ ಅಂತ ಹೇಳಿ’ ಕಾರ್ಯಕ್ರಮ ಬಹಳ ವಿಶೇಷವಾದುದು. ನಾಲ್ಕು ಸಾವಿರ ಕಂತುಗಳನ್ನು ದಾಟಿ ಮುನ್ನಡೆಯುತ್ತಿರುವ ಈ ಕಾರ್ಯಕ್ರಮ ಭಾರತದ ಟೆಲಿವಿಷನ್ ಇತಿಹಾಸದಲ್ಲಿ ದಾಖಲೆ ಸೃಷ್ಟಿಸಿದೆ.
Indian Medical Association ಡಾ. ನಾ. ಸೋಮೇಶ್ವರ ರವರ ಈ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕೋರಲಾಗಿದೆ.
ವಿವರಗಳಿಗೆ 9449284495, 9845014229, 95380 20367 ರಲ್ಲಿ ಸಂಪರ್ಕಿಸಬಹುದು.