Shivamogga Rotary Club 40 ವರ್ಷಗಳ ನಂತರ ಪ್ರತಿಯೊಬ್ಬರೂ ತಮ್ಮ ಆರೋಗ್ಯವನ್ನು ಸದೃಢವಾಗಿ ಇಟ್ಟುಕೊಳ್ಳುವುದರ ಜೊತೆಗೆ ಸಕಾಲದಲ್ಲಿ ಮೂಳೆ ಸಾಂದ್ರತೆ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಮ್ಯಾಕ್ಸ್ ಆಸ್ಪತ್ರೆಯ ಖ್ಯಾತ ಕೀಲು ಮೂಳೆ ತಜ್ಞರಾದ ರೋಟೇರಿಯನ್ ಡಾ. ಶಿವಕುಮಾರ್ ಹೆಚ್ ಸಿ ತಿಳಿಸಿದರು ಅವರು ಇಂದು ಶಿವಮೊಗ್ಗ ರೋಟರಿ ಕ್ಲಬ್ ವತಿಯಿಂದ ಹಮ್ಮಿಕೊಳ್ಳಲಾದ ಉಚಿತ ಮೂಳೆ ತಪಾಸಣೆ, ಶಿಬಿರ ಉದ್ಘಾಟಿಸಿ ಮಾತನಾಡಿದರು. ಇಂದು ಶೇಕಡ 30ರಷ್ಟು ಜನರು ಮೂಳೆ ತೊಂದರೆಯಿಂದ ಬಳಲುತ್ತಿದ್ದಾರೆ. ಪ್ರಾರಂಭಿಕ ಹಂತದಲ್ಲಿಯೇ ಕಾಯಿಲೆ ಪತ್ತೆ ಹಚ್ಚಿ ಸಕಾಲದಲ್ಲಿ ಚಿಕಿತ್ಸೆ ಪಡೆದುಕೊಂಡರೆ ರೋಗ ಗುಣಪಡಿಸಿಕೊಳ್ಳಬಹುದು ಎಂದು ತಿಳಿಸಿದರು.
Shivamogga Rotary Club ಪ್ರತಿನಿತ್ಯ ವ್ಯಾಯಾಮ ಯೋಗ ಪ್ರಾಣಾಯಾಮ ಹಾಗೂ ಪೌಷ್ಟಿಕಾಂಶ ಆಹಾರ ಪದಾರ್ಥಗಳ ಸೇವನೆಯಿಂದ ಕೀಲು ಮೂಳೆಗಳು ಸದೃಢವಾಗಿರುತ್ತವೆ. ಆದ್ದರಿಂದ ಇಂತಹ ಶಿಬಿರದಲ್ಲಿ ಸಾರ್ವಜನಿಕರು ಭಾಗವಹಿಸಿ ಉಚಿತವಾಗಿ ಮೂಳೆ ಸಾಂದ್ರತೆ ತಪಾಸಣೆ ಮಾಡಿಸಿಕೊಳ್ಳುವುದರ ಜೊತೆಗೆ ಅಗತ್ಯ ಮಾಹಿತಿ ಪಡೆದುಕೊಳ್ಳಬೇಕು ಎಂದು ನುಡಿದರು ಅಧ್ಯಕ್ಷರಾದ ಕೆ ಸೂರ್ಯನಾರಾಯಣ ಉಡುಪ ಮಾತನಾಡುತ್ತಾ ಇಂತಹ ಪರೀಕ್ಷೆ ಬೇರೆಡೆ ಮಾಡಿಸಿಕೊಂಡಾಗ 2000 ದಿಂದ 3000 ಖರ್ಚಾಗುತ್ತೆ ಆದರೆ ಇಲ್ಲಿ ಸಂಪೂರ್ಣವಾಗಿ ಉಚಿತವಾಗಿ ಮಾಡುತ್ತಿರುವುದರಿಂದ ಇಂತಹ ಪ್ರಯೋಜನ ಪಡೆದುಕೊಳ್ಳಬೇಕು ಎಂದು ತಿಳಿಸಿದರು ಕಾರ್ಯದರ್ಶಿ ಎನ್ ಜಿ ಉಷಾ ಮಾಜಿ ಸಹಾಯಕ ಗೌರ್ನರ್ ವಿಜಯಕುಮಾರ್ ಜಿ ಮಹಾಬಲೇಶ್ವರ ಭಟ್ ಎನ್ ವಿ ಭಟ್ ಗಾಯತ್ರಿ ಸುಮತಿಂದ್ರ ಸಿ
ವಿಜಯಕುಮಾರ್ ಕಿಶೋರ್ ಶೀರ್ ನಾಳಿ ಶೈಲಿನ್ ಮುಂತಾದ ರೋಟರಿ ಸದಸ್ಯರು ಸದಸ್ಯರು ಆಸ್ಪತ್ರೆ ಸಿಬ್ಬಂದಿಯವರು ಉಪಸ್ಥಿತರಿದ್ದರು ೯೦ ಜನ ನಾಗರಿಕರು ಭಾಗವಹಿಸಿ ಇದರ ಸದುಪಯೋಗ ಪಡೆದುಕೊಂಡರು.