Friday, January 24, 2025
Friday, January 24, 2025

Davangere University ಶಾಸ್ತ್ರೀಯ ನೃತ್ಯ ,ಸಂಗೀತ ಚಿತ್ರಕಲೆ ಆಸಕ್ತಿಯು ಸುಸಂಸ್ಕೃತಿಯ ಲಕ್ಷಣ – ಪ್ರೊ.ಬಿ. ಕುಂಬಾರ

Date:

Davangere University ಶೈಕ್ಷಣಿಕ ರಂಗದಲ್ಲಿ ಗುರುತಿಸಿಕೊಂಡಿರುವ ದಾವಣಗೆರೆ ಮಹಾನಗರದಲ್ಲಿ ಶಾಸ್ತ್ರೀಯ ನೃತ್ಯ ಸಂಗೀತಾದಿಗಳ ಪೂರ್ಣ ಪ್ರಮಾಣದ ಶಿಕ್ಷಣ ನೀಡುವ ಮಹಾವಿದ್ಯಾಲಯ ಒಂದರ ಸ್ಥಾಪನೆಯ ಅಗತ್ಯವಿದೆ ಎಂದು ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ. ಬಿ ಡಿ ಕುಂಬಾರ ಅಭಿಪ್ರಾಯ ಪಟ್ಟರು.

ದಾವಣಗೆರೆ ನಗರದ ಗುಂಡಿ ಮಹಾದೇವಪ್ಪ ಕಲ್ಯಾಣ ಮಂಟಪದಲ್ಲಿ ಏರ್ಪಾಡಾಗಿದ್ದ ನಾಟ್ಯ ಭಾರತಿ ಶಾಸ್ತ್ರೀಯ ನೃತ್ಯ ಮತ್ತು ಸಂಗೀತ ಕಲಾ ಕೇಂದ್ರದ 65ನೇ ವಾರ್ಷಿಕ ಮಹೋತ್ಸವ ಉದ್ಘಾಟಿಸಿ ಮಾತನಾಡುತ್ತಾ ಶಾಸ್ತ್ರೀಯ ನೃತ್ಯ ಸಂಗೀತ ಚಿತ್ರಕಲೆ ಇವುಗಳಲ್ಲಿನ ಆಸಕ್ತಿ ಸುಸಂಸ್ಕೃತಿಯ ಲಕ್ಷಣವಾಗಿದ್ದು ಶಿಕ್ಷಣದ ಜೊತೆ ಜೊತೆಗೆ ಕಲೆಗಳಲ್ಲೂ ಆಸಕ್ತಿಯನ್ನು ಮುಂದುವರಿಸಲು ಪೋಷಕರು ಮಕ್ಕಳಿಗೆ ಪ್ರೋತ್ಸಾಹಿಸಬೇಕು. ನೃತ್ಯ ಸಂಗೀತಾದಿಗಳಲ್ಲಿ ಸಾಧನೆ ಮಾಡಿದವರಿಗೆ ಉದ್ಯೋಗಗಳಲ್ಲೂ ಮೀಸಲಾತಿ ಇದೆ ಎಂದರು. ತಮ್ಮ ವಿಶ್ವವಿದ್ಯಾನಿಲಯದಲ್ಲಿ ಈ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಮಾಡಲು ಎರಡು ಸ್ಥಾನಗಳ ಅವಕಾಶವಿದೆ ಎಂದು ಸಹಾ ಹೇಳಿದರು. ನಾಟ್ಯ ಭಾರತಿಯು 65 ವರ್ಷಗಳಿಂದ ನಿರಂತರ ಶಾಸ್ತ್ರೀಯ ನೃತ್ಯ ಸಂಗೀತಗಳ ಶಿಕ್ಷಣವನ್ನು ಮುಂದುವರಿಸಿದೆ ಎಂದರೆ ಇದಕ್ಕೆ ಕಲಾ ಪೋಷಕರೇ ಕಾರಣ ಎಂದರು.

ಮುಖ್ಯ ಅತಿಥಿಗಳಾಗಿ ಮಾತನಾಡಿದ ನಾಟ್ಯ ಭಾರತಿಯ ಗೌರವಾಧ್ಯಕ್ಷರು ಹಿರಿಯ ಪತ್ರಕರ್ತರೂ ಆದ ಡಾ. ಎಚ್ ಬಿ ಮಂಜುನಾಥ ಸಂಪತ್ತಿನಿಂದ ಸಂತೋಷ ಪಡೆಯಬಹುದು. ಆದರೆ ಆನಂದ ಪಡೆಯಬೇಕೆಂದರೆ ಅದು ಲಲಿತ ಕಲೆಗಳಾದ ಶಾಸ್ತ್ರೀಯ ನೃತ್ಯ ಸಂಗೀತಗಳಿಂದ ಸಾಧ್ಯ ಏಕೆಂದರೆ ಭಾರತೀಯ ಶಾಸ್ತ್ರೀಯ ನೃತ್ಯ ಸಂಗೀತಗಳು ಮಾನವ ಸೃಷ್ಟಿ ಆಗಿರದೆ ದೈವ ಸೃಷ್ಟಿಯಾಗಿದೆ, ಆತ್ಮ ನಿವೇದನೆಗೂ ಪರಮಾತ್ಮನ ಸಾಕ್ಷಾತ್ಕಾರಕ್ಕೂ ಇವು ಸಾಧನ ಎಂಬ ಭಾವನೆ ನಮ್ಮ ದೇಶದಲ್ಲಿದೆ, ಆದ್ದರಿಂದಲೇ ನಮ್ಮ ಶಾಸ್ತ್ರೀಯ ನೃತ್ಯ ಸಂಗೀತಗಳನ್ನು ವಿಶ್ವಾದ್ಯಂತ ಎಲ್ಲರೂ ಪೂಜ್ಯ ಭಾವನೆಯಿಂದ ಸ್ವೀಕರಿಸುತ್ತಾರೆ ಎಂದರಲ್ಲದೆ ಪ್ರಪಂಚದ ಬೇರೆ ಬೇರೆ ದೇಶಗಳಲ್ಲಿ ನೃತ್ಯ ಮತ್ತು ಸಂಗೀತಗಳ ಕುರಿತಾಗಿ ಗ್ರಂಥಗಳು 150 ರಿಂದ 200 ವರ್ಷಗಳ ಕೆಳಗೆ ರಚನೆಯಾದರೆ ಭಾರತ ದೇಶದಲ್ಲಿ ಮೂರುವರೆ ಸಾವಿರ ವರ್ಷಗಳ ಹಿಂದೆಯೇ ಭರತಮುನಿ ನಂದಿಕೇಶ್ವರ ಶಿಲಾಲಿ ಸಾರಂಗದೇವ ಮುಂತಾದ ಋಷಿಗಳು ನೃತ್ಯ ಸಂಗೀತಗಳ ಬಗ್ಗೆ ಮಹಾ ಗ್ರಂಥಗಳನ್ನೇ ರಚಿಸಿದ್ದಾರೆ ಎಂದರು.

ಮತ್ತೋರ್ವ ಮುಖ್ಯ ಅತಿಥಿಗಳಾಗಿ ದಾವಣಗೆರೆ ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ನಾಗರಾಜ ಬಡದಾಳ್ ಮಾತನಾಡುತ್ತಾ ಮಕ್ಕಳು ತಂದೆ ತಾಯಿಯನ್ನು ಅನುಕರಿಸುತ್ತಾರೆ, ಪೋಷಕರು ಸದಭಿರುಚಿಯ ಕಲೆಗಳಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡರೆ ಮಕ್ಕಳು ಅದನ್ನು ಮುಂದುವರಿಸುತ್ತಾರೆ, ಅನೇಕ ಪೋಷಕರಿಗೆ ತಮ್ಮ ಬಾಲ್ಯದಲ್ಲಿ ನೃತ್ಯ ಸಂಗೀತಗಳ ಕಲಿಕೆಗೆ ಅವಕಾಶವಿಲ್ಲದಿದ್ದರೂ ಈಗ ತಮ್ಮ ಮಕ್ಕಳನ್ನು ನೃತ್ಯ ಸಂಗೀತಗಳ ಕಲಿಕೆಗೆ ಕಳಿಸುತ್ತಿರುವುದು ಶ್ಲಾಘನೀಯ ಎಂದರು. ನಾಟ್ಯ ಭಾರತಿಯು ಬಡ ಮತ್ತು ಮಧ್ಯಮ ವರ್ಗದ ಮಕ್ಕಳಿಗೂ ಕೈಗೆಟಕುವ ಶುಲ್ಕದಲ್ಲಿ ದಶಕಗಳಿಂದ ಶಾಸ್ತ್ರೀಯ ನೃತ್ಯ ಸಂಗೀತ ಶಿಕ್ಷಣ ನೀಡುತ್ತಿರುವುದು ಸ್ವಾಗತಾರ್ಹ ಎಂದರು.

ಸಂಸ್ಥೆಯ ಅಧ್ಯಕ್ಷೆ ವಿದುಷಿ ರಜನಿ ರಘುನಾಥ ಕುಲಕರ್ಣಿ ಅಧ್ಯಕ್ಷೀಯ ನುಡಿಗಳನ್ನಾಡಿದರು.

Davangere University ಶ್ರೀನಿಧಿ ಆರ್ ಕುಲಕರ್ಣಿಯವರ ನಟುವಾಂಗ ವಿದುಷಿ ರಜನಿ ರಘುನಾಥ ಕುಲಕರ್ಣಿಯವರ ಹಾಡುಗಾರಿಕೆ ವಿದ್ವಾನ್ ಬಿ ಶ್ರೀನಾಥ ಭಟ್ ಹೊಸಪೇಟೆ ಇವರ ಮೃದಂಗ ಹಾಗೂ ವಿದ್ವಾನ್ ಜಿ ಸಿ ಕುಲಕರ್ಣಿ ತುಮಕೂರು ಇವರ ಹಾರ್ಮೋನಿಯಂ ಹಿಮ್ಮೇಳದಲ್ಲಿ ಸಂಸ್ಥೆಯ ಹಿರಿಕಿರಿಯ ವಿದ್ಯಾರ್ಥಿನಿಯರು ಸುಮಾರು 19 ವಿಶೇಷ ಶಾಸ್ತ್ರೀಯ ಹಾಗೂ ಲಘು ಶಾಸ್ತ್ರಿಯ ವೈವಿಧ್ಯಮಯ ನೃತ್ಯಗಳನ್ನು ಹಾಗೂ ಗಂಗಾವತರಣ ಎಂಬ ನೃತ್ಯ ರೂಪಕವನ್ನು ಪ್ರಸ್ತುತಪಡಿಸಿದರು. ವಿಶೇಷವಾಗಿ ಜರ್ಮನಿಯಿಂದ ಬಂದ ಶ್ರೀಕಾಂತ ಆರ್ ಕುಲಕರ್ಣಿಯವರ ನವಿಲು ನೃತ್ಯ ಹಾಗೂ ಉಡುಪಿಯ ವಿಶ್ವನಾಥರಾವ್ ಮತ್ತು ವರ್ಣಿಕಾ ಅವರ ‘ವರವ ಕೊಡು’ ಎಂಬ ಕನಕದಾಸರ ಕೀರ್ತನೆ ನೃತ್ಯ ಆಕರ್ಷಕವಾಗಿತ್ತು.

ನಾಟ್ಯ ಭಾರತಿಯ ನಿರ್ದೇಶಕ ರಾಜಶೇಖರ್, ವಿಜಯಕುಮಾರ್ ಕಲಮದಾನಿ, ಕುಬೇರ, ವಿಶ್ವನಾಥ್ ಕೆ ಎಸ್, ಸಾಗರ್ ತೌಡೂರು, ಬಿ ಶಿವಶಂಕರ್, ಶರತ್ ರಾಜ್ ಕಾರ್ಯಕ್ರಮಕ್ಕೆ ಸಹಕಾರ ನೀಡಿದರು. ಧಾರವಾಡದ ಸಂತೋಷ್ ಮಹಾಲೆ ದಂಪತಿಗಳು ಕಲಾತ್ಮಕ ಮೇಕಪ್ ವ್ಯವಸ್ಥೆ ನಿರ್ವಹಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Siddaramaiah ನೇತಾಜಿ ಪ್ರತಿಮೆಗೆ ಸಿದ್ಧರಾಮಯ್ಯ ಅವರಿಂದ ಪುಷ್ಪ ಮಾಲಾರ್ಪಣೆ

Siddaramaiah ನೇತಾಜಿ ಸುಭಾಷ್ ಚಂದ್ರ ಬೋಸ್‌ರವರ ಜನ್ಮದಿನದ ಅಂಗವಾಗಿ ವಿಧಾನಸೌಧ ಆವರಣದಲ್ಲಿರುವ...

B.Y Vijayendra ಸ್ವಾಮಿ ವಿವೇಕಾನಂದರಂತಹ ಸಂತರು ನಮ್ಮ ದೇಶದ ಹಿರಿಮೆ ಸಾರಿದ್ದಾರೆ- ಬಿ.ವೈ.ವಿಜಯೇಂದ್ರ

B.Y Vijayendra ಸಂತರು ಶಿಕ್ಷಣದೊಂದಿಗೆ ಸಂಸ್ಕಾರವನ್ನು ಸಮಾಜಕ್ಕೆ ನೀಡುತ್ತ ಬರುತ್ತಿರುವುದರಿಂದ ಇತರೆ...

M. B. Patil ಉದ್ಯಮ ದಿಗ್ಗಜರ ಸಂಗಡ ಸಚಿವ ಎಂ.ಬಿ.ಪಾಟೀಲ್ ಸಮಾಲೋಚನೆ

• ರಾಜ್ಯದಲ್ಲಿ ಹೂಡಿಕೆ ಹೆಚ್ಚಳ, ವಹಿವಾಟು ವಿಸ್ತರಣೆಗೆ ಐಟಿಸಿ, ರಿನ್ಯೂ ಪವರ್‌,...