Thursday, January 23, 2025
Thursday, January 23, 2025

Karnataka State Teachers Welfare Fund ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ಸಹಪಠ್ಯ ಚಟುವಟಿಕೆಗಳು ಶಿಕ್ಷಕರಿಗೆ ಪೂರಕವಾಗುವೆ- ಶಾಸಕ ಚೆನ್ನಿ

Date:

Karnataka State Teachers Welfare Fund ಪ್ರಾಥಮಿಕ ಮತ್ತು ಪ್ರೌಢಶಾಲಾ ಹಂತದಲ್ಲಿ ಮಕ್ಕಳಿಗೆ ಪರಿಣಾಮಕಾರಿಯಾಗಿ ಬೋದಿಸಲು ಶಿಕ್ಷಕರಿಗೆ ಸಹಪಠ್ಯ ಚಟುವಟಿಕೆಗಳು ಸಹಕಾರಿಯಾಗಿವೆ ಎಂದು ಶಿವಮೊಗ್ಗ ನಗರ ಕ್ಷೇತ್ರದ ಶಾಸಕ ಎಸ್.ಎನ್.ಚನ್ನಬಸಪ್ಪ ಅವರು ಹೇಳಿದರು.
ಅವರು ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ, ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ನಿಧಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ ಶಿವಮೊಗ್ಗ ಹಾಗೂ ಸೀಮಾ ಆಂಗ್ಲಶಾಲೆ ಮಾಚೇನಹಳ್ಳಿ ಇವರುಗಳ ಸಂಯುಕ್ತಾಶ್ರಯದಲ್ಲಿ ಮಾಚೇನಹಳ್ಳಿಯ ಸೀಮಾ ಆಂಗ್ಲಶಾಲೆಯಲ್ಲಿ ಏರ್ಪಡಿಸಲಾಗಿದ್ದ ಪ್ರಸಕ್ತ ಶೈಕ್ಷಣಿಕ ಸಾಲಿನ ರಾಜ್ಯ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ಸಹಪಠ್ಯ ಚಟುವಟಿಕೆಗಳ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಭವಿಷ್ಯದ ಸಮಾಜ ನಿರ್ಮಾತೃಗಳನ್ನು ರೂಪಿಸುವ ಶಿಕ್ಷಕರ ಕಾರ್ಯ ಸ್ಮರಣೀಯವಾದುದು ಎಂದ ಅವರು, ಶಿಕ್ಷಕರು ಪಠ್ಯಕ್ಕೆ ಸಹಕಾರಿಯಾಗುವ ಸಹಪಠ್ಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವುದರಿಂದ ಶಿಕ್ಷಕರಲ್ಲಿ ಪರಿಣಾಮಕಾರಿ ಬೋದನಾ ವಿಧಾನಗಳನ್ನು ಅರಿಯಲಿದ್ದಾರೆ. ಇದರಿಂದಾಗಿ ತರಗತಿಗಳಲ್ಲಿ ಹಲವು ಪ್ರಕಾರಗಳಲ್ಲಿ ಮಕ್ಕಳನ್ನು ಕಲಿಕೆಗೆ ತೊಡಗಿಸಲು ಪ್ರೇರೇಪಿಸಬಹುದಾಗಿದೆ. ಹಿಂದುಳಿದ ಮಕ್ಕಳ ಕಲಿಕೆಗೆ ವಿಶೇಷ ಪ್ರಯತ್ನ ಇದಾಗಿರಲಿದೆ ಎಂದರು.
Karnataka State Teachers Welfare Fund ಮಕ್ಕಳ ಕಲಿಕೆಯಲ್ಲಿ ಪ್ರಮುಖ ಪಾತ್ರ ವಹಿಸುವ ಶಿಕ್ಷಕರು ಕೂಡ ಸದಾ ಕಲಿಕಾರ್ಥಿಯಾಗಿದ್ದು, ನವನವೀನವಾದುದನ್ನು ಅರಿಯುವ, ಅರಿತಿದ್ದನ್ನು ಮಕ್ಕಳಿಗೆ ತಿಳಿಸಿ, ಕಲಿಕೆಯನ್ನು ಮುಂದುವರೆಸುವ ಕ್ರಿಯಾಶೀಲತೆ ಅತ್ಯಗತ್ಯವಾದುದಾಗಿದೆ. ತರಗತಿಗೆ ಬೋದನೆಗೆ ತೆರಳುವ ಶಿಕ್ಷಕರು ಬೋದಿಸುವ ಪಠ್ಯವಿಷಯವನ್ನು ಸರಳವಾಗಿ ಮಕ್ಕಳಿಗೆ ಕಲಿಸುವ ಬಗ್ಗೆ, ಅರ್ಥೈಸುವ ಹಲವು ವಿಧಾನಗಳ ಬಗ್ಗೆ ಅರಿತಿರಬೇಕು. ಈ ಹಂತದಲ್ಲಿ ಸರ್ಕಾರಗಳು, ಇಲಾಖೆಗಳ ಮುಖ್ಯ ಅಧಿಕಾರಿಗಳು ಅಗತ್ಯ ಸಹಕಾರ, ಆರ್ಥಿಕ ನೆರವು ಒದಗಿಸಬೇಕೆಂದವರು ನುಡಿದರು.
ಮಕ್ಕಳಲ್ಲಿನ ಸುಪ್ತಪ್ರತಿಭೆಯನ್ನು ಗುರುತಿಸಿ, ಅವರನ್ನು ಉತ್ತೇಜಿಸಿ, ಪ್ರತಿಭೆಯ ಅನಾವರಣಕ್ಕೆ ಸಕಾಲದಲ್ಲಿ ಸೂಕ್ತ ವೇದಿಕೆಗಳನ್ನು ಕಲ್ಪಿಸುವುದು ಸಹ ಶಿಕ್ಷಕರ ಕರ್ತವ್ಯಗಳಲ್ಲೊಂದು. ಅದಕ್ಕಾಗಿ ಮೊದಲು ಶಿಕ್ಷಕರಲ್ಲಿ ನಂತರ ವಿದ್ಯಾರ್ಥಿಗಳಲ್ಲಿ ಕಲಿಕಾ ಉತ್ಸಾಹ ಬತ್ತದಂತೆ ನೋಡಿಕೊಳ್ಳಬೇಕು ಎಂದರು.
ಈ ಕಲಿಕಾ ಅವಧಿಯಲ್ಲಿ ಮಕ್ಕಳಲ್ಲಿರುವಂತೆ ಶಿಕ್ಷಕರಲ್ಲೂ ಸ್ಪರ್ಧಾ ಮನೋಭಾವ ಇರಬೇಕು. ಸ್ಪರ್ಧೆಯಲ್ಲಿ ಭಾಗವಹಿಸಿದವರೆಲ್ಲರೂ ವಿಜೇತರಾಗುವುದು ಸಾಧ್ಯವಿಲ್ಲ. ಆದರೂ ಸ್ಪರ್ಧೆಯಲ್ಲಿ ಭಾಗವಹಿಸುವಿಕೆ ಬಹು ಪ್ರಮುಖವಾದುದ್ದಾಗಿದೆ. ಇದು ಶಿಕ್ಷಕರ ಮತ್ತು ಮಕ್ಕಳ ಸೃಜನಶೀಲತೆಗೆ ಸಹಕಾರಿಯಾಗಲಿದೆ. ಈ ಕಲಿಕೆ ನಿರಂತರವಾಗಿದ್ದಾಗ ಸಹಜವಾಗಿ ಕಲಿಕಾರ್ಥಿಗಳೆಲ್ಲರಲ್ಲೂ ಪಕ್ವತೆ ಕಾಣಬಹುದಾಗಿದೆ ಎಂದರು.
ರಾಜ್ಯ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಸಹಪಠ್ಯ ಚಟುವಟಿಕೆಗಳ ಸ್ಪರ್ಧೆಗೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ನಡೆಸಲಾದ ಸ್ಪರ್ಧೆಗಳಲ್ಲಿ ವಿಜೇತರಾದ ೨೦೦ಕ್ಕೂ ಹೆಚ್ಚಿನ ಕ್ರಿಯಾಶೀಲ ಶಿಕ್ಷಕರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಉಪನಿರ್ದೇಶಕಿ ಶ್ರೀಮತಿ ಬಿಂಬಾ ಕೆ.ಆರ್., ಎಸ್.ಆರ್.ಮಂಜುನಾಥ, ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್, ನಾಗೇಂದ್ರಪ್ಪ, ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ರಾಘವೇಂದ್ರ, ಪ್ರಕಾಶ್, ಧರ್ಮಪ್ಪ, ಸೀಮಾ ಆಂಗ್ಲಶಾಲೆಯ ವ್ಯವಸ್ಥಾಪಕ ನಿರ್ದೇಶಕ ಜಗನ್ನಾಥರಾವ್ ಬೊಂಗಾಳೆ ಸೇರಿದಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಶಿಕ್ಷಕರು ಹಾಗೂ ಶಿಕ್ಷಕರ ಸಂಘಗಳ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Mallikarjun Kharge ಸಂವಿಧಾನ & ಪ್ರಜಾಪ್ರಭುತ್ವ ಇಲ್ಲದಿದ್ದರೆ ದೇಶದಲ್ಲಿ ಅರಾಜಕತೆ ಉಂಟಾಗುತ್ತಿತ್ತು- ಮಲ್ಲಿಕಾರ್ಜುನ ಖರ್ಗೆ

Mallikarjun Kharge ಬೆಳಗಾವಿ, ಜ.21 ಮಹಾತ್ಮಾ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ 1924ರಲ್ಲಿ ಬೆಳಗಾವಿಯಲ್ಲಿ...

MESCOM ಜನವರಿ 24. ಶಿವಮೊಗ್ಗ ನಗರ ಉಪವಿಭಾಗೀಯ ಮೆಸ್ಕಾಂ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಶಿವಮೊಗ್ಗ ಮೆಸ್ಕಾಂ ನಗರ ಉಪವಿಭಾಗ – 3 ಕಛೇರಿಯಲ್ಲಿ ಜ....