Rotary Club Shvaimogga ವಾಹನ ಸವಾರರು ಕಡ್ಡಾಯವಾಗಿ ಸಂಚಾರ ನಿಯಮ ಪಾಲನೆ ಮಾಡಬೇಕು ಎಂದು ಪಶ್ಚಿಮ ಸಂಚಾರಿ ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ತಿರುಮಲೇಶ್.ಜಿ ಹೇಳಿದರು.
ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ವತಿಯಿಂದ ಆಯೋಜಿಸಿದ್ದ ರಸ್ತೆ ಸಂಚಾರ ಸುರಕ್ಷತಾ ಕಾರ್ಯಕ್ರಮದಲ್ಲಿ ಮಾತನಾಡಿ, ಸುರಕ್ಷಿತವಾಗಿ ವಾಹನ ಚಲಾಯಿಸಬೇಕು. ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಮತ್ತು ಕಾರ್ ಚಾಲನೆ ಮಾಡುವವರು ಸೀಟ್ ಬೆಲ್ಟ್ ಧರಿಸಬೇಕು ಎಂದು ಮನವಿ ಮಾಡಿದರು.
ರಸ್ತೆ ಸಂಚಾರ ದಿನದಿಂದ ದಿನಕ್ಕೆ ಆತಂಕಕಾರಿಯಾಗುತ್ತಿದೆ. ವೇಗವಾಗಿ ವಾಹನ ಚಾಲನೆ ಮಾಡದೆ ಸುರಕ್ಷಿತವಾಗಿ ವಾಹನ ಚಲಾಯಿಸಬೇಕು. ಒಂದು ತಪ್ಪು ನಡೆ ಸಾವಿಗೆ ಕಾರಣವಾಗಬಹುದು. ಸುರಕ್ಷಿತ ಚಾಲನೆಯಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳುವುದು ಮಾತ್ರವಲ್ಲದೇ ರಸ್ತೆಯಲ್ಲಿರುವ ಇತರರನ್ನು ರಕ್ಷಿಸಲು ಸಾಧ್ಯ. ವಾಹನ ಚಾಲನೆ ಮಾಡುವಾಗ ಮೊಬೈಲ್‌ಅನ್ನು ಯಾವುದೇ ಕಾರಣಕ್ಕೂ ಬಳಸಬಾರದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಅಧ್ಯಕ್ಷ ಕಿರಣ್ ಕುಮಾರ್ ಜಿ. ಮಾತನಾಡಿ, ಪ್ರತಿಯೊಬ್ಬರೂ ಸಂಚಾರ ನಿಯಮಗಳನ್ನು ಪಾಲಿಸುವುದರಿಂದ ಅಪಘಾತ ಪ್ರಮಾಣ ತಡೆಗಟ್ಟಬಹುದಾಗಿದೆ. ಸುರಕ್ಷಿತ ವಾಹನ ಚಾಲನೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು ಎಂದು ಹೇಳಿದರು.
Rotary Club Shvaimogga ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್‌ನಿಂದ ಕುಟುಂಬ ಮಿಲನ ಕಾರ್ಯಕ್ರಮ ಮತ್ತು ಸ್ಪೋರ್ಟ್ಸ್ ನಲ್ಲಿ ವಲಯ ಚಾಂಪಿಯನ್ ವಿಜಯೋತ್ಸವ ಮತ್ತು 33 ವರ್ಷದ ಕ್ಲಬ್ ಡೇ ಆಚರಿಸಲಾಯಿತು. ಕ್ಲಬ್ ಸಂಸ್ಥಾಪಕ ಸದಸ್ಯರಾದ ಪಿಡಿಜಿ ಪ್ರಕಾಶ್ ಚೂಡಾಮಣಿ ಪವಾರ್, ಅರುಣ್ ಕುಮಾರ್, ರಮನಾಥ್ ಗಿರಿಮಾಜಿ ಅವರು ಕ್ಲಬ್ ನಡೆದು ಬಂದ ಹಾದಿ ಬಗ್ಗೆ ಸಭೆಗೆ ವಿವರಿಸಿದರು.
ವಲಯ ಮತ್ತು ಜಿಲ್ಲಾ ಸ್ಪೋರ್ಟ್ಸ್ ನಲ್ಲಿ ಗೆದ್ದವರಿಗೆ ಸನ್ಮಾನ ಮಾಡಲಾಯಿತು. ವಿಶೇಷವಾಗಿ ವಾಲಿಬಾಲ್ ರಾಷ್ಟ್ರೀಯ ಆಟಗಾರ ಭದ್ರಾವತಿಯ ಸೈಯದ್ ಸಾದೀಕ್ ಅವರನ್ನು ಸನ್ಮಾನಿಸಲಾಯಿತು. ಮುಂದಿನ ವರ್ಷದ ರೋಟರಿ ಕ್ಲಬ್ ಸೆಂಟ್ರಲ್ ನಿಯೋಜಿತ ಅಧ್ಯಕ್ಷರಾಗಿ ಬಸವರಾಜ್.ಬಿ ಮತ್ತು ನಿಯೋಜಿತ ಕಾರ್ಯದರ್ಶಿಯಾಗಿ ಜಯಶೀಲ ಶೆಟ್ಟಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು ಹಾಗೂ ಇಬ್ಬರನ್ನು ಗೌರವಿಸಲಾಯಿತು.
ಕಾರ್ಯದರ್ಶಿ ಈಶ್ವರ್, ಕಿರಣ್, ಕುಮಾರ್, ಮೋಹನ್, ಭರತ್, ಸತೀಶ್, ಮಿಥುನ್ ಜಗದಾಳೆ, ಆನಂದ್, ರವಿ ಕೊಟೋಜಿ, ಧರ್ಮೇಂದ್ರ ಸಿಂಗ್, ರಾಜೇಶ್ ಹಾಗೂ ಆನ್ಸ್ ಕ್ಲಬ್ಬಿನ ಅಧ್ಯಕ್ಷೆ ಗೀತಾ ಜಗದೀಶ್, ಶುಭಾ ಚಿದಾನಂದ್, ಕ್ಲಬ್ಬಿನ ಎಲ್ಲ ಸದಸ್ಯರು ಕುಟುಂಬ ಸಮೇತರಾಗಿ ಪಾಲ್ಗೊಂಡಿದ್ದರು.