Pre University Institutes ರಾಷ್ಟ್ರೀಯ ಆದಾಯ ಹೆಚ್ಚಿಸುವಂತಹ ಉದ್ದಿಮೆಗಳನ್ನು ಕೈಗೊಳ್ಳುವ ಕಡೆಗೆ ವಿಜ್ಞಾನ ವಿದ್ಯಾರ್ಥಿಗಳು ಗಮನಹರಿಸಬೇಕು ಎಂದು ಹಿರಿಯ ಪತ್ರಕರ್ತ ಡಾ ಎಚ್ ಬಿ ಮಂಜುನಾಥ ಕರೆಕೊಟ್ಟರು. ಧ ರಾ ಮ ವಿಜ್ಞಾನ ಪದವಿ ಪೂರ್ವ ಕಾಲೇಜಿನ ಪಠ್ಯೇತರ ಚಟುವಟಿಕೆಗಳ ಸಮಾರೋಪ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡುತ್ತಾ ದೇಶದಲ್ಲಿ ವಾರ್ಷಿಕ ಸುಮಾರು ಒಂದೂವರೆ ಕೋಟಿ ವಿದ್ಯಾರ್ಥಿಗಳು ಪಿ ಯು ಪರೀಕ್ಷೆ ತೆಗೆದುಕೊಳ್ಳುತ್ತಾರೆ, ಇವರಲ್ಲಿ ಶೇಕಡ 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿವಿಧ ಪದವೀಧರರಾಗುತ್ತಾರೆ, ಇವರಿಗೆಲ್ಲಾ ನೌಕರಿ ಕೊಡಲು ಯಾವುದೇ ಸರ್ಕಾರದಿಂದಲೂ ಸಾಧ್ಯವಿಲ್ಲ, ಹಾಗೆ ಕೊಟ್ಟರೂ ಎಲ್ಲರಿಗೂ ಸಂಬಳ ಕೊಡಲು ಸಂಪನ್ಮೂಲ ಇರುವುದಿಲ್ಲ, ಆದ್ದರಿಂದ ಅಂತರಿಕ ಉತ್ಪಾದನೆ ಹಾಗೂ ರಾಷ್ಟ್ರೀಯ ಆದಾಯ ಹೆಚ್ಚಿಸುವಂತಹ ಉದ್ದಿಮೆಗಳನ್ನು ಕೈಗೊಳ್ಳುವ ಕಡೆಗೆ ಯುವಕ ಯುವತಿಯರು ಗಮನಹರಿಸಬೇಕು ಎಂದು ಹೇಳಿದರು.
Pre University Institutes ಪಠ್ಯೇತರ ಚಟುವಟಿಕೆಗಳ ಸಮಾರೋಪ ಎಂದರೆ ಇಲ್ಲಿಗೆ ಇದು ಸಾಕು ನಾಳೆಯಿಂದ ಪರೀಕ್ಷೆಗಾಗಿ ಓದಿನ ಕಡೆಗೆ ಪೂರ್ಣ ಗಮನ ಕೊಡಿ ಎಂದು ಹೇಳುವ ಕಾರ್ಯಕ್ರಮ ಎಂದರು. ಸಮಾರಂಭದ ಅತಿಥಿಗಳಾಗಿ ಮಾತನಾಡಿದ ಧರಾಮ ಪದವಿ ಕಾಲೇಜು ಪ್ರಾಂಶುಪಾಲೆ ಶ್ರೀಮತಿ ಎಂ ಪಿ ರೂಪಶ್ರೀಯವರು ಪ್ರತಿ ವಿದ್ಯಾರ್ಥಿಯೂ ತಾನು ಓದುತ್ತಿರುವುದು ತನ್ನ ಭವಿಷ್ಯಕ್ಕಾಗಿ ಎಂದು ತಿಳಿದು ಕೊಳ್ಳಬೇಕು, ಇದಕ್ಕೆ ಏಕಾಗ್ರತೆ ಹಾಗೂ ಆತ್ಮವಿಶ್ವಾಸ ಅವಶ್ಯ ಎಂದರು. ಅಧ್ಯಕ್ಷ ಸ್ಥಾನದಿಂದ ಕಾಲೇಜಿನ ಪಿಯು ವಿಭಾಗದ ಪ್ರಾಂಶುಪಾಲ ಜೆ ಶಿವಪ್ಪನವರು ಮಾತನಾಡುತ್ತಾ ಪ್ರತಿ ವಿದ್ಯಾರ್ಥಿಯೂ ತಾನು ಸಮರ್ಥ ಎಂಬ ದೃಢ ಭಾವನೆಯಿಂದ ಸಾಧನೆ ಮಾಡಬೇಕು ಎಂದರು. ವಿದ್ಯಾರ್ಥಿ ಸಂಘದ ಹರ್ಷವರ್ಧನ ಅಕ್ಕಿ ಹಾಗೂ ಹೆಚ್ ಎಸ್ ಮೇಘನಾ ಉಪಸ್ಥಿತರಿದ್ದು ಅನುಷಾ ಎಮ್, ಐಶ್ವರ್ಯ ಆರ್ ಪ್ರಾರ್ಥನೆ ಹಾಡಿದರು. ರಮ್ಯಾ ಬಿ ಸ್ವಾಗತ ಕೋರಿದರೆ ಇಂದೂ ಆರ್ ಅತಿಥಿಗಳ ಪರಿಚಯ ಮಾಡಿದರು. ಉಪನ್ಯಾಸಕರುಗಳಾದ ಕೆ ಜಿ ಶ್ವೇತಾ, ಶೋಭಾ ಟಿ, ರಶ್ಮಿ ಎ ಆರ್ ಬಹುಮಾನ ವಿತರಣೆ ನಿರ್ವಹಿಸಿದರೆ ರುದ್ರೇಶ್ ಮುಂತಾದವರು ಸಹಕರಿಸಿದರು. ಕೆ ರಂಗಮ್ಮ ಮೇಘನಾ ನಿರೂಪಿಸಿದ ಕಾರ್ಯಕ್ರಮದಲ್ಲಿ ವಂದನೆಗಳನ್ನು ಎ ಗಗನ್ ಅರ್ಪಿಸಿದರು. ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ ಸಾಂಸ್ಕೃತಿಕ ಪ್ರಸ್ತುತಿಗಳು ನೆರವೇರಿದವು.