Rotary Club Shivamogga ಕಾರ್ಮಿಕರು ಒತ್ತಡದ ಜೀವನಶೈಲಿಯಿಂದ ಆರೋಗ್ಯದ ಕಡೆ ಗಮನ ನೀಡುತ್ತಿಲ್ಲ. ಕಾರ್ಮಿಕರು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಅಧ್ಯಕ್ಷ ಕಿರಣ್ ಕುಮಾರ್ ಜಿ ಹೇಳಿದರು.
ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಮತ್ತು ನಾರಾಯಣ ಹೃದಯಾಲಯ ಆಸ್ಪತ್ರೆ ವತಿಯಿಂದ ಮಾಚೇನಹಳ್ಳಿ ಇಂಡಸ್ಟ್ರಿಯಲ್ ಏರಿಯಾದ ಎಸ್‌ಎನ್‌ಎಸ್ ಗ್ರೂಪ್ ಆಫ್ ಕಂಪನಿಯಲ್ಲಿ ಆಯೋಜಿಸಿದ್ದ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿದರು.
ಪ್ರತಿಯೊಬ್ಬರ ಆರೋಗ್ಯವು ನಿಮ್ಮ ನಿಜವಾದ ಸಂಪತ್ತು. ಆದ್ದರಿಂದ ನಿಯಮಿತ ಪರೀಕ್ಷೆಗಳೊಂದಿಗೆ ನೋಡಿಕೊಳ್ಳುವುದು ನಿಮಗೆ ನೀವು ಮಾಡಿಕೊಳ್ಳಬಹುದಾದ ಅತ್ಯುತ್ತಮ ಕೊಡುಗೆ ಆಗಿದೆ. ಕಾರ್ಯಕ್ರಮದಲ್ಲಿ ಭಾಗವಹಿಸಲು ಅಗತ್ಯವಾದ ಸಮಯ ಮತ್ತು ಸಂಪನ್ಮೂಲದ ವ್ಯವಸ್ಥೆ ಮಾಡಿದ ಸಂಸ್ಥೆಯ ಮಾಲೀಕರಾದ ಸಹನ, ನಂದನ್ ಹೊಳ್ಳ ಸ್ಪಂದನ್ ಎನ್ ಹೊಳ್ಳ ಚಂದನ್ ಎನ್ ಹೊಳ್ಳ ರವರಿಗೆ ವಿಶೇಷ ಧನ್ಯವಾದ ಎಂದು ತಿಳಿಸಿದರು.
Rotary Club Shivamogga ಎಸ್‌ಎನ್‌ಎಸ್ ಗ್ರೂಪ್‌ನ ಸಹನ ಮಾತನಾಡಿ, ರೋಟರಿ ಸಂಸ್ಥೆಯು ಸಮಾಜಮುಖಿ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದೆ. ಈ ದಿನ ಕಾರ್ಮಿಕರಿಗೆ ಆರೋಗ್ಯ ಶಿಬಿರ ಏರ್ಪಡಿಸುವುದು ತುಂಬಾ ಸಂತೋಷ ತಂದಿದೆ. ರೋಟರಿ ಸಂಸ್ಥೆ ಮತ್ತು ನಾರಾಯಣ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಗೆ ಧನ್ಯವಾದಗಳು ಎಂದರು.
ಕಾರ್ಯಕ್ರಮದಲ್ಲಿ 70ಕ್ಕೂ ಹೆಚ್ಚು ಕಾರ್ಮಿಕರು ಆರೋಗ್ಯ ಶಿಬಿರದ ಸದುಪಯೋಗ ಪಡೆದುಕೊಂಡರು. ನಾರಾಯಣ ಹೃದಯಾಲಯದ ವೈದ್ಯರು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು ಹಾಗೂ ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್‌ನ ಧರ್ಮೇಂದ್ರ ಸಿಂಗ್, ಬಸವರಾಜ್, ಜಯಶೀಲ ಶೆಟ್ಟಿ, ಸಂತೋಷ್, ನಟರಾಜ್, ದೀಪಾ ಶೆಟ್ಟಿ, ಗೀತಾ ಜಗದೀಶ್ ಉಪಸ್ಥಿತರಿದ್ದರು
Rotary Club Shivamogga ಪ್ರತಿಯೊಬ್ಬರಿಗೆ ಆರೋಗ್ಯ ನಿಜವಾದ ಸಂಪತ್ತು-ಕಿರಣ್ ಕುಮಾರ್
Date: