Ministry of Ayush “ಭಾರತ ಸರ್ಕಾರದ ಆಯುಷ್ ಇಲಾಖೆ ನವೆಂಬರ್ 26 ಸಂವಿಧಾನ ದಿನಾಚರಣೆಯ ದಿನದಿಂದ ಮಾಜಿ ಪ್ರದಾನಿ ವಾಜಪೇಯಿ ಇವರ ಹುಟ್ಟುಹಬ್ಬದ ದಿನಾಂಕ: ಡಿಸೆಂಬರ್ 25ರ ವರೆಗೆ ದೇಶಾದ್ಯಂತ ದೇಶ್ ಕಾ ಪ್ರಕೃತಿ ಪರೀಕ್ಷಾ ಅಭಿಯಾನ್ ಪ್ರಾರಂಭಗೊಂಡಿದೆ, ಇದರಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ಅಭಿಯಾನದ ಕುರಿತು ಮಾಹಿತಿ, ಪ್ರಕೃತಿ ಪರೀಕ್ಷಾ ತಂತ್ರಾಂಶ ಉಪಯೋಗಿಸಿ ನಡೆಸಲಾಗುತ್ತಿದೆ. ಮಾನ್ಯ ರಾಷ್ಟಪತಿಯವರು ಈ ಅಭಿಯಾನವನ್ನು ಉದ್ಘಾಟನೆ ಮಾಡಿದ್ದಾರೆ.
ಎ.ಎಲ್.ಎನ್. ರಾವ್ ಮೆಮೋರಿಯಲ್ ಆಯುರ್ವೇದ ಮಹಾವಿದ್ಯಾಲಯ, ಕೊಪ್ಪ, ಇವರು ಈ ಯೋಜನೆಯನ್ನು ಚಿಕ್ಕಮಂಗಳೂರು ಮತ್ತು ಶಿವಮೊಗ್ಗ ಜಿಲ್ಲೆಯ ಸುಮಾರು 5೦ ಸಾವಿರ ಕಾಲೇಜು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಈ ತಂತ್ರಾಂಶ ಆಧರಿಸಿ ಆಯುರ್ವೇದದ ಮಹತ್ವ, ವಿದ್ಯಾರ್ಥಿಗಳ ದೇಹ ಪ್ರಕೃತಿ ಪರೀಕ್ಷೆ, ಜೀವ ಪದ್ದತಿಗಳ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಜೊತೆಗೆ ಮುಂದಿನ ದಿನಗಳಲ್ಲಿ ಆರೋಗ್ಯವನ್ನು ಹೇಗೆ ಕಾಪಾಡಿಕೊಂಡು ಹೋಗಬೇಕೆಂಬ ದಿನಚರಿಯ ಬಗ್ಗೆ ಪ್ರಮಾಣ ಪತ್ರವೂ ಸಹ ನೀಡಲಾಗುವುದೆಂದು ಡಾ|| ಅಲೋಕನಾಥ್, ಸಹಪ್ರಾಧ್ಯಾಪಕರು, ಎ.ಎಲ್.ಎನ್. ರಾವ್ ಮೆಮೋರಿಯಲ್ ಆಯುರ್ವೇದ ಮಹಾವಿದ್ಯಾಲಯ, ಕೊಪ್ಪ, ಇವರು ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನ ನಡೆಸುತ್ತಿರುವ ಎಲ್ಲಾ ಅಂಗಸಂಸ್ಥೆಗಳಲ್ಲಿ ಈ ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿದರು.
Ministry of Ayush ಎಲ್.ಬಿ. ಮತ್ತು ಎಸ್.ಬಿ.ಎಸ್. ಕಾಲೇಜಿನ ಪ್ರಾಂಶುಪಾಲರಾದ ಡಾ. ಲಕ್ಷ್ಮೀಶ ಎ.ಎಸ್., ಎಂ.ಡಿ.ಎಫ್. ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಶಿಲ್ಪ ವಿ.ಎನ್., ಮತ್ತು ಸಂಸ್ಥೆಯ ಕೋಶಾಧ್ಯಕ್ಷರಾದ ಕವಲಕೋಡು ವೆಂಕಟೇಶ್ ಇವರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಡಾ|| ರಕ್ಷಿತಾ, ಸಹಪ್ರಾಧ್ಯಾಪಕರು, ಎ.ಎಲ್.ಎನ್. ರಾವ್ ಮೆಮೋರಿಯಲ್ ಆಯುರ್ವೇದ ಮಹಾವಿದ್ಯಾಲಯ, ಕೊಪ್ಪ ಮತ್ತು 26ಜನ ಆಯುರ್ವೇದ ಸ್ನಾತಕೋತ್ತರ ವಿದ್ಯಾರ್ಥಿಗಳು ಪಾಲ್ಗೊಂಡು ಎಲ್ಲಾ ವಿದ್ಯಾರ್ಥಿಗಳ ತಪಾಸಣೆ ನಡೆಸಿದರು.