Monday, January 27, 2025
Monday, January 27, 2025

Bahumukhi Shivamogga ಇಂದು‌ ಖ್ಯಾತ ಮನಶ್ಶಾಸ್ತ್ರಜ್ಞ ಪ್ರೊ.ಎಂ.ಶ್ರೀಧರಮೂರ್ತಿ.”ಬಹುಮುಖಿ” ಕಾರ್ಯಕ್ರಮದಲ್ಲಿ ಭಾಗಿ

Date:

Bahumukhi Shivamogga ಶಿವಮೊಗ್ಗ ನಗರದ ಬಹುಮುಖಿ ವತಿಯಿಂದ 44ನೇ ಕಾರ್ಯಕ್ರಮವಾಗಿ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಎಂ. ಶ್ರೀಧರ ಮೂರ್ತಿಯವರಿಂದ ಏಕಾಗ್ರತೆ ಕೊರತೆ ಹಾಗೂ ಸಾಮಾಜಿಕ ಸವಾಲುಗಳು ಕುರಿತು ವಿಶೇಷ ಉಪನ್ಯಾಸವನ್ನು ಏರ್ಪಡಿಸಲಾಗಿದೆ.

ಪ್ರೊ. ಎಂ. ಶ್ರೀಧರಮೂರ್ತಿ ಮನಶಾಸ್ತ್ರಜ್ಞರು ಕೂಡಾ. ಸುಮಾರು ನಾಲ್ಕು ದಶಕಗಳ ಕಾಲ ಮನಶಾಸ್ತ್ರ ವನ್ನು ಬೋಧಿಸಿ, ಈಗ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ. ಆಪ್ತ ಸಮಾಲೋಚನೆಯನ್ನು ಒಂದು ಸಾಮಾಜಿಕ ಸೇವೆಯಂತೆ ಮಾಡುತ್ತಾ ಅನೇಕರ ಬದುಕಿಗೆ ಮಾರ್ಗದರ್ಶಿಯಾಗಿದ್ದಾರೆ. ವೈಚಾರಿಕ ಮನೋಭಾವ, ಚಿಂತನೆ, ಸರಳ ಬದುಕಿಗೆ ಶ್ರೀಧರಮೂರ್ತಿಯವರು ಮೂರ್ತರೂಪ.

ಶ್ರೀಧರಮೂರ್ತಿಯವರು ಅಂತರರಾಷ್ಟ್ರೀಯ ಮನ್ನಣೆ ಪಡೆದ ಛಾಯಾಗ್ರಾಹಕರು ಎಂಬುದು ಮತ್ತೊಂದು ವಿಶೇಷ. ಲ್ಯಾಂಡ್‌ಸ್ಕೆಪ್ ಮತ್ತು ಪೋರ್ಟೆ್ರಂಚರ್ ಫೋಟೋಗ್ರಾಫಿ ವಿಭಾಗದಲ್ಲಿ ಪ್ರಖ್ಯಾತರು. ಶಾಸ್ತ್ರೀಯ ಸಂಗೀತ, ಸಿನೆಮಾ, ಕ್ಯಾಲಿಗ್ರಫಿ ಕೂಡ ಇವರ ಆಸಕ್ತಿಯ ಕ್ಷೇತ್ರಗಳು.

Bahumukhi Shivamogga ಡಿ. 29ರ ಭಾನುವಾರ ಸಂಜೆ 5 :30ಕ್ಕೆ ರಾಷ್ಟ್ರೀಯ ವಾಣಿಜ್ಯ ಕಾಲೇಜಿನ ಪ್ರೆಂಡ್ಸ್ ಸೆಂಟರ್ ಸಭಾಂಗಣದಲ್ಲಿ ಅಪರೂಪದ ಈ ಉಪನ್ಯಾಸ ಕಾರ್ಯಕ್ರಮ ನಡೆಯಲಿದ್ದು, ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕೋರಲಾಗಿದೆ.

ಮಾಹಿತಿಗಾಗಿ 9449284495, 9845014229, 95380 20367ರಲ್ಲಿ ಸಂಪರ್ಕಿಸಬಹುದು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa ಗೋವಿಂದಾಪುರ ಆಶ್ರಯ ವಸತಿ ಸಮುಚ್ಚಯಕ್ಕೆ ಸಚಿವ ಮಧು ಬಂಗಾರಪ್ಪ‌ ಪರಿಶೀಲನಾ ಭೇಟಿ

Madhu Bangarappa ಆಶ್ರಯ ಯೋಜನೆಯಡಿ ಗೋವಿಂದಾಪುರದಲ್ಲಿ ನಿರ್ಮಿಸಲಾಗಿರುವ ವಸತಿ ಸಮುಚ್ಚಯಗಳಿಗೆ...

Republic Day ಸಂವಿಧಾನ ಪೀಠಿಕೆ‌ ವಾಚಿಸಿ ಉದ್ಘಾಟಿಸಿದ‌ ಸಚಿವ‌ ಮಧು‌ ಬಂಗಾರಪ್ಪ

Republic Day ಬಾಬಾ ಸಾಹೇಬ್ ಅಂಬೇಡ್ಕರರ ಆಶಯದಂತೆ ಸ್ವಾತಂತ್ರ್ಯ ...

Yuva Nidhi Scheme ಯುವನಿಧಿಗೆ ಕಡ್ಡಾಯ‌ ನೋಂದಣಿ‌ ಮಾಡಲು ಕ್ರಮ ಕೈಗೊಳ್ಳಿ- ಸಿ.ಎಸ್.ಚಂದ್ರಭೂಪಾಲ್

Yuva Nidhi Scheme ಶಿವಮೊಗ್ಗ ಜಿಲ್ಲೆಯಲ್ಲಿ ಯುವನಿಧಿ ಯೋಜನೆ ಅಡಿಯಲ್ಲಿ...

Padma Bhushan Award ಹಿರಿಯ ನಟ ಅನಂತನಾಗ್ ಸೇರಿದಂತೆ ರಾಜ್ಯದ ಈರ್ವರಿಗೆ ಪದ್ಮಭೂಷಣ ಪ್ರಶಸ್ತಿ

Padma Bhushan Award ಕೇಂದ್ರ ಸರ್ಕಾರವು 2025ನೇ ಸಾಲಿನ ದೇಶದ ಅತ್ಯುನ್ನತ...