Cosmo Club ಕಾಸ್ಮೋ ಕ್ಲಬ್ಬಿನ ಚುನಾವಣೆಯಲ್ಲಿ ನಾಗರಾಜ್ ಪಾಟ್ಕರ್ ಗೆ ಗೆಲುವು
ನಗರದ ಪ್ರತಿಷ್ಠಿತ ಕ್ಲಬ್ ಗಳಲ್ಲಿ ಒಂದಾದ ಕಾಸ್ಮೋ ಕ್ಲಬ್ ಗೆ ನಿನ್ನೆ ದಿನ ನಡೆದ ಆಡಳಿತ ಮಂಡಳಿಯ ಚುನಾವಣೆಯಲ್ಲಿ ರೋವರ್ಸ್ ಕ್ಲಬ್ಬಿನ ಸಹಕಾರ್ಯದರ್ಶಿ ಹಾಗೂ ಹಲವಾರು ಸಂಘ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ
ಮತ್ತು ಶಟಲ್ ಬ್ಯಾಡ್ಮಿಂಟನ್ ಆಟಗಾರರಾಗಿರುವ
ನಾಗರಾಜ್ ಪಾಟ್ಕರ್ ರವರು ಪ್ರಥಮ ಬಾರಿಗೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ.
ಈ ಸಂದರ್ಭದಲ್ಲಿ ರೋವರ್ಸ್ ಕ್ಲಬ್ಬಿನ ಶಟಲ್ ಬ್ಯಾಟ್ಮೆಂಟನ್ ಆಟಗಾರರು ಆತ್ಮೀಯವಾಗಿ ಸನ್ಮಾನಿಸಿ ಅಭಿನಂದಿಸಿದರು.
Cosmo Club ಕಾರ್ಯಕ್ರಮದಲ್ಲಿ ಶಿವಮೊಗ್ಗ ಜಿಲ್ಲೆ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಹಾಗೂ ರೋವರ್ಸ್. ಕ್ಲಬ್ ನ ನಿರ್ದೇಶಕ. ಜಿ ವಿಜಯಕುಮಾರ್. ರೋವರ್ ಕ್ಲಬ್ಬಿನ ನಿರ್ದೇಶಕರಗಳಾದ ಮಹೇಶ್ ಅಂಗಡಿ ವಿನಾಯಕ ಎಂ ಬಿ.
ತೆರಿಗೆ ಸಲಹೆಗಾರರಾದ ಸುರೇಶ್. ಈಶ್ವರ್ ರಾಷ್ಟ್ರೀಯ ವಾಣಿಜ್ಯ ಮಾನವ ಹಕ್ಕುಗಳ ಆಯೋಗ ಸಮಿತಿಯ ರಾಜ್ಯ ಉಪಾಧ್ಯಕ್ಷ ಪ್ರದೀಪ್ ಮಿತಲ್. ಎಸ್ ಎ ಸತ್ಯ. ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
