Saturday, December 6, 2025
Saturday, December 6, 2025

Guarantee Scheme ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕೌಶಲ್ಯ & ಉದ್ಯಮಶೀಲತೆ ತರಬೇತಿ ಯುವನಿಧಿಯ ಧ್ಯೇಯ- ಚಂದ್ರಭೂಪಾಲ್

Date:

Guarantee Scheme ಯುವ ನಿಧಿ ಯೋಜನೆ ಚಾಲನೆಗೊಂಡು ಒಂದು ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದಿಂದ ವಿಶಿಷ್ಟ ಕಾರ್ಯಕ್ರಮ ರೂಪಿಸಲಾಗುವುದು ಎಂದು ಗ್ಯಾರಂಟಿ ಯೋಜನೆಯ ಅನುಷ್ಟಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಸಿ.ಎಸ್.ಚಂದ್ರಭೂಪಾಲ ತಿಳಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ಗ್ಯಾರಂಟಿ ಯೋಜನೆಗಳ ಜಿಲ್ಲಾ ಮಟ್ಟದ ಅನುಷ್ಟಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕೌಶಲ್ಯಾಭಿವೃದ್ದಿ ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಮತ್ತು ಕೌಶಲ್ಯ ಅಭಿವೃದ್ದಿ ನಿಗಮದ ಜೊತೆಗೆ ವಿವಿಧ ತರಬೇತಿ ಪಡೆಯಲು ಯುವನಿಧಿ ಯೋಜನೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಯುವನಿಧಿ ಯೋಜನೆಯಲ್ಲಿ ಜಿಲ್ಲೆಯಲ್ಲಿ ನೋಂದಣಿಯಾಗಿರುವ ಫಲಾನುಭವಿಗಳಿಗೆ ವಿವಿಧ ತಾಂತ್ರಿಕ ತರಬೇತಿ ಉದ್ಯೋಗ ಹೊಂದಲು ಎಲ್ಲಾ ಫಲಾನುಭವಿಗಳಿಗೆ ಇಮೇಲ್ ಮುಖಾಂತರ ಮಾಹಿತಿ ನೀಡಲಾಗಿದೆ. ಯುವ ನಿಧಿ ಫಲಾನುಭವಿಗಳು ಇದರ ಸದುಪಯೋಗ ಪಡೆಯಬೇಕು. ಹಾಗೂ ಮುಂದಿನ ದಿನಗಳಲ್ಲಿ ಉದ್ಯೋಗ ಮೇಳವನ್ನೂ ಆಯೋಜಿಸಲು ಚಿಂತಿಸಲಾಗುತ್ತಿದೆ ಎಂದರು.
ಸಭೆಯಲ್ಲಿ ಕೆಎಸ್‌ಆರ್‌ಟಿಸಿ ಅಧಿಕಾರಿ ದಿನೇಶ್ ಮಾತನಾಡಿ, ಶಕ್ತಿ ಯೋಜನೆಯಡಿ ಇದುವರೆಗೆ 35064365 ಮಹಿಳೆಯರು ಪ್ರಯಾಣ ಮಾಡಿದ್ದು 122.70 ಕೋಟಿ ಆದಾಯ ನಿಗಮಕ್ಕೆ ಬಂದಿದೆ. ಶೇ.4 ರಷ್ಟು ಪ್ರವಾಸೋದ್ಯಮ, ಶೇ.10 ಧಾರ್ಮಿಕ ಸ್ಥಳ, ಶೇ.20 ರಷ್ಟು ಉದ್ಯೋಗಸ್ಥ ಮಹಿಳೆಯರು, ಶೇ27 ಶಾಲಾ ಕಾಲೇಜು ವಿದ್ಯಾರ್ಥಿಗಳು ಒಟ್ಟು ಶೇ.61 ರಷ್ಟು ಮಹಿಳೆಯರು ಸೌಲಭ್ಯ ಪಡೆದಿದ್ದಾರೆ ಎಂದು ಮಾಹಿತಿ ನೀಡಿದರು.
ತೀರ್ಥಹಳ್ಳಿ ತಾಲ್ಲೂಕು ಗ್ಯಾರಂಟಿ ಅನುಷ್ಟಾನ ಸಮಿತಿ ಅಧ್ಯಕ್ಷರು, ತೀರ್ಥಹಳ್ಳಿ ಯಿಂದ ಬಸವಾನಿ ಮಾರ್ಗದಲ್ಲಿ ಎರಡು ಬಸ್ ಬಿಡುವಂತೆ ಕೋರಿದರು. ಹೊಸನಗರ ತಾಲ್ಲೂಕು ಅಧ್ಯಕ್ಷರು ಹೊಸನಗರದಿಂದ ಸಾಗರ ಮಾರ್ಗವಾಗಿ ಓಡಾಡುವ ಬಸ್ ನ್ನು ಆಗಾಗ ನಿಲ್ಲಿಸಲಾಗುತ್ತದೆ ಇದರಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತದೆ ಹೀಗಾಗದಂತೆ ನೋಡಿಕೊಳ್ಳಬೇಕೆಂದರು. ಜಿಲ್ಲಾ ಉಪಾಧ್ಯಕ್ಷರು ಶಿವಮೊಗ್ಗ ನಗರದೊಳಗೆ ಕೆಎಸ್‌ಆರ್‌ಟಿಸಿ ಸಿಟ್ ಬಸ್ ಓಡಾಟವಿಲ್ಲ. ಬಹುತೇಕ ಬಸ್‌ಗಳು ಶಿವಮೊಗ್ಗ-ಭದ್ರಾವತಿ ಮಾರ್ಗವಾಗಿದ್ದು, ನಗರದ ನಾಲ್ಕು ದಿಕ್ಕುಗಳಿಂದ ಬಸ್ ಓಡಾಟ ಆಗುವಂತೆ ಯೋಜಿಸಬೇಕೆಂದರು.
ಮಹಿಳಾ ಸದಸ್ಯರೋರ್ವರು ಅನೇಕ ವೇಳೆ ಮಹಿಳೆಯರು ಬಸ್ ನಿಲ್ದಾಣದಲ್ಲಿದ್ದರೆ ಬಸ್ ಖಾಲಿ ಇದ್ದರೂ ನಿಲ್ಲಿಸದೇ ಹೋಗುತ್ತಾರೆ ಎಂದಾಗ ಜಿಲ್ಲಾ ಅಧ್ಯಕ್ಷರು, ತಾವೂ ಇದನ್ನು ಗಮನಿಸಿದ್ದು ಹೀಗೆ ಮಾಡದಂತೆ ಸಿಬ್ಬಂದಿಗಳಿಗೆ ಸೂಚನೆ ನೀಡಬೇಕೆಂದು ಅಧಿಕಾರಿಗಳಿಗೆ ತಿಳಿಸಿದರು.
Guarantee Scheme ಉಡುಪಿಯಿಂದ ಬರುವ ಕಡೆಯ ಬಸ್‌ನಲ್ಲಿ ಮಹಿಳೆಯರು ನಿಂತು ಪ್ರಯಾಣಿಸಲು ಸಹ ಸಿದ್ದರಿರುತ್ತಾರೆ. ಆದರೆ ಸೀಟ್ ಇಲ್ಲವೆಂದು ನಿಲ್ಲಿಸುವುದಿಲ್ಲ. ಬಸ್‌ನ್ನು ನಿಲ್ಲಿಸುವಂತೆ ಸದಸ್ಯರು ಕೋರಿದರು.
ಆಹಾರ ಇಲಾಖೆ ಉಪ ನಿರ್ದೇಶಕ ಅವಿನ್ ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 488125 ಪಡಿತರ ಚೀಟಿಗಳಿದ್ದು 382802 ಕಾರ್ಡ್ಗು ಅನ್ನಭಾಗ್ಯ ಯೋಜನೆಯಡಿ ನೋಂದಣಿಯಾಗಿವೆ. ತಾಂತ್ರಿಕ ಕಾರಣದಿಂದ 8781 ಜನರಿಗೆ ಡಿಬಿಟಿ ಬಾಕಿ ಇದ್ದು ಇದುವೆಗೆ ರೂ.142.2 ಕೋಟಿ ಫಲಾನುಭವಿಗಳಿಗೆ ಸಂದಾಯವಾಗಿದೆ.
ಅಂತ್ಯೋದಯ ಮತ್ತು ಬಿಪಿಎಲ್ ವರ್ಗಕ್ಕೆ ಸೇರಲು 22339 ಅರ್ಜಿಗಳು ಸ್ವೀಕೃತವಾಗಿದ್ದು 20280 ಕಾರ್ಡ್ ವಿತರಿಸಲಾಗಿದೆ. ಹಾಗೂ 6 ತಿಂಗಳಿನಿAದ ಪಡಿತರ ಪಡೆಯದೇ ಹಾಗೂ ಆದಾಯ ತೆರಿಗೆ ಮೀರಿದ್ದ ಕ್ರಮವಾಗಿ 8046 ಮತ್ತು 2297 ಕಾರ್ಡುಗಳು ಎಪಿಎಲ್ ಆಗಿ ಪರಿವರ್ತನೆಯಾಗಿದ್ದು, ಸರ್ಕಾರದ ಆದೇಶದನ್ವಯ ಇವನ್ನು ಪುನಃ ಬಿಪಿಎಲ್ ಆಗಿ ಪರಿವರ್ತಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸದಸ್ಯರು ಮಾತನಾಡಿ, ಪಡಿತರ ಪಡೆಯುವ ಸಂಬAಧ, ಬಿಪಿಎಲ್ ಕಾರ್ಡುಗಳು ಎಪಿಎಲ್ ಆದ ಬಗ್ಗೆ ಮತ್ತು ಇನ್ನಿತರೆ ವಿಷಯ ಕುರಿತು ಆಹಾರ ನಿರೀಕ್ಷರಿಗೆ ನೀಡಲಾದ ದೂರುಗಳ ಕಡೆ ಗಮನ ಹರಿಸಿ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು. ಹಾಗೂ ಪಡಿತರ ಚೀಟಿ ತಿದ್ದುಪಡಿಗೆ ಸರ್ಕಾರ ಅವಕಾಶ ನೀಡಿರುವ ಬಗ್ಗೆ ಗ್ರಾ.ಪಂ ಗಳಿಗೆ, ನ್ಯಾಯಬೆಲೆ ಅಂಗಡಿಗಳ ಮುಂದೆ ಮತ್ತು ಪ್ರಾಧಿಕಾರಕ್ಕೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.
ತಾಲ್ಲೂಕು ಅಧ್ಯಕ್ಷರು, ಸದಸ್ಯರು ಮಾತನಾಡಿ, ಎಪಿಎಲ್ ಕಾರ್ಡ್ಗಳಾಗಿ ಪರಿವರ್ತನೆಯಾದ ಕಾರ್ಡುಗಳಲ್ಲಿ ಆದಾಯ ತೆರಿಗೆ /ಜಿಎಸ್ ಟಿ ಎಂದು ನಮೂದಾಗಿರುತ್ತದೆ. ಆದಾಯ ತೆರಿಗೆ ವರದಿ ಮಾಡಿದ ಕಾರಣಕ್ಕೋ, ಜಿಎಸ್‌ಟಿ ತುಂಬಿದ ಕಾರಣಕ್ಕೋ ಎಂದು ನಿಖರ ಮಾಹಿತಿ ಇಲ್ಲ. ಈ ಕುರಿತು ಜಿಎಸ್‌ಟಿ ಮತ್ತು ಆದಾಯ ತೆರಿಗೆ ಇಲಾಖೆಯಿಂದ ಮಾಹಿತಿ ಪಡೆದು ಕ್ರಮ ವಹಿಸಬೇಕೆಂದರು.
ಹೊಸನಗರ ತಾಲ್ಲೂಕು ಅಧ್ಯಕ್ಷರು, ಹೊಸನಗರದಲ್ಲಿ ಗ್ಯಾರಂಟಿ ಯೋಜನೆಗಳ ಕುರಿತು ಹೋಬಳಿಮಟ್ಟದಲ್ಲಿ ಸಮಾವೇಶ ಮಾಡುತ್ತಿದ್ದು ಜನರಿಗೆ ಉತ್ತರ ನೀಡಬೇಕಿರುವುದರಿಂದ, ಪಡಿತರ ಚೀಟಿ ಪರಿವರ್ತನೆ ಕುರಿತು ಸ್ಪಷ್ಟನೆ ನೀಡಬೇಕೆಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕ ಕೃಷ್ಣಪ್ಪ ಮಾತನಾಡಿ, ಜಿಲ್ಲೆಯಲ್ಲಿ 385949 ಮಹಿಳೆಯರು ಗೃಹಲಕ್ಷಿö್ಮ ಯೋಜನೆಯಡಿ ನೋಂದಣಿಯಾಗಿದ್ದು, ಶೇ.90 ಮಹಿಳೆಯರು ನೋಂದಣಿಯಾಗಿದ್ದಾರೆ. ಮಾಸಿಕವಾಗಿ ರೂ.76.85 ಕೋಟಿ ಹಣ ಸಂದಾಯವಾಗುತ್ತಿದೆ. ಅಕ್ಟೋಬರ್ ಅಂತ್ಯದವರೆಗೆ ರೂ.2000 ಭತ್ಯೆ ಜಮೆಯಾಗಿದೆ. ಎನ್‌ಪಿಸಿಐ ತಾಂತ್ರಿಕ ತೊಂದರೆಯಿAದ 1755 ಫಲಾನುಭವಿಗಳಿಗೆ ಡಿಬಿಟಿ ಆಗಿರುವುದಿಲ್ಲ. ನಿರಂತರವಾಗಿ ಈ ತಾಂತ್ರಿಕ ದೋಷ ನಿವಾರಣೆ ಮಾಡಲಾಗುತ್ತಿರುತ್ತದೆ ಎಂದು ಮಾಹಿತಿ ನೀಡಿದರು.
ಉದ್ಯೋಗಾಧಿಕಾರಿ ಕಲಂದರ್ ಅವರು ಮಾತನಾಡಿ, ಜಿಲ್ಲೆಯಲ್ಲಿ ಈವರೆಗೆ 4972 ವಿದ್ಯಾರ್ಥಿಗಳಿಗೆ ರೂ.7 ಕೋಟಿ ಭತ್ಯೆ ನೀಡಲಾಗಿದೆ. ಈ ಯೋಜನೆಯಡಿ ನೋಂದಣಿಯಾಗಿರುವ ಅಭ್ಯರ್ಥಿಗಳಿಗೆ ಕೌಶಲ್ಯಾಭಿವೃದ್ದಿ ತರಬೇತಿಯನ್ನು ನೀಡಲಾಗುವುದು ಎಂದರು.
ಇದೇ ವೇಳೆ ಯುವನಿಧಿ ಪೋಸ್ಟರ್ ಮತ್ತು ಬ್ಯಾನರ್‌ನ್ನು ಬಿಡುಗಡೆಗೊಳಿಸಲಾಯಿತು.
ಸಭೆಯಲ್ಲಿ ಗ್ಯಾರಂಟಿ ಅನುಷ್ಟಾನ ಪ್ರಾಧಿಕಾರದ ಜಿಲ್ಲಾ ಉಪಾಧ್ಯಕ್ಷರು, ಸದಸ್ಯರು, ತಾಲ್ಲೂಕು ಸಮಿತಿ ಅಧ್ಯಕ್ಷರು, ಸದಸ್ಯರು, ಜಿ.ಪಂ ಉಪ ಕಾರ್ಯದರ್ಶಿ ಸುಜಾತಾ ಕೆ ಆರ್, ಅಧಿಕಾರಿಗಳು ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...